ಹಾಸನ: ಭಾರತೀಯ ಚುನಾವಣಾ ಆಯೋಗದ ಮಾರ್ಗ ಸೂಚಿಗಳಂತೆ ೮೫ ವರ್ಷ ಮೇಲ್ಪಟ್ಟ ವೃದ್ಧರು, ಅಂಗವಿಕಲರು, ಅಂಧರುಗಳ ಮತದಾರರ ಮನೆಗಳಿಗೆ ಹೋಗಿ ಡಿ ಅರ್ಜಿಗಳನ್ನು ವಿತರಿಸಿ ಅಂಚೆ ಮತ ಪತ್ರ ಮೂಲಕ ಮತದಾನ ಮಾಡಿಸುವ ಅಧಿಕಾರಿಗಳು ಎಚ್ಚರದಿಂದ ಕೆಲಸ ಮಾಡುವಂತೆ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಹಾಗೂ ಅಪರ ಜಿಲ್ಲಾಧಿಕಾರಿ ಶಾಂತಲಾ ಸಲಹೆ ನೀಡಿದರು.

ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಶುಕ್ರವಾರದಂದು ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಜಿಲ್ಲೆಯಲ್ಲಿ ಹೋಮ್ ಓಟಿಂಗ್ ಕಾರ್ಯಕ್ಕೆ ನಿಯೋಜನೆಗೊಂಡಿರುವ ಪೋಲಿಂಗ್ ಅಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮದಲ್ಲಿ ಉದ್ದೇಶಿಸಿ ಮಾತನಾಡಿದ ಅವರು, ಭಾರತೀಯ ಚುನಾವಣಾ ಆಯೋಗದ ಮಾರ್ಗ ಸೂಚಿಗಳಂತೆ ೮೫ ವರ್ಷ ಮೇಲ್ಪಟ್ಟ ಮತ್ತು ದಿವ್ಯಾಂಗ ಮತದಾರರಿಗೆ ನಮೂನೆ ೧೨ಡಿ ಅರ್ಜಿಗಳನ್ನು ವಿತರಿಸಿ, ಅಂಚೆ ಮತ ಪತ್ರದ ಮೂಲಕ ಮತದಾನ ಮಾಡಲು ಇಚ್ಚಿಸಿದ ಮತದಾರರಿಗೆ ಅವರುಗಳ ವಾಸ ಸ್ಥಳಕ್ಕೆ ಮತಗಟ್ಟೆ ಅಧಿಕಾರಿಗಳ ತಂಡ ಭೇಟಿ ನೀಡಿ ಅಂಚೆ ಮತ ಪತ್ರ ಮೂಲಕ ಮತದಾನ ಮಾಡಿಸುವ ವಿಧಾನವನ್ನು ಹೋಮ್ ಓಟಿಂಗ್ ಎಂದು ಕರೆಯಲಾಗುವುದು.

ಹಾಸನ ಲೋಕಸಭಾ ಕ್ಷೇತ್ರದಲ್ಲಿ ೦೮ ವಿಧಾನಸಭಾ ಕ್ಷೇತ್ರಗಳಿದ್ದು, ಈ ಎಲ್ಲಾ ಕ್ಷೇತ್ರಗಳಿಂದ ೮೫ಕ್ಕಿಂತ ಹೆಚ್ಚು ವಯಸ್ಸು ಆಗಿರುವವರು ೧೫,೦೯೨ ದಿವ್ಯಾಂಗ ೧೮,೭೭೬ ಓಟು ಸೇರಿ ೩೩,೮೬೮ ಮತದಾರರಿಗೆ ೧೨ ಡಿ ಅರ್ಜಿಗಳನ್ನು ವಿತರಿಸಲಾಗಿರುತ್ತದೆ. ಎರಡು ವರ್ಗದ ಮತದಾರರ ಪೈಕಿ ೮೫ ವರ್ಷ ಮೇಲ್ಪಟ್ಟ ೨೬೩೫ ಮತ್ತು ದಿವ್ಯಾಂಗ ೧೩೭೩ ಸೇರಿ ಒಟ್ಟು ೪೦೦೯ ಮತದಾರರು ಅಂಚೆ ಮತ ಪತ್ರ ಮೂಲಕ ಮತದಾನ ಮಾಡಲು ಇಚ್ಚಿಸಿರುವುದರಿಂದ ಇವರುಗಳಿಗೆ ಅಂಚೆ ಮತ ಪತ್ರ ನೀಡಿ ಮತದಾನ ಮಾಡಿಸುವ ಕುರಿತು ವಿಧಾನದಂತೆ ಮತಗಟ್ಟೆ ಅಧಿಕಾರಿಗಳ ತಂಡ ಕಾರ್ಯ ನಿರ್ವಹಿಸಲಿದೆ ಎಂದರು.

ಅಂಚೆ ಮತಪತ್ರ ಮತದಾರರ ಸಂಖ್ಯೆ ಮತ್ತು ಸೆಕ್ಟರ್ ಆಧಾರದ ಮೇಲೆ ಮಾರ್ಗ ನಕ್ಷೆಗಳನ್ನು ಸಿದ್ಧಪಡಿಸುವುದು. ಮತಗಟ್ಟೆಗಳಿಗೆ ಭೇಟಿ ನೀಡುವ ದಿನಾಂಕ ಮತ್ತು ಸಮಯವನ್ನು ಮೊದಲೇ ನಿಗಧಿ ಪಡಿಸುವುದು. ಮತಗಟ್ಟೆಗಳಿಗೆ ಭೇಟಿ ನೀಡುವ ದಿನಾಂಕ ಮತ್ತು ಸಮಯವನ್ನು ನಿಗಧಿಪಡಿಸಿರುವ ಅನುಮೋದಿತ ಸೆಕ್ಟರ್ ಮಾರ್ಗ ನಕ್ಷೆಯನ್ನು ಅಭ್ಯರ್ಥಿಗಳೊಂದಿಗೆ ಹಂಚಿಕೊಳ್ಳಬೇಕು.

ಮತಗಟ್ಟೆಗೆ ತೆರಳುವ ತಂಡದ ಜೊತೆ ಒಬ್ಬರೂ ಪಿ.ಆರ್.ಓ. ಪಿಓ, ಒಬ್ಬರು ಮೈಕ್ರೋ ಅಬ್ಸರ್ವರ್, ಓರ್ವ ಪೊಲೀಸ್ ಸಿಬ್ಬಂದಿ, ಒಬ್ಬ ವಿಡಿಯೋ ಗ್ರಾಫರ್ ಇರುತ್ತಾರೆ. ಮತದಾರರಿಂದ ಮತದಾನದ ಪ್ರಕ್ರಿಯೆಯನ್ನು ಮೇಲೆ ನೀಡಿರುವ ಸೂಚನೆಗಳಂತೆ ಹಾಗೂ ಭಾರತೀಯ ಚುನಾವಣಾ ಆಯೋಗದ ಮಾರ್ಗ ಸೂಚಿಗಳಂತೆ ಕಟ್ಟು ನಿಟ್ಟಾಗಿ ನಿರ್ವಹಿಸಲು ಸೂಚಿಸಿದೆ ಎಂದು ಹೇಳಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *