
ಗಾಂಧಿ ವೃತದ ರಾಯರ ರಂಗಮಂದಿರದಲ್ಲಿ ವೈಭವದಿಂದ ಶ್ರೀ ರಾಘವೇಂದ್ರ ಸ್ವಾಮಿಗಳವರ ಗುರು ವೈಭವೋತ್ಸವ
ಚನ್ನರಾಯಪಟ್ಟಣ: ಗಾಂಧಿ ಸರ್ಕಲ್ ನಲ್ಲಿರುವ ರಾಯರ ರಂಗಮಂದಿರದಲ್ಲಿ ಮಾರ್ಚ್ 16ರಂದು ಶ್ರೀ ಗುರು ರಾಘವೇಂದ್ರ ಸ್ವಾಮಿರವರ ವರ್ದಂತಿ ಹುಟ್ಟು ಹಬ್ಬದ ಸಂಭ್ರಮದ ಅಂಗವಾಗಿ ಬೆಳಗಿನ ಜಾವ 6:00 ಪಂಚಾಮೃತ ಅಭಿಷೇಕ ನೂತನ ಮಂಟಪ ಮತ್ತು ಉಯ್ಯಾಲೆ ಹಾಗೂ ಓಂ ಶ್ರೀ ರಾಘವೇಂದ್ರಾಯ ನಮಃ ಎಂದು ಬರೆದಿರುವ ಒಂದು ಸಾವಿರ ಜನ ಭಕ್ತರು ಪುಸ್ತಕ ಭಂಡಾರ ಪೂಜೆ ಮಧ್ಯಾಹ್ನ ಒಂದು ಗಂಟೆಗೆ ಮಹಾಮಂಗಳಾರತಿ ಮತ್ತು ಅನ್ನಪ್ರಸಾದ ವಿನಿಯೋಗ ಕಾರ್ಯಕ್ರಮಗಳು ಇರುತ್ತದೆ ಹಾಗೂ ಸಾವಿರಾರು ಜನರು ಭಕ್ತ ಸಮೂಹ ಭಾಗವಹಿಸುವ ನಿರೀಕ್ಷೆ ಎಂದು ರಾಯರಂಗ ಮಂದಿರದ ನಿರ್ದೇಶಕಿ ಡಾ. ಸ್ವಾತಿ ಪಿ ಭಾರದ್ವಾಜ್ ತಿಳಿಸಿದರು
ರಾಘವೇಂದ್ರ ಮುಖ್ಯಸ್ಥ ಪ್ರಕಾಶ್ ಮಾತನಾಡಿ ಭೂಲೋಕದ ಮನಕುಲಕ್ಕಾಗಿ 700 ವರ್ಷಗಳ ಕಾಲ ಮಂತ್ರಾಲಯದ ಬೃಂದಾವನದಲ್ಲಿ ಇರುವ ಗುರುಸಾರ್ವಭೌಮ ಶ್ರೀ ರಾಘವೇಂದ್ರ ಸ್ವಾಮಿಗಳ ವರ್ಧಂತಿ ಉತ್ಸವದ ಹಿನ್ನೆಲೆಯಲ್ಲಿ ಬೆಳಗ್ಗೆ ಅರಸೀಕೆರೆ ಹೊಳೆನರಸೀಪುರ ಚನ್ನರಾಯಪಟ್ಟಣ ಮಹಿಳಾ ಭಜನಾ ಮಂಡಳಿ ಅವರಿಂದ ಭಜನೆ ಕಾರ್ಯಕ್ರಮ
ಸಂಜೆ 4 ಗಂಟೆಯಿಂದ ಸ್ಥಳೀಯ ಸಂಗೀತ ಕಲಾವಿದರಿಂದ ದಾಸವಾಣಿ ಕಾರ್ಯಕ್ರಮ ಸಂಜೆ 6 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ವಿದುಷಿ ರಶ್ಮಿ ತಂಡ ಚಿಕ್ಕಮಗಳೂರು ಚಲನಚಿತ್ರ ಹಿನ್ನೆಲೆ ಗಾಯಕರು ಪ್ರಾಧ್ಯಾಪಕರು ಲಲಿತಕಲಾ ವಿಶ್ವವಿದ್ಯಾಲಯ ಮೈಸೂರು ಇವರಿಂದ ವಿಶೇಷ ದಾಸವಾಣಿ ಕಾರ್ಯಕ್ರಮ ನಡೆಯಲಿದೆ
ನಂತರ ದೀಪೋತ್ಸವ ಕಾರ್ಯಕ್ರಮವಿರುತ್ತದೆ ಹಾಗೂ ಬೆಳಗ್ಗೆಯಿಂದ ರಾತ್ರಿವರೆಗೆ ಬಂದಂತಹ ಎಲ್ಲ ಭಕ್ತರಿಗೂ ಸಹ ಅನ್ನಪ್ರಸಾದ ವಿನಿಯೋಗ ವಿರುತ್ತದೆ ಎಂದು ತಿಳಿಸಿದರು




