
ಚನ್ನರಾಯಪಟ್ಟಣ: ಗಾಂಧಿ ಸರ್ಕಲ್ ನಲ್ಲಿರುವ ರಾಯರ ರಂಗಮಂದಿರದಲ್ಲಿ ಮಾರ್ಚ್ 16ರಂದು ಮಂತ್ರಾಲಯದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶ್ರೀ ಡಾ.ಸುಭುದೇಂದ್ರ ತೀರ್ಥ ಶ್ರೀಪಾದಂಗಳವರ ಆಶೀರ್ವಾದದೊಂದಿಗೆ ಶ್ರೀ ಗುರು ರಾಘವೇಂದ್ರ ಸ್ವಾಮಿರವರ ವರ್ದಂತಿ ಹುಟ್ಟು ಹಬ್ಬದ ಸಂಭ್ರಮದ ಅಂಗವಾಗಿ ಬೆಳಗಿನ ಜಾವ 6:00 ಗಂಟೆಯಿಂದ ಪಂಚಾಮೃತ ಅಭಿಷೇಕ ದೊಂದಿಗೆ ಪ್ರಾರಂಭವಾದ ಧಾರ್ಮಿಕ ಕಾರ್ಯಕ್ರಮ ರಾತ್ರಿ 10:00 ಗಂಟೆಗೆ ದೀಪೋತ್ಸವದೊಂದಿಗೆ ಸಂಪನ್ನಗೊಂಡ ಶ್ರೀ ಗುರು ವೈಭವೋತ್ಸವ ಕಾರ್ಯಕ್ರಮ ಜರುಗಿತು,
ಲಿಮ್ಕಾ ದಾಖಲೆ ಕಲಾವಿದರಾದ ಸಿ ಎಂ ರವೀಂದ್ರರವರ ಕೈಚಳಕದಲ್ಲಿ ನಿರ್ಮಾಣಗೊಂಡ ಹೆಬ್ಬಾಗಿಲು ಅಲಂಕಾರ ಸರ್ವ ಭಕ್ತಾದಿಗಳ ಕಣ್ಮನ ಸೆಳೆಯಿತು ಹಾಗೂ ವೆಂಕಟೇಶ್ ಮಾಲೀಕತ್ವದ ಶ್ರೀ ರಾಘವೇಂದ್ರ ಧ್ವನಿವರ್ದಕ ಹಾಗೂ ವಿದ್ಯುತ್ ದೀಪ ಅಲಂಕಾರ ಭಕ್ತರ ಮನಸೆಳೆಯಿತು,
ಬೆಳಿಗ್ಗೆ ಮತ್ತು ಮಧ್ಯಾಹ್ನ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹೊಳೆನರಸೀಪುರದ ಕುರುಹಿನಶೆಟ್ಟಿ ಮಹಿಳಾ ಭಜನಾ ಮಂಡಳಿ, ಅರಸೀಕೆರೆಯ ಸೀತಾರಾಮ ಮಹಿಳಾ ಭಜನಾ ಮಂಡಳಿ, ಚನ್ನರಾಯಪಟ್ಟಣದ ಓಂಕಾರೇಶ್ವರ ಭಜನಾ ಮಂಡಳಿ, ಬಲಮುರಿ ಗಣಪತಿ ಮಹಿಳಾ ಭಜನಾ ಮಂಡಳಿ ವತಿಯಿಂದ ನಿರಂತರವಾಗಿ ಭಜನಾ ಕಾರ್ಯಕ್ರಮ, ಸಂಜೆ ಸಾಂಸ್ಕೃತಿ ಕಾರ್ಯಕ್ರಮ ಮಂಜುನಾಥ್ ಮತ್ತು ತಂಡದವರಿಂದ ಮಂಗಳವಾದ್ಯ, ಚನ್ನರಾಯಪಟ್ಟಣದ ಶ್ರೀನಿವಾಸ್ ಮತ್ತು ತಂಡವರಿಂದ ಸಂಗೀತ ಕಾರ್ಯಕ್ರಮ, ರಾತ್ರಿ ಕಾರ್ಯಕ್ರಮ ಮೈಸೂರಿನ ವಿದುಷಿ ರಶ್ಮಿ ಮತ್ತು ತಂಡದ ವತಿಯಿಂದ ನಡೆದ ದಾಸವಾಣಿ ಕಾರ್ಯಕ್ರಮ ಮನೋಹರವಾಗಿತ್ತು,
ನಂತರ ರಾತ್ರಿ ದೀಪೋತ್ಸವ ಕಾರ್ಯಕ್ರಮಕ್ಕೆ ಸಾವಿರಾರು ಭಕ್ತಾದಿಗಳು ಭಾಗವಹಿಸಿದ್ದರು ಗುರು ರಾಘವೇಂದ್ರ ಸ್ವಾಮಿಗಳ ಹುಟ್ಟು ಹಬ್ಬಕ್ಕೆ ಬಂದಂತಹ ಎಲ್ಲಾ ಭಕ್ತರಿಗೆ ಮಂತ್ರಾಲಯದ ಪರಿಮಳ ಪ್ರಸಾದವನ್ನು ಹಾಗೂ ಸರ್ವ ಭಕ್ತಾದಿಗಳಿಗೆ ಅನ್ನ ಸಮರ್ಪಣೆ ಮಾಡಲಾಯಿತು.
ಸಾಂಸ್ಕೃತಿಕ ಕಾರ್ಯಕ್ರಮ ನೀಡಿದ ಎಲ್ಲಾ ಕಲಾವಿದರಿಗೆ ರಾಯರ ಆಶೀರ್ವಾದ ಪತ್ರ ನೀಡಿ ಅಭಿನಂದಿಸಲಾಯಿತು,
ಇದೇ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾದ ಶ್ರೀಮತಿ ರಾಜೇಶ್ವರಿ ವಿಜಯಕುಮಾರ್,ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಶ್ರೀಮತಿ ಶ್ವೇತ ಆನಂದ್ ಕುಮಾರ್,ತಾಲೂಕು ಪಂಚಾಯಿತಿ ಕಾರ್ಯನಿರ್ವಣಾಧಿಕಾರಿ ಶ್ರೀಮತಿ ಬಿ ಸವಿತಾ ಜಿ.ಆರ್ ಹರೀಶ್,ಪೋಲಿಸ್ ವೃತ್ತ ನಿರೀಕ್ಷಕರಾದ ರಘುಪತಿ, ಉದ್ಯಮಿಗಳಾದ ಶ್ರೀಮತಿ ಸುಪ್ರೀತಾ ಶಿವನಂಜೇಗೌಡ, ಶ್ರೀಮತಿ ಅಹಲ್ಯ ಶ್ರೀಕಂಠ ಮೂರ್ತಿ, ಶ್ರೀಮತಿ ಶೋಭಾ ಅಶ್ವಥ ನಾರಾಯಣಗೌಡ, ರಾಯರ ರಂಗಮಂದಿರದ ಮುಖ್ಯಸ್ಥರಾದ ಶ್ರೀಮತಿ ಕೆ ಆರ್ ಅನಿತಾ, ಎಂ ಕೆ ಪ್ರಕಾಶ್, ಪುರಸಭಾ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ಸಿಎನ್ ಶಶಿಧರ್, ಶ್ರೀಮತಿ ಭಾಗ್ಯಮ್ಮ ನಾಗರಾಜ್, ಪುರಸಭಾ ಸದಸ್ಯರಾದ ಶ್ರೀಮತಿ ಲಕ್ಷ್ಮಿ,ಭಾರತೀಯ ಸ್ಟೇಟ್ ಬ್ಯಾಂಕ್ ವ್ಯವಸ್ಥಾಪಕರಾದ ಹರೀಶ್,ಆಕ್ಸಿಸ್ ಬ್ಯಾಂಕ್ ವ್ಯವಸ್ಥಾಪಕರಾದ ಸುಧೀಂದ್ರ,ಸಮಾಜ ಸೇವಕರಾದ ಶ್ರೀಮತಿ ಲಕ್ಷ್ಮಿ ರಮೇಶ್, ಶ್ರೀಮತಿ ಮಮತಾ ಸಣ್ಣಪ್ಪ,ನಾಗೇಶ್, ಶ್ರೀಮತಿ ನಾಗರತ್ನ ಜಗದೀಶ್, ಶ್ರೀಮತಿ ರಕ್ಷಿತಾ ಜಯಂತ್,ರೈತ ಸಂಘದ ರಾಜ್ಯಾಧ್ಯಕ್ಷರಾದ ಅರಳಾಪುರ ಮಂಜೇಗೌಡ, ಪರಿಸರ ಪ್ರೇಮಿಗಳಾದ ಸಿ ಎನ್ ಅಶೋಕ್, ಕಲಾವಿದರಾದ ಶ್ರೀಮತಿ ಶೈಲಜಾ ರವೀಂದ್ರ, ಶ್ರೀಮತಿ ಮೀನಾ ವೆಂಕಟೇಶ್,ಪುರಸಭೆ ಕಂದಾಯ ಅಧಿಕಾರಿಗಳಾದ ಶ್ರೀಮತಿ ಬಿಂದು ಮಂಜುನಾಥ್, ರಾಯರ ರಂಗ ಮಂದಿರದ ಅರ್ಚಕರುಗಳಾದ ಕೆಂಬಾಳು ಪಣೀಶ್, ಮತಿಗಟ್ಟ ರವಿ, ಸೋಮಶೇಖರ್, ಸೇರಿದಂತೆ ಇತರರು ಹಾಜರಿದ್ದರು.





