
ಹಾಸನ: ನಗರದ ರಿಂಗ್ ರಸ್ತೆ ಬಳಿ ಇರುವ ಕ್ಷೇತ್ರದ ಶಾಸಕರಾದ ಹೆಚ್.ಪಿ. ಸ್ವರೂಪ್ ನಿವಾಸದಲ್ಲಿ ಶುಕ್ರವಾರ ಬೆಳಿಗ್ಗೆ ಹಾಸನ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಗೆ ಸೇರುವ ಉಗನೆ ಗ್ರಾಮ ಪಂಚಾಯಿತಿ ದೊಡ್ಡಗದವಳ್ಳಿ ೧೫ ಜನ ಫಲಾನುಭವಿ ಗ್ರಾಮಸ್ಥರಿಗೆ ಸಾಗುವಳಿ ಚಿಟಿ ವಿತರಿಸಿದರು.
ದೊಡ್ಡಗದವಳ್ಳಿಯ ೧೫ ಜನ ಗ್ರಾಮಸ್ಥರಿಗೆ ಅನೇಕ ದಿನಗಳಿಂದ ಸಾಗುವಳಿ ಚೀಟಿ ಸಿಗದೆ ತೊಂದರೆ ಅನುಭವಿಸುತ್ತಿದ್ದರು.
ಈ ಬಗ್ಗೆ ನನಗೆ ದೂರು ಬಂದ ಹಿನ್ನಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ ಸಾಗುವಳಿ ಚೀಟಿ ನೀಡಿರುವುದಾಗಿ ಇದೆ ವೇಳೆ ಮಾಧ್ಯಮಕ್ಕೆ ಮಾಹಿತಿ ನೀಡಿದರು.
ಇದೆ ವೇಳೆ ಜೆಡಿಎಸ್ ಮುಖಂಡರು, ಗ್ರಾಮಸ್ಥರು, ಅಧಿಕಾರಿಗಳು ಉಪಸ್ಥಿತರಿದ್ದರು.
