ಹಾಸನ: ಒಳಚರಂಡಿ ಹಾಗೂ ಮೇಲ್ ಚರಂಡಿಗಳ ಕಾಮಗಾರಿ ಮಾಡಿಕೊಡುವಂತೆ ಆಗ್ರಹಿಸಿ ಪೂರ್ಣಚಂದ್ರ ರಸ್ತೆ ನಿವಾಸಿಗಳು ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಬಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ನಂತರ ನಿವಾಸಿಗಳು ಮಾಧ್ಯಮದೊಂದಿಗೆ ಮಾತನಾಡಿ, ನಾವುಗಳು ಸುಮಾರು ೧೫ ರಿಂದ ೨೦ ವರ್ಷಗಳಿಂದ ಚನ್ನರಾಯಪಟ್ಟಣದ ಕುವೆಂಪು ನಗರ, ಪೂರ್ಣಚಂದ್ರ ರಸ್ತೆ ಇಲ್ಲಿ ವಾಸ ಮಾಡುತ್ತಿದ್ದು, ನಮ್ಮ ರಸ್ತೆಯಲ್ಲಿ ಒಳಚರಂಡಿ ಮತ್ತು ಮೇಲ್ ಚರಂಡಿಗಳಿದ್ದು, ಅಸಮರ್ಪಕ ಕಾಮಗಾರಿಯಿಂದ ನಮಗೆಲ್ಲಾ ತುಂಬ ಸಮಸ್ಯೆ ಆಗಿದೆ ಎಂದರು.

ಮಳೆಗಾಲ ಬಂತು ಎಂದರೇ ಒಳಚರಂಡಿ ತುಂಬಿಕೊಂಡು ಮನೆ ಒಳಗೆ ನೀರು ನುಗ್ಗುವುದರಿಂದ ಆ ವೇಳೆ ನಾವುಗಳು ನರಕಯಾತನೆ ಅನುವಿಸಬೇಕು. ಈ ಬಗ್ಗೆ ಪುರಸಭೆಗೆ ಅನೇಕ ಬಾರಿ ಹಾಗೂ ಕ್ಷೇತ್ರದ ಶಾಸಕರಿಗೆ ಮತ್ತು ಹಿಂದೆ ಇದ್ದ ಜಿಲ್ಲಾಧಿಕಾರಿಗಳಿಗೆ ದೂರು ಕೊಡಲಾಗಿದ್ದರೂ ಇದುವರೆಗೂ ಗಮನ ನೀಡದೇ ಯಾವ ಪ್ರಯೋಜನವಾಗಿರುವುದಿಲ್ಲ ಎಂದು ದೂರಿದರು. ಕೂಡಲೇ ನಮ್ಮ ನ್ಯಾಯಯುತವಾದ ಬೇಡಿಕೆಗೆ ಸ್ಪಂದಿಸಿ ನಮ್ಮ ರಸ್ತೆಯಲ್ಲಿರುವ ಒಳಚರಂಡಿ ಮತ್ತು ಮೇಲ್ ಚರಂಡಿಗಳ ಕಾಮಗಾರಿಗಳನ್ನು ಸಂಪೂರ್ಣವಾಗಿ ಮಾಡಿಕೊಡುವಂತೆ ಕೋರಿದರು.

ಇದೆ ವೇಳೆ ನಿವಾಸಿಗಳಾದ ಭಾನುಮತಿ, ನಿವೃತ್ತ ಪೊಲೀಸ್ ಅಧಿಕಾರಿ ಎನ್.ಟಿ. ರಂಗೇಗೌಡ, ಕೆ.ಎಸ್. ಶೋಭಾ, ಸರಸ್ವತಿ, ನಟರಾಜು, ನೇತ್ರಾವತಿ, ಮಂಜೂಳಾ ಶಿವರಾಜ್, ಚೈತ್ರಾ ಇತರರು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *