ಇಂಡಿಯನ್ ಪ್ರೀಮಿಯರ್ ಲೀಗ್ (IPL) 2024 ರ ಆರಂಭಿಕ ಪಂದ್ಯ ಮಾರ್ಚ್ 22ರಂದು ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ನಡೆಯಲಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೆಣಸಲಿದೆ.

ಈ ಆವೃತ್ತಿಯ ಮೊದಲ ಪಂದ್ಯದಲ್ಲಿ ಎಂಎಸ್ ಧೋನಿ vs ವಿರಾಟ್ ಕೊಹ್ಲಿ ಮುಖಾಮುಖಿಯಾಗಲಿದ್ದಾರೆ.

ಉಭಯ ತಂಡಗಳು ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದು, ಪಂದ್ಯದ ಆರಂಭಕ್ಕೆ ದಿನಗಣನೆ ಆರಂಭವಾಗಿದೆ.ಅಪಘಾತಕ್ಕೀಡಾಗಿ ಕ್ರಿಕೆಟ್‌ನಿಂದ ದೂರ ಉಳಿದಿದ್ದ ರಿಷಬ್ ಪಂತ್ ಮೊದಲ ಬಾರಿಗೆ ಟಿ20 ಲೀಗ್‌ನ 17ನೇ ಆವೃತ್ತಿ ಮೂಲಕ ವೃತ್ತಿಪರ ಕ್ರಿಕೆಟ್‌ಗೆ ಮರಳಿದ್ದಾರೆ.

ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿರುವ ಎಂಎಸ್ ಧೋನಿ ಅವರು ಐಪಿಎಲ್ 2023ರ ಆವೃತ್ತಿಯಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಮತ್ತೆ ಐಪಿಎಲ್ 2024ರ ಆವೃತ್ತಿಯಲ್ಲಿ ಆಡುತ್ತಿದ್ದಾರೆ.

ವೈಯಕ್ತಿಕ ಕಾರಣಗಳಿಂದ ಕಳೆದ ಎರಡು ತಿಂಗಳಿಂದ ಕ್ರಿಕೆಟ್‌ನಿಂದ ದೂರ ಉಳಿದಿದ್ದ ವಿರಾಟ್ ಕೊಹ್ಲಿ, ಆರ್‌ಸಿಬಿ ಮೂಲಕ ಅಂಗಳಕ್ಕೆ ಇಳಿಯುತ್ತಿದ್ದಾರೆ.

ಗುಜರಾತ್ ಟೈಟಾನ್ಸ್ ನಾಯಕನಾಗಿದ್ದ ಹಾರ್ದಿಕ್ ಪಾಂಡ್ಯ ಈ ಬಾರಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಲಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ವೇಳಾಪಟ್ಟಿ1.

ಮಾರ್ಚ್ 22ರಂದು 8 ಗಂಟೆಗೆ: ಸಿಎಸ್‌ಕೆ vs ಆರ್‌ಸಿಬಿ, ಚೆನ್ನೈ

2. ಮಾರ್ಚ್ 23 ರಂದು ಮಧ್ಯಾಹ್ನ 3.30 ಗಂಟೆಗೆ: ಪಂಜಾಬ್ ಕಿಂಗ್ಸ್ vs ಡೆಲ್ಲಿ ಕ್ಯಾಪಿಟಲ್ಸ್, ಮೊಹಾಲಿ.

3. ಮಾರ್ಚ್ 23ರಂದು ಸಂಜೆ 7.30 ಗಂಟೆಗೆ: ಕೆಕೆಆರ್ vs ಎಸ್‌ಆರ್‌ಎಚ್, ಕೋಲ್ಕತ್ತಾ.

4. ಮಾರ್ಚ್ 24ರಂದು ಸಂಜೆ 7.30 ಗಂಟೆಗೆ: ಆರ್‌ಆರ್ vs ಎಲ್‌ಎಸ್‌ಜಿ, ಜೈಪುರ

5. ಮಾರ್ಚ್ 24ರಂದು ಸಂಜೆ 7.30 ಗಂಟೆಗೆ: ಜಿಟಿ vs ಎಂಐ, ಅಹಮದಾಬಾದ್

6. ಮಾರ್ಚ್ 25ರಂದು ಸಂಜೆ 7.30 ಗಂಟೆಗೆ: ಆರ್‌ಸಿಬಿ vs ಪಂಜಾಬ್ ಕಿಂಗ್ಸ್, ಬೆಂಗಳೂರು

7. ಮಾರ್ಚ್ 26ರಂದು ಸಂಜೆ 7.30 ಗಂಟೆಗೆ: ಸಿಎಸ್‌ಕೆ vs ಜಿಟಿ, ಚೆನ್ನೈ

8. ಮಾರ್ಚ್ 27ರಂದು ಸಂಜೆ 7.30 ಗಂಟೆಗೆ: ಎಸ್‌ಆರ್‌ಎಚ್ vs ಎಂಐ, ಹೈದರಾಬಾದ್

9. ಮಾರ್ಚ್ 28ರಂದು ಸಂಜೆ 7.30ಕ್ಕೆ: ಆರ್‌ಆರ್ vs ಡಿಸಿ, ಜೈಪುರ

10. ಮಾರ್ಚ್ 29ರಂದು ಸಂಜೆ 7.30ಕ್ಕೆ: ಆರ್‌ಸಿಬಿ vs ಕೆಕೆಆರ್, ಬೆಂಗಳೂರು

11. ಮಾರ್ಚ್ 30ರಂದು ಸಂಜೆ 7.30ಕ್ಕೆ: ಎಲ್‌ಎಸ್‌ಜಿ vs ಪಿಬಿಕೆಎಸ್, ಲಖನೌ

12. ಮಾರ್ಚ್ 31ರಂದು ಸಂಜೆ 3.30ಕ್ಕೆ: ಜಿಟಿ vs ಎಸ್‌ಆರ್‌ಎಚ್, ಅಹಮದಾಬಾದ್

13. ಮಾರ್ಚ್ 31ರಂದು ಸಂಜೆ 7.30ಕ್ಕೆ: ಡಿಸಿ vs ಸಿಎಸ್‌ಕೆ, ವೈಜಾಗ್

14. ಏಪ್ರಿಲ್ 1ರಂದು ಸಂಜೆ 7.30ಕ್ಕೆ: ಎಂಐ vs ಆರ್‌ಆರ್, ಮುಂಬೈ

15. ಏಪ್ರಿಲ್ 2ರಂದು ಸಂಜೆ 7.30ಕ್ಕೆ: ಆರ್‌ಸಿಬಿ vs ಎಲ್‌ಎಸ್‌ಜಿ, ಬೆಂಗಳೂರು

16. ಏಪ್ರಿಲ್ 3ರಂದು ಸಂಜೆ 7.30ಕ್ಕೆ: ಡಿಸಿ vs ಕೆಕೆಆರ್, ವೈಜಾಗ್

17. ಏಪ್ರಿಲ್ 4ರಂದು ಸಂಜೆ 7.30ಕ್ಕೆ: ಜಿಟಿ vs ಪಿಬಿಕೆಎಸ್, ಅಹಮದಾಬಾದ್

18. ಏಪ್ರಿಲ್ 5ರಂದು ಸಂಜೆ 7.30ಕ್ಕೆ: ಎಸ್‌ಆರ್‌ಎಚ್ vs ಸಿಎಸ್‌ಕೆ, ಹೈದರಾಬಾದ್

19. ಏಪ್ರಿಲ್ 6ರಂದು ಸಂಜೆ 7.30ಕ್ಕೆ: ಆರ್‌ಆರ್ vs ಆರ್‌ಸಿಬಿ, ಜೈಪುರ

20. ಏಪ್ರಿಲ್ 7ರಂದು ಸಂಜೆ 7.30ಕ್ಕೆ: ಎಂಐ vs ಡಿಸಿ, ಮುಂಬೈ

21. ಏಪ್ರಿಲ್ 7ರಂದು ಸಂಜೆ 7.30ಕ್ಕೆ: ಎಲ್‌ಎಸ್‌ಜಿ vs ಜಿಟಿ, ಲಖನೌ

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *