ಹಾಸನ: ಸರಕಾರವು ಕೂಡಲೇ ಕೃಷಿ ಭೂಮಿಯ ರೈತರನ್ನು ಹಾಗೂ ಅತಿಸಣ್ಣ ಬಡವರನ್ನು ರಕ್ಷಣೆ ಮಾಡಬೇಕು ಹಾಗೂ ರೈತರ ೪೦ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿಶ್ವ ರೈತ ನಾಯಕ ಪ್ರೊಫೆಷರ್ ಎಂ.ಡಿ. ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯಿಂದ ಪಾದಯಾತ್ರೆ ಮೂಲಕ ಹಾಸನ ನಗರಕ್ಕೆ ಬಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಎಂ.ಡಿ. ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಸಂಚಾಲಕ ಕೆ.ಹೆಚ್.ಎಸ್. ಪ್ರಸನ್ನಕುಮಾರ್ ಮಾತನಾಡಿ, ಇದೆ ವೇಳೆ ಕರ್ನಾಟಕ ರಾಜ್ಯ ಹಾಸನ ಜಿಲ್ಲೆ ಬೇಲೂರು ತಾಲ್ಲೂಕು ಹಳೇಬೀಡು ಹೋಬಳಿ (ಐದಳ್ಳ ಕಾವಲು-೧), (ಸರ್ವೇ ನಂ.೧) (೨೫೮೦ ಎಕರೆ) ಸರ್ಕಾರಿ ಕೃಷಿ ಬಗರ್ ಹುಕ್ಕುಂ ಭೂಮಿಯನ್ನು ರೈತರಿಗೆ ಮಂಜೂರಾತಿ ಹಾಗೂ ಆದೇಶ ಪತ್ರ ಹಾಗೂ ಸರ್ವೇ ಹಾಗೂ ಎಲ್ಲಾ ದಾಖಲೆಗಳನ್ನು ನೀಡುವಂತೆ ಆದೇಶ ಮಡಬೇಕು. ರೈತರಿಗೆ ಕೃಷಿ ಭೂಮಿಗೆ ಅವಶ್ಯಕತೆ ಇರುವ ರಸಗೊಬ್ಬರವನ್ನು ಕಡಿಮೆ ಬೆಲೆಯಲ್ಲಿ ನೀಡುವಂತೆ ಅದೇಶ ಮಾಡಬೇಕಾಗಿ ಮನವಿ.

ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರೈತರಿಗೆ ಬೆಳೆದಂತ ಬೆಳೆಗಳಿಗೆ ಬೆಲೆಯಲ್ಲಿ ನೀಡಬೇಕು. ಕರ್ನಾಟಕ ರಾಜ್ಯ ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕು, ಕಸಬಾ ಹೊಬಳಿ, ಕನಕಂಚೇನಹಳ್ಳಿ ಶ್ರೀ ರಂಗನಾಥ ಸ್ವಾಮಿ ಪ್ರಸನ್ನ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಅರಸೀಕೆರೆ ಮಹಾತ್ಮ ಗಾಂಧೀಜಿ ಸ್ಮಾರಕಕ್ಕೆ ಪೂಜೆ ಸಲ್ಲಿಸಿ ಪಾದಯಾತ್ರೆ ಚಲೋ ಕಾರ್ಯಕ್ರಮ ಪ್ರಾರಂಭ ಮಾಡಿದ್ದೇವೆ ಎಂದರು.

ರಾಷ್ಟ್ರೀಯ ಮಹತ್ವವಾದ ಬೃಹತ್ ರೈತರ ಕೃಷಿ ಭೂಮಿ ಉಳುಮಗೆ ರಾಜ್ಯದಲ್ಲಿ ರೈತರು ಕೃಷಿ ಉಳುಮೆಯನ್ನು ಅವರ ವಂಶಪರಂಪರೆಯಿಂದ ಭೂಮಿಯನ್ನ ನಂಬಿಕೊಂಡು ಅವರ ಕುಂಟುಂಬ ರಕ್ಷಣೆಯನ್ನು ಮಾಡಿದ್ದು, ಹಾಗೇಯೇ ದೇಶಕ್ಕೆ ಸಾಕಷ್ಟು ಅನ್ನದ ಮಾರ್ಗವನ್ನು ಮಾಡಿರುವುದು ಭೂಮಿ ಪುತ್ರ ಎಂದು ಹೆಸರಾದ ಈ ಪ್ರಪಂಚದ ಮೊದಲನೇ ದೇವರು ರೈತ ರೈತನಿಗೆ ಯಾವುದೇ ತರದ ಸಂಕಟ ಬರಬಾರದು.

ರೈತರ ಕೃಷಿ ಭೂಮಿಗೆ ಯಾವುದೇ ತೊಂದರೆಯಾಗದಂತೆ ರಕ್ಷಣೆ ಮಾಡಬೇಕು. ಮಳೆಯಿಂದ ರೈತರ ಬೆಳೆಗಳು ಈಗಾಗಲೆ ಸಂಪೂರ್ಣವಾಗಿ ನಾಶವಾಗಿದ್ದು, ಕೂಡಲೇ ಪರಿಹಾರ ಕಲ್ಪಿಸಬೇಕು ಮತ್ತು ಉಚಿತ ವಿದ್ಯುತ್ ನೀಡಬೇಕು ಎಂದು ಒತ್ತಾಯಿಸಿದರು.

ಬೆಳೆದ ಬೆಳೆಯನ್ನು ಕೃಷಿ ಉತ್ಪನ್ನ ಮಾರುಕಟ್ಟೆಗೆ ಕೊಂಡೂಯ್ಯಲು ರಸ್ತೆ ಮಾಡಕೊಡಬೇಕು. ಕೃಷಿ ಭೂಮಿಯ ಸರ್ವೆ ಮಾಡುವುದು ಉಚಿತವಾಗಬೇಕು ಸೇರಿದಂತೆ ಒಟ್ಟು ೪೦ ಬೇಡಿಕೆಗಳನ್ನು ಸರಕಾರದ ಮುಂದೆ ಇಟ್ಟು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಈಗಾಗಲೇ ಕರ್ನಾಟಕ ರಾಜ್ಯದ ಪ್ರಧಾನ ಕಂದಾಯ ಭೂ ದಾಖಲೆಯ ಸರ್ವೆ ಅಧಿಕಾರಿ ದಿನಾಂಕ: ೨೩-೦೮- ೨೦೨೩ ರಂದು ಮಾಡಿ ರೈತರಿಗೆ ತೊಂದರೆಯಾಗದಂತೆ ರಕ್ಷಣೆ ಮಾಡಬೇಕೆಂದು ಎಲ್ಲ ರೈತರ ಪರವಾಗಿ ಮನವಿಪತ್ರವನ್ನು ಸಲ್ಲಿಸಲಾಗಿದೆ. ಸರ್ಕಾರ ಕೂಡಲೇ ಕೃಷಿ ಭೂಮಿಯ ರೈತರನ್ನು ಹಾಗೂ ಅತಿಸಣ್ಣ ಬಡವರನ್ನು ಸೂಕ್ತವಾಗಿ ರಕ್ಷಣೆ ಮಾಡಬೇಕಾಗಿ ತಮ್ಮಲ್ಲಿ ಕಳಕಳಿಯ ಪ್ರಾರ್ಥನೆ ಮಾಡುವುದಾಗಿ ಹೇಳಿದರು.

ಪ್ರತಿಭಟನೆಯಲ್ಲಿ ನಂಜಮ್ಮ, ಅಭಿಷೇಕ್, ಹೆಚ್.ಆರ್.ಬೋಜರಾಜ್ ತೇಜಸ್, ಅಬ್ದೂಲ್, ಏಜಾಜ್ ಪಾಷ, ಅಯ್ಯುಬ್ ಪಾಷ, ಶಶಿಕುಮಾರ್, ಹನುಮಂತು ಇತರರು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *