ಚನ್ನರಾಯಪಟ್ಟಣ : ಜಿಲ್ಲಾ ಉಸ್ತುವಾರಿ ಸಚಿವರು ಹೇಮಾವತಿ ನೀರಿಗಾಗಿ ತೆಗೆದುಕೊಂಡಿರುವ ನಿರ್ಣಯ ಖಂಡಿಸಿ ಪಟ್ಟಣದ ಹೇಮಾವತಿ ಕಚೇರಿಗೆ ಮುತ್ತಿಗೆ ಹಾಕಿ ಮಾತನಾಡಿದ ಲೋಕೇಶ್ ನಮ್ಮ ತಾಲೂಕಿನ ಜನರಿಗೆ ಕುಡಿಯುವ ನೀರಿನ ತೊಂದರೆ ಸೃಷ್ಟಿಯಾಗಿದೆ ಹಾಗೂ ಕೆರೆಕಟ್ಟೆಗಳು ಖಾಲಿ ಹಾಗಿದೆ ಇಂತಹ ಸಂದರ್ಭದಲ್ಲಿ ಉಸ್ತುವಾರಿ ಸಚಿವರ ತೀರ್ಮಾನ ಸರಿಯಲ್ಲ ಎಂದರು,

ಅರಳಾಪುರ ಮಂಜೇಗೌಡ ಮಾತನಾಡಿ ನಾಳೆ 12:00 ಗಂಟೆವರೆಗೂ ಸರ್ಕಾರಕ್ಕೆ ಗಡುವು ನೀಡಲಾಗಿದೆ, ಈ ಕೂಡಲೇ ನಮ್ಮ ಜಿಲ್ಲೆಯ ಪರವಾಗಿ ತೀರ್ಮಾನ ಮಾಡದೆ ಹೋದರೆ ಉಗ್ರ ರೂಪದಲ್ಲಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಕೆಂಪೇಗೌಡ ಆನಂದ್ ಮಾತನಾಡಿ ಜಿಲ್ಲಾ ಉಸ್ತುವಾರಿ ಸಚಿವರಾದ ರಾಜಣ್ಣನವರು ಹೇಮಾವತಿ ನೀರಿಗಾಗಿ ತೆಗೆದುಕೊಂಡಿರುವ ನಿರ್ಣಯ ಹಾಸನ ಜಿಲ್ಲೆಯ ರೈತರ ಮರಣ ಶಾಸನವಾಗಿದೆ ಎಂದರು,

ಈ ಕೂಡಲೇ ರಾಜ್ಯ ಸರ್ಕಾರ ಮಧ್ಯಪ್ರದೇಶ ಮಾಡಿ ಹಾಸನ ಜಿಲ್ಲೆಯ ಕೆರೆಕಟ್ಟೆಗಳನ್ನು ತುಂಬಿಸಿ ಆನಂತರ ತುಮಕೂರು ಜಿಲ್ಲೆಗೆ ತೆಗೆದುಕೊಂಡು ಹೋಗಲಿ ಎಂದು ಆಗ್ರಹಿಸಿದರು.

ಇಂದಿನಿಂದ ಆಹೋರಾತ್ರಿ ಧರಣಿಯನ್ನು ನಡೆಸಲಾಗುವುದು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ರೈತ ಸಂಘದ ರಾಜ್ಯ ಅಧ್ಯಕ್ಷರಾದ ಅರಳಾಪುರ ಮಂಜೇಗೌಡ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಚ್ಎನ್ ಲೋಕೇಶ್, ಕೆಂಪೇಗೌಡ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಆನಂದ್ ಕಾಳೆನಹಳ್ಳಿ, ರೈತ ಸಂಘದ ಜಿಲ್ಲಾಧ್ಯಕ್ಷ ಹೊಸಹಳ್ಳಿ ಮೀಸೆ ಮಂಜಣ್ಣ, ಕರ್ನಾಟಕ ರಾಜ್ಯ ರೈತ ಸಂಘದ ಮಹಿಳಾ ಉಪಾಧ್ಯಕ್ಷರಾದ ಪ್ರೇಮಮ್ಮ, ರೈತ ಮುಖಂಡರಾದ ಜೋಗಿಪುರ ಪ್ರಕಾಶ್, ಧಡಿಘಟ್ಟ ಮಂಜಣ್ಣ, ಮಾರೇನಹಳ್ಳಿ ಸೋಮಣ್ಣ, ಬಿಳಿಕೆರೆ ತಿಮ್ಮಪ್ಪಣ್ಣ, ಅರಳಾಪುರ ವಾಸು,ಸೇರಿದಂತೆ ಇತರರು ಹಾಜರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *