
ಚನ್ನರಾಯಪಟ್ಟಣ: ಪಟ್ಟಣದ ಡಾ. ಪುನೀತ್ ರಾಜಕುಮಾರ್ ಉದ್ಯಾನವನದಲ್ಲಿ49ನೇ ವರ್ಷದ ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬವನ್ನು ಆಚರಿಸಲಾಯಿತು.
ಡಾಕ್ಟರ್ ರಾಜಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ಕೇಕ್ ಕತ್ತರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಸಂಘದ ಅಧ್ಯಕ್ಷ ಪುಟ್ಟಣ್ಣ ಗೋಕಾಕ್ ಮಾತನಾಡಿ ಪುನೀತ್ ರಾಜಕುಮಾರ್ ರವರ ಸರಳತೆ ಎಲ್ಲರಿಗೂ ಆದರ್ಶ ಪ್ರಿಯವಾಗಿದ್ದು ಅವರು ಸಮಾಜಕ್ಕೆ ನೀಡಿದ ಕೊಡುಗೆ ಮಹತ್ವದ ಆಗಿದೆ. ಅನಾಥಾಶ್ರಮ ವೃದ್ಧಾಶ್ರಮ, ಗೋಶಾಲೆ, ಅಂಧ ಶಾಲೆಯ ಮಕ್ಕಳಿಗೆ ಸಹಾಯ ಮಾಡಿರುವುದು ಸೇರಿದಂತೆ ಅನೇಕ ಸಮಾಜಮುಖಿ ಕೆಲಸಗಳಿಗೆ ಸಹಕಾರವನ್ನು ನೀಡಿರುವಂತಹ ಪುನೀತ್ ರಾಜಕುಮಾರ್ ರವರು ರಾಜ್ಯಕ್ಕೆ ಮಾದರಿಯಾಗಿದ್ದಾರೆ. ತಂದೆಯAತೆ ಮಗ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದು ಚಲನಚಿತೋಧ್ಯಮದ ಒಬ್ಬ ಸರಳತೆಯ ಸಾಹುಕಾರನನ್ನು ಕಳೆದುಕೊಂಡ ಕರುನಾಡು ಬಡವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಿ. ಜಿ. ರವಿ, ರೇವಣ್ಣ, ಮಹೇಶ್, ದಿನೇಶ್, ಶಾಂತರಾಜ್, ರಾಮಚಂದ್ರು, ಶಂಕರಾಚಾರ್, ರುದ್ರೇಶ್, ಶ್ರೀನಿವಾಸ್ಶೆಟ್ಟಿಹಳ್ಳಿ, ಪ್ರೇಮಮ್ಮ ಸೇರಿದಂತೆ ಇತರರು ಹಾಜರಿದ್ದರು.

