
ಬೇಲೂರು : ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಮನೆ ಮನೆ ಸಾಹಿತ್ಯ ಗೋಷ್ಠಿ ಅಂಗವಾಗಿ ಭಜನಾ ಕಾರ್ಯಕ್ರಮವನ್ನು ವೇದಿಕೆಯಲ್ಲಿನ ಗಣ್ಯರು ಉದ್ಘಾಟನೆ ನಡೆಸಿದರು.
ಬೇಲೂರು .ಮಾರ್ಚ್. ೧೬”ಸಾಹಿತ್ಯ ಪರಿಷತ್ತು ವತಿಯಿಂದ ಭಜನಾ ಕಾರ್ಯಕ್ರಮಕ್ಕೆ ಚಾಲನೆ”
ಬೇಲೂರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಮನೆ ಮನೆ ಸಾಹಿತ್ಯಗೋಷ್ಠಿ ಅಂಗವಾಗಿ ಬೇಲೂರಿನ ಸಾಹಿತಿ ಹಾಗೂ ಹರಿಕಥಾ ವಿದುಷಿ ಶ್ರೀಮತಿ ಇಂದಿರಮ್ಮ ಸ್ವಗೃಹದಲ್ಲಿ ಭಜನಾ ಕಾರ್ಯಕ್ರಮವನ್ನು ಉದ್ಘಾಟನೆ ನಡೆಸಲಾಯಿತು.
ಕಸಾಪ ತಾಲ್ಲೂಕು ಅಧ್ಯಕ್ಷ ಬಿ.ಎಲ್.ರಾಜೇಗೌಡ, ಹಾಸನ ಹರಿಕಥಾ ವಿದುಷಿ ಬೇಲೂರು ನಾಗಲಕ್ಷ್ಮಿ ಶಿವರಾಂ ಸೇರಿದಂತೆ ಇನ್ನೂ ಮುಂತಾದ ಗಣ್ಯರು ಸಾಕ್ಷಿಯಾದರು.
ಬಳಿಕ ಮಾತನಾಡಿದ ಕಸಾಪ ತಾಲ್ಲೂಕು ಅಧ್ಯಕ್ಷ ಬಿ.ಎಲ್.ರಾಜೇಗೌಡ, ಅಧುನಿಕ ಕಾಲಘಟ್ಟದಲ್ಲಿ ದೇವರನಾಮ ಮತ್ತು ಭಜನಾ ಗೀತೆಗಳು ನಶಿಸುತ್ತಿರುವುದು ನಿಜಕ್ಕೂ ಶೋಚನೀಯ.
ಈ ಹಿಂದೆ ಪ್ರತಿ ದೇವಾಲಯದಲ್ಲಿ ರಾಮನವಮಿ ಮತ್ತು ಕಾರ್ತಿಕ ಮಾಸದಲ್ಲಿ ಭಜನೆ ನಡೆಸುತ್ತಿರುವ ವಾಡಿಕೆ ಇತ್ತು. ಆದರೆ ದೃಶ್ಯ ಮಾಧ್ಯಮಗಳ ಭರಾಟೆಯಿಂದ ಭಜನೆ ಗೀತೆಗಳಿಗೆ ಮೂಲೆ ಸೇರುತ್ತಿವೆ.
ಭಜನೆ ಗೀತೆಯಿಂದ ಮನುಷ್ಯನ ಮಾನಸಿಕ ನೆಮ್ಮದಿ ನೀಡುವ ಮತ್ತು ಮಾನವನಿಗೆ ಸಂಸ್ಕಾರ ನೀಡುವ ಕಾರಣದಿಂದ ಇಂತಹ ಭಜನೆ ಗೀತೆಗಳನ್ನು ಉಳಿಸುವ ಮತ್ತು ಬೆಳೆಸುವ ಕೆಲಸವನ್ನು ಮಾಡುವ ಅಗತ್ಯ ಇರುವ ಕಾರಣದಿಂದ ಕನ್ನಡ ಸಾಹಿತ್ಯ ಪರಿಷತ್ತು ಇಂತಹ ಮಹತ್ವಪೂರ್ಣ ಕಾರ್ಯಕ್ಕೆ ಮುಂದಾಗಿದೆ. ಮುಂದಿನ ದಿನದ ಹರಿಕಥಾ ಕಾರ್ಯಕ್ರಮ ನಡೆಸಲಾಗುತ್ತದೆ ಎಂದರು.
ಸಾಹಿತಿ ಇಂದಿರಮ್ಮ ಮಾತನಾಡಿ, ಹಿಂದೆ ಯಾವುದೇ ಮಾದ್ಯಮಗಳು ಇಲ್ಲದ ಕಾಲದಲ್ಲಿ ನಮ್ಮ ಪೂರ್ವಿಕರು ದೇಗುಲದಲ್ಲಿ ಭಜನೆ ಮೂಲಕ ಮನರಂಜನೆ ಮತ್ತು ಧಾರ್ಮಿಕ ಕಾರ್ಯವನ್ನು ನಡೆಸುತ್ತಾ ಬಂದಿದ್ದಾರೆ. ಭಜನೆ ಹಿರಿಯರಿಗೆ ಸೀಮಿತವಾಗಿಲ್ಲ. ಸಣ್ಣ ಮಕ್ಕಳಿಗೆ ತಿಳಿಸಬೇಕಿದೆ. ಕಾರಣ ಇತ್ತೀಚಿನ ದಿನದಂದು ಹೆಚ್ಚು ಹೆಚ್ಚು ಒತ್ತಡದಿಂದ ಅಧುನಿಕ ಕಾಯಿಲೆಗಳಿಗೆ ಮಾರಕವಾಗುತ್ತಿರುವ ಸಂದರ್ಭದಲ್ಲಿ ದೇವರ ನಾಮ ಮತ್ತು ಭಜನೆ ಸೇರಿದಂತೆ ಹರಿಕಥೆ ಮೂಲಕ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಶಾರದಾಶಂಕರ ಭಜನಾ ಮಂಡಳಿ( ಮಹಿಳೆಯರು)ಮಧ್ವಪತಿ ವಿಟ್ಠಲ ಭಜನಾ ಮಂಡಳಿ,ಶಾರದಾ ಶಂಕರ ಭಜನಾ ಮಂಡಳಿ ( ಪುರುಷರು) ಗಾಯಿತ್ರಿ ಭಜನಾ ಮಂಡಳಿ, ಪೂರ್ಣಪ್ರಜ್ಞ ಭಜನಾ ಮಂಡಳಿ, ಚನ್ನಕೇಶವ ಭಜನಾ ಮಂಡಳಿ, ಶ್ರೀವಾರಿ ಭಜನಾ ಮಂಡಳಿ, ಚೌಡೇಶ್ವರಿ ಭಜನಾ ಮಂಡಳಿ, ವೀರಾಂಜನೇಯ ಭಜನಾ ಮಂಡಳಿ ಕಲಾವಿದರು ಭಜನಾ ಕಾರ್ಯದಲ್ಲಿ ಭಾಗವಹಿಸಿದ್ದರು.ಉಳಿದಂತೆ ಹಾಸನ ಹರಿಕಥಾ ವಿದುಷಿ ಬೇಲೂರು ನಾಗಲಕ್ಷ್ಮಿ ಶಿವರಾಂ, ಕಲಾವಿದ ಚಂದನ ಕುಮಾರ್, ಕಸಾಪ ಗೌರವ ಕಾರ್ಯದರ್ಶಿಗಳಾದ ಬಿ.ಬಿ.ಶಿವರಾಜ್, ಆರ್.ಎಸ್.ಮಹೇಶ್, ಮ.ಶಿವಮೂರ್ತಿ, ಕೆ.ಆರ್.ಮಂಜುನಾಥ ಇನ್ನೂ ಮುಂತಾದವರು ಹಾಜರಿದ್ದರು.
.ಬಾಕ್ಸ್ ನ್ಯೂಸ್ ಭಜನೆಗೆ ಯಾವುದೇ ಜಾತಿ,ಧರ್ಮ, ವರ್ಗದ ಬೇದವಿಲ್ಲ, ಭಜನೆಗೆ ಭಕ್ತಿಯಿಂದ ಕೂಡಿದ ಮನಸ್ಸು ಇರಬೇಕು, ಭಜನೆ ದೇವರ ಒಲಿಸುವ ನಿಟ್ಟಿನಲ್ಲಿ ನಮ್ಮ ಮನಸ್ಸಿಗೆ ಮುದ ನೀಡುತ್ತದೆ. ಇಂತಹ ಭಜನೆ ಕಲೆ ಬೇಲೂರಿನಲ್ಲಿ ಅಸಂಖ್ಯಾತರು ಕಲಿತು ಹಾಡುತ್ತಿರುವುದು ಸಂತೋಷ ತಂಂದಿದೆ. ವಾದಿರಾಜರು. ಪುರಂದರದಾಸರು, ಕನಕದಾಸರು, ವಚನ ಸಾಹಿತ್ಯ ಹೀಗೆ ನಾನಾ ಕೀರ್ತನೆಗಳನ್ನು ಹೇಳುವ ಜೊತೆಗೆ ಅವರು ನೀಡಿದ ಸಂದೇಶವನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹಾಸನದ ಖ್ಯಾತ ಹರಿಕಥಾ ವಿದ್ವಾನ್ ನಾಗಲಕ್ಷ್ಮಿ ಶಿವರಾಂ ಹೇಳಿದರು..




