ಬೇಲೂರು : ಬಾಂಬಿಟ್ಟವರನ್ನು ನಮ್ಮ ಸಹೋದರರು ಎಂದು ದೇಶ ಒಡೆಯುವ ಹೇಳಿಕೆ ನೀಡುವವರಿಗೆ ತಕ್ಕ ಶಾಸ್ತಿ ಮಾಡಬೇಕೆಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ಮಾಜಿ ಸಚಿವ ಸಿಟಿ ರವಿ ತೀವ್ರವಾಗಿ ವಾಗ್ದಾಳಿ ನಡೆಸಿದರು.

ತಾಲೂಕಿನ ನಾಗೇನಹಳ್ಳಿ ಜಿಲ್ಲಾ ಪಂಚಾಯತಿ ವ್ಯಾಪ್ತೀಯ ಗೆಂಡೇಹಳ್ಳಿಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಕಾಂಗ್ರೆಸ್ ಸಾಧನೆ ಏನೆಂದರೆ ೫ ಗ್ಯಾರಂಟಿಗಳನ್ನು ನೀಡಿದ್ದೇನೆಂದು ಸುಳ್ಳು ಆಶ್ವಾಸನೆ ಕೊಡುವ ಮೂಲಕ ಬಡವರನ್ನು ಕಿತ್ತುತಿನ್ನುವಂತಹ ಕೆಲಸ ಮಾಡುತ್ತಿದೆ.ಸನ್ಮಾನ್ಯ ನರೆಂದ್ರ ಮೋದಿಯವರು ದೇಶದ ೧೪೦ ಕೋಟಿ ಜನತೆಯ ನಂಬಿಕೆಯ ಆಧಾರ ಸ್ಥಂಭವಾಗಿದ್ದಾರೆ.

ಗ್ಯಾರಂಟಿಗಳ ಆಸೆಗಳನ್ನು ತೋರಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ ಬಡವರಿಂದ ಒಂದು ಕಡೆ ಕಿತ್ತು ಮತ್ತೊಂದು ಕಡೆ ಕೊಟ್ಟು ಜನರ ದಾರಿ ತಪ್ಪಿಸುತ್ತಾ ಗ್ಯಾರಂಟಿ ರಾಜಕಾರಣ ಮಾಡುತ್ತಿದ್ದಾರೆ.

ನಾವು ಜಾತಿಗಾಗಿ ಹೋರಾಟ ಮಾಡುತ್ತಿಲ್ಲ ನೀತಿಗಾಗಿ ಹೋರಾಟ ಮಾಡುತ್ತಿದ್ದೇವೆ‌.ಇಲ್ಲಿ ಅವರು ಜಾತಿಗಳನ್ನು ಎತ್ತಿಕಟ್ಟಿ ಜಾತಿಗಳನ್ನು ವಿಂಗಡಿಸುವ ಕೆಲಸ ಮಾಡುತ್ತಿದ್ದಾರೆ.

ಇತ್ತೀಚೆಗೆ ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಇಟ್ಟವನ ಬಗ್ಗೆ ನನ್ನ ಬ್ರದರ್ ಎನ್ನುತ್ತಾರೆ.ಇತ್ತೀಚಿಗೆ ರಾಜ್ಯಸಭಾ ಚುನಾವಣೆಯಲ್ಲಿ ನಮ್ಮ ಮುಖಟವಾಗಿರುವ ವಿಧಾನಸೌಧದೊಳಗೆ ಪಾಕಿಸ್ಥಾನ್ ಜಿಂದಾಬಾದ್ ಎಂದಾಗ ಅವರನ್ನು ಸಮರ್ಥನೆ ಮಾಡುವಂತ ಕೆಲಸವನ್ನು ಈ ಪಕ್ಷ ಮಾಡುತ್ತಿದೆ.ಇಂತಹ ನೀಚ ಕಾಂಗ್ರೆಸ್ ಪಕ್ಷವನ್ನು ಕಿತ್ತೊಗೆಯಲು ಎನ್ ಡಿ ಎ ಮೈತ್ರಿ ಅಭ್ಯರ್ಥಿಯಾದ ಪ್ರಜ್ವಲ್ ರೇವಣ್ಣನವರನ್ನು ಗೆಲ್ಲಿಸಲು ೯೨ ರ ಹರೆಯದ ಮಾಜಿ ಪ್ರಧಾನಿಗಳು ೮೨ ರ ಹರೆಯದ ಮಾಜಿ ಮುಖ್ಯಮಂತ್ರಿ ಗಳು ಹೋರಾಟ ಮಾಡುತ್ತಿದ್ದಾರೆ.

ಪ್ರಜ್ವಲ್ ನಮ್ಮೆಲ್ಲರ ಕಣ್ಮಣಿಯಾಗಿದ್ದು ಅವರನ್ನು ಗೆಲ್ಲಿಸಿದರೆ ದೇಶ ರಕ್ಷಣೆಗಾಗಿ ಒಬ್ಬ ಯೋಧನನ್ನು ಗೆಲ್ಲಿಸಿದಂತೆ ಎಂದ ಅವರು ನರೇಂದ್ರ ಮೋದಿಯವರಿಗೆ ಹಾಕುವ ಮತಗಳು ಪ್ರಜ್ವಲ್ ರೇವಣ್ಣನವರ ಹೆಸರಿಗೆ ಹಾಕುವ ಮೂಲಕ ನಾವೆಲ್ಲರು ದೇಶ ರಕ್ಷಣೆಗೆ ಕಂಕಣ ಬದ್ಧರಾಗಬೇಕು.ಇಲ್ಲಿ ಜಾತಿ ಆಧಾರವಾಗಿ ಚುನಾವಣೆ ನಡೆಸುತ್ತಿಲ್ಲ ಎಲ್ಲರ ಹೋರಾಟದ ಫಲವಾಗಿ ಪ್ರಜ್ವಲ್ ರೆವಣ್ಣನವರನ್ನು ಗೆಲ್ಲಿಸಬೇಕು.

ಕಾಂಗ್ರೆಸ್ ಪಕ್ಷ ಜನರನ್ನು ದಾರಿ ತಪ್ಪಿಸಲು ಚಂಡೂವು ಹಿಡಿದು ನಾಟಕವಾಡಲು ಬಂದಿದೆ.ಇಲ್ಲಿ ನಾವು ಎಲ್ಲರೂ ಒಗ್ಗಟ್ಟಾಗಿ ಅವರನ್ನು ಸೋಲಿಸುವುದರ ಜೊತೆಗೆ ನಮ್ಮ ರಾಜ್ಯದ ೨೮ ಕ್ಷೇತ್ರದಲ್ಲಿ ನಾವು ಗೆಲ್ಲಲೇಬೇಕು.ನಾವು ಮೂರು ಕ್ಷೇತ್ರಗಳಿಗೆ ಮಾತ್ರ ಅವರ ಪರವಾಗಿ ಮತ ಯಾಚನೆ ಮಾಡುತ್ತಿದ್ದೇವೆ ಅವರು ನಮಗೆ ೨೫ ಕ್ಷೇತ್ರಗಳಲ್ಲಿ ನಮ್ಮ ಜೊತೆಗಿದ್ದಾರೆ.

ಯಾವುದೇ ಕಾರಣಕ್ಕೂ ಜೆಡಿಎಸ್ ಬಿಜೆಪಿ ಯವರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಯಾವ ಅಪಪ್ರಚಾರಕ್ಕೂ ಕಿವಿಗೊಡದಂತೆ ಮನವಿ ಮಾಡಿದರು..

ನಂತರ ಮಾತನಾಡಿದ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಕಾಂಗ್ರೆಸ್ ಪಕ್ಷದವರು ಅಭಿವೃದ್ಧಿ ಮಾಡಿದ್ದೇವೆ ಎಂದು ಮತ ಕೇಳಲು ನೈತಿಕತೆ ಕಳೆದುಕೊಂಡಿದ್ದಾರೆ ಈ ಚುನಾವಣೆಯಲ್ಲಿ ಮತ ಕೊಡಿ ಎಂದು ಕೇಳುವ ಇವರು ಯಾವ ಅಭಿವೃದ್ಧಿ ಮಾಡಿದ್ದಾರೆ.ಎಂದ ಅವರು ಈ ಹಿಂದೆ ೧೦ ವರ್ಷ ಕಾಂಗ್ರೆಸ್ ಪಕ್ಷ ಆಡಳಿತ ಮಾಡಿದ್ದರು ಈ ಭಾಗದಲ್ಲಿ ರಸ್ತೆ ಅಭಿವೃದ್ಧಿ ಮಾಡಿರೋದು ಬಿಜೆಪಿ ಜೆಡಿಎಸ್ ಪಕ್ಷ ಅಧಿಕಾರದಲ್ಲಿದ್ದಾಗ ಮಾತ್ರಮೋದಿಯವರ ನಾಯಕತ್ವವನ್ನು ಇಡೀ ಜಗತ್ತೆ ಒಪ್ಪಿಕೊಂಡಿದೆ.ಕೇವಲ ಒಂದು ಜನಾಂಗಕ್ಕೆ ಸೀಮಿತ ಆದವರಲ್ಲ ಮುಸಲ್ಮಾನ ಬಾಂಧವರು ಸಹ ಒಪ್ಪಿಕೊಂಡಿದ್ದಾರೆ ಎಂದ ಅವರು ಕಾಂಗ್ರೆಸ್ ಪಕ್ಷದವರು ಕೇಂದ್ರದಿಂದ ದುಡ್ಡು ಕೊಟ್ಟಿಲ್ಲ ಅಂತಾರೆ.ಆದರೆ ನಾನು ಗೆದ್ದಂತ ಸಮಯದಲ್ಲಿ ೧೨ ಸಾವಿರ ಕೋಟಿ ಅನುದಾನ ನೀಡಿದ್ದಾರೆ.

ಈ ಭಾಗದ ಅಭಿವೃದ್ಧಿ ಯಾಗಬೇಕಿದ್ದು ಅದಕ್ಕಾಗಿ ನಾವು ಈ ಚುನಾವಣೆಯಲ್ಲಿ ಪಣ ತೊಟ್ಟಿದ್ದೇವೆ. ಕಾಂಗ್ರೆಸ್ ಪಕ್ಷದವರು ಪರಿಶಿಷ್ಟ ಜಾತಿ ಮತ್ತು ಪಂಗಡದವರನ್ನು ಕಾಪಾಡುತ್ತೇವೆ ಎಂದು ಈಗ ಅವರ ಬಗ್ಗೆಯೇ ವಿರೋಧಿ ನೀತಿ ಅನುಸರಿಸುತ್ತಿದೆ ನರೇಂದ್ರಮೋದಿ ಯವರು ಜಗತ್ತು ಕಂಡ ನಾಯಕರಾಗಿದ್ದು ಮತ್ತೊಮ್ಮೆ ಪ್ರಧಾನಿಯಾಗಬೇಕು ಆದ್ದರಿಂದ ಈ ಬಾರಿ ನಡೆಯುವ ಚುನಾವಣೆ ದೇಶದ ಉಳಿವಿಗಾಗಿ ನಡೆಯುತ್ತಿರುವ ಚುನಾವಣೆಯಾಗಿದೆ ಒಂದು ವೇಳೆ ತಿಳಿಯದೆ ನಾನು ತಪ್ಪು ಮಾಡಿದ್ದರೆ ನನ್ನನ್ನು ಕ್ಷಮಿಸಿ ಎರಡು ಪಕ್ಷದ ಕಾರ್ಯಕರ್ತರ ಕಷ್ಟ ಸುಖಗಳಲ್ಲಿ ಜೊತೆ ನಿಂತು ಈ ಕ್ಷೇತ್ರದ ಅಭಿವೃದ್ಧಿಗೆ ದುಡಿಯುತ್ತೇನೆ ಈ ಚುನಾವಣೆಯಲ್ಲಿ ನನ್ನನ್ನು ಮತ್ತೊಮ್ಮೆ ಆಯ್ಕೆ ಮಾಡಿ ಕಳುಹಿಸಿಕೊಡಿ ಎಂದು ಎರಡು ಪಕ್ಷದ ಕಾರ್ಯಕರ್ತರ ಬಳಿ ಮತಯಾಚನೆ ಮಾಡಿ ನನ್ನಿಂದ ಯಾವುದೇ ನೋವಾಗಿದ್ದರೂ ನನ್ನನ್ನು ಕ್ಷಮಿಸಬೇಕು.ಮುಂದಿನ ದಿನಗಳಲ್ಲಿ ನನ್ನ ಎರಡು ಪಕ್ಷದ ಕಾರ್ಯಕರ್ತರ ಜೊತೆ ನಾನು ಸದಾ ಇರುತ್ತೆನೆಂದರು.

ನಂತರ ಮಾತನಾಡಿದ ಶಾಸಕ ಎಚ್ ಕೆ ಸುರೇಶ್ ಚುನಾವಣೆ ಕೇವಲ ಹನ್ನೆರಡು ದಿನಗಳು ಬಾಕಿ ಇದ್ದು ಈ ಚುನಾವಣೆ ದೇಶವೇ ನಿರ್ಣಯ ಮಾಡಿರುವ ಚುನಾವಣೆಯಾಗಿದ್ದು ಅಪಪ್ರಚಾರ ಮಾಡಿಕೊಂಡು ಬರುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಈ ಬಾರಿ ತಕ್ಕ ಪಾಠ ಕಲಿಸಬೇಕಿದೆ ಎಂದ ಅವರು ನರೇಂದ್ರ ಮೋದಿಯವರನ್ನು ಪ್ರಧಾನಿ ಮಾಡಬೇಕೆಂದು ಮಣ್ಣಿನ ಮಗ ದೇವೇಗೌಡರೇ ನಿರ್ಣಯ ಮಾಡಿದ್ದಾರೆ

ಮಲೆನಾಡು ಭಾಗದಲ್ಲಿ ಗುಣಮಟ್ಟದ ರಸ್ತೆಗಳು ಆಗಬೇಕಿದ್ದು ಬೇಲೂರು ವಿಧಾನಸಭಾ ಕ್ಷೇತ್ರಕ್ಕೆ ಹೆಚ್ಚು ಅನುದಾನಕ್ಕಾಗಿ ಪಟ್ಟು ಹಿಡಿಯಲು ಎನ್ ಡಿ ಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರನ್ನು ಗೆಲ್ಲಿಸಿ ಕಳುಹಿಸಲು ಈ ಭಾಗದಲ್ಲಿ 10, ಸಾವಿರಕ್ಕೂ ಹೆಚ್ಚು ಮತ ನೀಡುವ ಮೂಲಕ ಅವರ ಗೆಲುವಿಗೆ ಕಾರಣಕರ್ತರಾಗುವುದು ನಮ್ಮೆಲ್ಲರ ಕರ್ತವ್ಯ ಎಂದರು.

ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಕೆ ಎಸ್ ಲಿಂಗೇಶ್,ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೆಂದ್ರ,ರಾಷ್ಟ್ರೀಯ ತೆಂಗು ಬೆಳೆಗಾರರ ನಿರ್ದೇಶಕ ರೇಣುಕುಮಾರ್,ತಾಲೂಕು ಅಧ್ಯಕ್ಷ ತೊಚ ಅನಂತ ಸುಬ್ಬರಾವ್ ತಾಲೂಕು ಮಂಡಲ ಅಧ್ಯಕ್ಷ ಅಡಗೂರು ಆನಂದ್,ಮುಖಂಡರಾದ ಎಮ್ ಎ ನಾಗರಾಜ್, ಸಿ ಹೆಚ್ ಪ್ರಕಾಶ್, ಜಿಕೆ ಕುಮಾರ್,ಬಾಣಸವಳ್ಳಿ ಅಶ್ವಥ್,ಹೋಬಳಿ ಅಧ್ಯಕ್ಷ ಕುಮಾರ್,ನಂದಕುಮಾರ್,ಹಾಗೂ ಇತರರು ಹಾಜರಿದ್ದರು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *