ಬೇಲೂರು : ಮಾರ್ಚ.೧೫“ಬೇಲೂರಿನಲ್ಲಿ ಕೈ ಅಭ್ಯರ್ಥಿ ಶ್ರೇಯಸ್ ಪಟೇಲ್ ಮಿಂಚಿನ ಸಂಚಾರ”

ಹಾಸನ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಕಣಕ್ಕೆ ಇಳಿದಿರುವ ಮಾಜಿ ಸಚಿವ ಮತ್ತು ಪುಟ್ಟಸ್ವಾಮಿಗೌಡರ ಮೊಮ್ಮಗ ಶ್ರೆಯಸ್ ಪಟೇಲ್ ಇಂದು ಬೇಲೂರಿಗೆ ಭೇಟಿ ನೀಡಿ, ಐತಿಹಾಸಿಕ ಪ್ರಸಿದ್ದ ಚನ್ನಕೇಶವಸ್ವಾಮಿಯ ದರ್ಶನ ಪಡೆದು ಬಳಿಕ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿ ಕೆಲ ಮುಖಂಡ ಮನೆಗಳಿಗೆ ತೆರಳಿ ಚುನಾವಣೆ ರಣತಂತ್ರಗಾರಿಕೆ ಬಗ್ಗೆ ಚರ್ಚೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಹಾಸನ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್, ನಮ್ಮ ತಾತನವರ ಆಡಳಿತ ವೈಖರಿ ಮತ್ತು ಅವರು ಕ್ಷೇತ್ರಕ್ಕೆ ನೀಡಿದ ಜನಪರ ಮತ್ತು ಸಮಾಜಮುಖಿ ಆಡಳಿತ ಹಾಗೂ ಕಾಂಗ್ರೆಸ್ ಸರ್ಕಾರ ಐದು ಗ್ಯಾರೆಂಟಿ ಯೋಜನೆಗಳು ಹಾಸನ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಕ್ಕೆ ಮುನ್ನುಡಿ ಬರೆಯುತ್ತವೆ. ನಾವುಗಳು ನೊಂದಿದ್ದು, ತಾವುಗಳು ದೊಡ್ಡ ಮನಸ್ಸು ಮಾಡಿ ನಮಗೆ ಆರ್ಶೀವಾದ ಮಾಡಬೇಕು ಎಂದು ಮನವಿ ಮಾಡಿದ ಅವರು ಹೊಳೆನರಸೀಪುರದ ಜೆಡಿಎಸ್ ಕುಟುಂಬಕ್ಕೆ ಪ್ರಧಾನಿ, ಮುಖ್ಯಮಂತ್ರಿ, ಮಂತ್ರಿ, ಶಾಸಕರು, ಲೋಕಸಭಾ ಸದಸ್ಯ, ವಿಧಾನಪ ಪರಿಷತ್ತು ಸದಸ್ಯ ಎಲ್ಲಾ ಹುದ್ದೆಗಳನ್ನು ನೀಡಿದ್ದರೀ, ಅಂತಯೇ ಈ ಭಾರಿ ನಮಗೆ ನಿಮ್ಮ ಆರ್ಶೀವಾದ ನಮಗಿರಲಿ, ಜಿಲ್ಲಾಧ್ಯಕ್ಷರಾದ ಇ.ಹೆಚ್.ಲಕ್ಷ್ಮಣ್, ಬಿ.ಶಿವರಾಂ, ಗ್ರಾನೈಟ್ ರಾಜಶೇಖರ್, ಬಿ.ಎಲ್.ಧರ್ಮೇಗೌಡ ಇನ್ನು ಹತ್ತಾರು ಮುಖಂಡರ ಒಮ್ಮತ ಅಭಿಪ್ರಾಯದಿಂದ ಚುಣಾವಣೆಯಲ್ಲಿ ಜಯ ಪಡೆಯುವ ಬಗ್ಗೆ ತಿಳಿಸಿದರು.

ಹಾಸನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಇ.ಹೆಚ್.ಲಕ್ಷö್ಮಣ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮತ್ತು ಉಪಮುಖ್ಯಮಂತ್ರಿ ಹಾಗೂ ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರು ಹಾಸನ ಕ್ಷೇತ್ರಕ್ಕೆ ಪ್ರಭಲ ಅಭ್ಯರ್ಥಿಯನ್ನು ನೀಡಿದ್ದಾರೆ. ಕಾರಣ ಯುವಕರಿಗೆ ಅಧ್ಯತೆ ಜೊತೆಗೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ. ಕಾಂಗ್ರೆಸ್ ಗೆಲುವು ಶತಸಿದ್ದವೆಂದರು.

ಕಾಂಗ್ರೆಸ್ ಮುಖಂಡ ಗ್ರಾನೈಟ್ ರಾಜಶೇಖರ್ ಮಾತನಾಡಿ, ಕಳೆದ ೨೦ ವರ್ಷ ಇತಿಹಾಸ ಜಿಲ್ಲೆಯಲ್ಲಿ ಮರುಕಳಿಸುವುದು ಸತ್ಯವಾಗಿದೆ. ಕಾರಣ ಪುಟ್ಟಸ್ವಾಮೀಗೌಡರು ಎಲ್ಲಾ ಜಾತಿ,ಧರ್ಮ,ವರ್ಗದೊಂದಿಗೆ ಇಟ್ಟ ಅಭಿಮಾನ ಮೊಮ್ಮಗ ಶ್ರೇಯಶ್ ಪಟೇಲ್ ಅವರಿಗೆ ಶ್ರೇರಕ್ಷೆಯಾಗಲಿದೆ. ನಾವುಗಳು ಒಟ್ಟಾಗಿ ಕೂಡಿ ಕಾಂಗ್ರೆಸ್ ಭಾವುಟವನ್ನು ಹಾಸನ ಲೋಕಸಭಾ ಕ್ಷೇತ್ರದಲ್ಲಿ ಹಾರಿಸಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಜೆ.ನಿಶಾಂತ್, ಕಾಂಗ್ರೆಸ್ ಬಿ.ಎಲ್.ಧರ್ಮೇಗೌಡ, ಗ್ರಾನೈಟ್ ರಾಜಶೇಖರ್, ಜಮಾಲ್ಲುದ್ಧಿನ್, ರತ್ಮಸತ್ಯನಾರಾಯಣ್, ಜಾಕೀರ್ ಪಾಷ, ಚಿಕ್ಕಬ್ಯಾಡಿಗೆರೆ ಮಂಜುನಾಥ್, ಇಕ್ಬಾಲ್, ರಾಯಪುರ ಶಿವಣ್ಣ, ಕುಮಾರ್ ಇನ್ನು ಮುಂತಾದವರು ಹಾಜರಿದ್ದರು.

ಬಾಕ್ಸ್ ನ್ಯೂಸ್ : ಹಾಸನ ಲೋಕಸಭಾ ಕ್ಷೇತ್ರಕ್ಕೆ ಸಿದ್ದರಾಮಯ್ಯನವರು ಉತ್ತಮ ಅಭ್ಯರ್ಥಿ ಶ್ರೇಯಸ್ ಪಟೇಲ್ ರವರನ್ನು ನೀಡಿದ್ದಾರೆ. ಅವರ ತಾತಾ ಪುಟ್ಟಸ್ವಾಮಿಗೌಡ ಜನಪರ ಆಡಳಿತದ ವೈಖರಿ ಇನ್ನು ಮಾಸಿಲ್ಲ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸುಮಾರು ೨ ಲಕ್ಷದ ಬಹುಮತದಿಂದ ಶ್ರೇಯಸ್ ಪಟೇಲ್ ಗೆಲುವು ನಿಶ್ಚಿತಾ ಎಂದು ಕೆಪಿಸಿಸಿ ಸದಸ್ಯ.ಧರ್ಮೇಗೌಡ ಹೇಳಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *