
ಅರೇಹಳ್ಳಿ: ಬೇಲೂರು ತಾಲೂಕಿನ ಬಿಕ್ಕೋಡು ಹೋಬಳಿಯ ಬೊಮ್ಮಡಿಹಳ್ಳಿ ಗ್ರಾಮದಲ್ಲಿ ಶ್ರೀ ಶನಿದೇವರ ಹಾಗೂ ಚಾಮುಂಡೇಶ್ವರಿ ದೇವಿಯ ಜಾತ್ರಾ ಮಹೋತ್ಸವ ನಡೆಯಿತು.
ಎರಡು ದಿನಗಳ ಕಾಲ ದೇವಸ್ಥಾನದ ಪ್ರಧಾನ ಅರ್ಚಕ ನಾಗರಾಜು ಸ್ವಾಮಿಯವರ ನೇತೃತ್ವದಲ್ಲಿ ನಡೆದ ಪೂಜಾ ಮಹೋತ್ಸವದ ಮೊದಲ ದಿನ ವಾಟೆಹೊಳೆಯಲ್ಲಿ ಗಂಗೆ ಪೂಜೆಯನ್ನು ನೆರವೇರಿಸಲಾಯಿತು.
ನಂತರ ಸ್ವಾಮಿಯವರಿಗೆ ಹಾಗೂ ಅಮ್ಮನವರಿಗೆ ರುದ್ರಾಭಿಷೇಕ, ದೇವಸ್ಥಾನದ ಆವರಣದಲ್ಲಿ ಹೋಮ ಪ್ರಾರಂಭವಾಯಿತು. ಎರಡು ದೇವರಿಗೆ ಪುಷ್ಪಾಲಂಕಾರವನ್ನು ಮಾಡಿದ ಬಳಿಕ ದೇವತೆಗಳ ಮೆರವಣಿಗೆ ಹಾಗೂ ಅಡ್ಡಪಲ್ಲಕ್ಕಿಯಲ್ಲಿ ಹೊತ್ತು ಕುಣಿಸಲಾಯಿತು.
ಜಾತ್ರಾ ಮಹೋತ್ಸವದ ಎರಡನೇ ದಿನವಾದ ಶನಿವಾರ ವಾಟೆಹೊಳೆಯಲ್ಲಿ ಮತ್ತೊಮ್ಮೆ ಪೂಜಾ ಕೈಂಕರ್ಯವನ್ನು ನಡೆಸಿ ೧೦೧ ಕಳಸದೊಂದಿಗೆ ದೇವರ ಮೂರ್ತಿಗಳನ್ನು ರಾಜಬೀದಿಯಲ್ಲಿ ಮೆರವಣಿಗೆ ಮಾಡಲಾಯಿತು.ನಂತರ ಕೆಂಡೋತ್ಸವವನ್ನು ಏರ್ಪಡಿಸಲಾಗಿ ಅನೇಕ ಭಕ್ತರು ಭಕ್ತಿ ಭಾವದಿಂದ ಪಾಲ್ಗೊಂಡರು.
ನೆರೆದಿದ್ದ ಭಕ್ತರಿಗೆ ಅನ್ನಸಂತರ್ಪಣೆಯನ್ನು ಮಾಡಲಾಯಿತು. ಈ ಪೂಜಾ ಮಹೋತ್ಸವಕ್ಕೆ ವಿವಿಧ ದೇವಸ್ಥಾನಗಳಿಂದ ೨೬ ಅರ್ಚಕರು ಆಗಮಿಸಿದ್ದರು. ಹೋಬಳಿಯ ಸುತ್ತಮುತ್ತಲ ಗ್ರಾಮಗಳ ಹಾಗೂ ದೂರದ ಊರುಗಳಿಂದ ನೂರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಜಾತ್ರಾ ಮಹೋತ್ಸವವನ್ನು ಯಶಸ್ವಿಗೊಳಿಸಿದರು.
೧೭-೦೩-೨೦೨೪ಊSಓಂಖಐ೦೧A ಚಿತ್ರ ಸುದ್ದಿ: ಬೇಲೂರು ತಾಲೂಕಿನ ಬಿಕ್ಕೋಡು ಹೋಬಳಿಯ ಬೊಮ್ಮಡಿಹಳ್ಳಿಯಲ್ಲಿ ಶನಿದೇವರ ಹಾಗೂ ಚಾಮುಂಡೇಶ್ವರಿ ದೇವಿಯ ಜಾತ್ರಾ ಮಹೋತ್ಸವವು ಪ್ರಧಾನ ಅರ್ಚಕ ನಾಗರಾಜು ಸ್ವಾಮಿಯವರ ನೇತೃತ್ವದಲ್ಲಿ ಜರುಗಿತು.



