
ಬೇಲೂರು : ಪಟ್ಟಣದ ಜೂನಿಯರ್ ಕಾಲೇಜು ಆವರಣದಲ್ಲಿ ಸಮಾಜ ಕಲ್ಯಾಣ ಇಲಾಖೆವತಿಯಿಂದ ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ, ಆದಿ ಜಾಂಭಾವ ಅಭಿವೃದ್ಧಿ ನಿಗಮ, ಮತ್ತು ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ವತಿಯಿಂದ ಅರ್ಹ ಪಲಾನುಭವಿಗಳಿಗೆ ವಿವಿಧ ರೀತಿಯ ಸಲಕರಣೆಗಳನ್ನು ವಿತರಿಸಿ ನಂತರ ಶಾಸಕ ಹೆಚ್ ಕೆ ಸುರೇಶ್ ಮಾತನಾಡಿ
ಸರ್ಕಾರದಿಂದ ಬರುವ ಸವಲತ್ತುಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಅರ್ಹ ಪಲಾನುಭವಿಗಳಿಗೆ ನೇರವಾಗಿ ತಲಾಪುವಂತೆ ಮಾಡುವುದೇ ಅವರ ಮೊದಲ ಕರ್ತವ್ಯ, ಬಡವರು ಮಾಡುವ ಕಸುಬಿನ ಸಲಕರನೆಗಳನ್ನು ಕೊಳ್ಳಲು ಅಸಾಯಕರಾಗಿರುತ್ತಾರೆ ಅಂತವರು ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಪಡೆಯಲು ಅರ್ಜಿಗಳನ್ನು ಹಾಕಿರುತ್ತಾರೆ,
ಅರ್ಜಿ ಹಾಕಿದ ಅರ್ಹ ಬಡಪಲಾನುಭವಿಗಳನ್ನು ಗುರುತಿಸಿ ಅವರಿಗೆ ನೀಡಿದರೆ ಅನುಕೂಲವಾಗುತ್ತದೆ, ಪಲಾನುಭವಿಗಳು ಇದರ ಸದುಪಯೋಗ ಮಾಡಿಕೊಂಡು ಸ್ವಾವಲಂಬಿ ಬದುಕನ್ನು ಕಟ್ಟಿ ಕೊಳ್ಳಬೇಕು ಎಂದರು.
ಜಿಲ್ಲಾ ಅಭಿವೃದ್ಧಿ ಅಧಿಕಾರಿ ಮನುಕುಮಾರ್ ಮಾತನಾಡಿ ತಾಲ್ಲೂಕ್ಕಿನಲ್ಲಿ ಒಟ್ಟು 42 ಜನ ಪಲಾನುಭವಿಗಳಿದ್ದು ಅದರಲ್ಲಿ 29 ಜನರಿಗೆ ಅಂಬೇಡ್ಕರ್ ನಿಗಮ,9 ಆದಿಜಾ0ಭವ,4 ತಾಂಡಾ ಅಭಿವೃದ್ಧಿ ನಿಗಮದಿಂದ ಬೋರ್ವೆಲ್ ಕೊರೆಸಲು ಬೇಕಾಗುವ ಸಲಕರಣೆ, ಮೀನುಗಾರಿಕೆಗೆ ಇಲಾಖೆಯಿಂದ 2023/24 ನೇ ಸಾಲಿನಲ್ಲಿ 18 ಜನಕ್ಕೆ ಮೀನಿನ ಬಲೆ, ತೆಪ್ಪ, ಇನ್ನೂ ಮುಂತಾದ ಪರಿಕರಗಳನ್ನು ಶಾಸಕರ ಸಮ್ಮುಖದಲ್ಲಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ನಿರ್ದೇಶಕ ಗಣೇಶ್ ರವಿ ಪಲಾನುಭವಿಗಳು ಇತರರು ಇದ್ದರು
