ಕೋಳಿ ತುಂಬಿದ ವಾಹನ ಪಲ್ಟಿ: ನೂರಾರು ಕೋಳಿ ಸಾವು

ಅರೇಹಳ್ಳಿ: ಎದುರುಗಡೆ ಬರುತ್ತಿದ್ದ ವಾಹನಕ್ಕೆ ಸ್ಥಳಾವಕಾಶ ಮಾಡಿಕೊಡಲು ಹೋಗಿ ಬ್ರೇಕ್ ಪೈಪ್ ತುಂಡಾದ ಪರಿಣಾಮ ಕೋಳಿ ತುಂಬಿದ ವಾಹನ ಪಲ್ಟಿಯಾದ ಘಟನೆಯು ಬೇಲೂರು ತಾಲೂಕಿನ ಅರೇಹಳ್ಳಿ ಚರ್ಚ್ ಬಳಿಯ ಕೊನೆ ತಿರುವಿನಲ್ಲಿ ಶನಿವಾರ ಮುಂಜಾನೆ ನಡೆದಿದೆ.

ಬೇಲೂರಿನಿಂದ ಕೋಳಿ ತುಂಬಿಸಿಕೊoಡು ಅರೇಹಳ್ಳಿ ಮಾರ್ಗವಾಗಿ ಪುತ್ತೂರಿಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದ್ದು ಬಾಕ್ಸ್ನಲ್ಲಿದ್ದ ನೂರಾರು ಕೋಳಿಗಳು ಮೃತಪಟ್ಟಿವೆ.

ಚಾಲಕ ಹಾಗೂ ಇನ್ನೊಬ್ಬ ವ್ಯಕ್ತಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ತಿರುವಿನಲ್ಲಿ ಅಪಘಾತ ಪ್ರಕರಣಗಳು ಪದೇ ಪದೇ ಮರುಕಳಿಸುತ್ತಿರುವುದರಿಂದ ರಸ್ತೆ ಅಗಲಿಕರಣ ಮಾಡುವುದೊಂದೆ ಸಮಸ್ಯೆಗಳಿಗೆ ಪರಿಹಾರವೆಂದು ಇಲ್ಲಿನ ನಿವಾಸಿಗಳು ಆಗ್ರಹಿಸಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *