ಬೇಲೂರು : ಇತ್ತಿಚೀನ ದಿನಗಳಲ್ಲಿ ಪುಸ್ತಕದ ಅಂಗಡಿಗಳಿಗಿಂತ ಮಧ್ಯದ ಅಂಗಡಿ ಹೆಚ್ಚಾಗುತ್ತಿರುವುದು ವಿಷಾದದ ಸಂಗತಿಯಾಗಿದೆ. ಅದ್ದರಿಂದ ಎಲ್ಲರೂ ಪುಸ್ತಕ ಓದಬೇಕು ಒಳ್ಳೆಯ ಪುಸ್ತಕ ಮನುಷ್ಯನ ಬದುಕನ್ನೇ ಬದಲಾಯಿಸುತ್ತದೆ ಎಂದು ಜಿಲ್ಲಾ 22 ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಶ್ರೀಮತಿ ಶೈಲಜಾ ಹಾಸನ ಅವರು ಹೇಳಿದರು.

ತಾಲ್ಲೂಕು ಸರ್ಕಾರಿ ನೌಕರರ ಸಂಘದಲ್ಲಿ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದ ಆಶ್ರಯದಲ್ಲಿ ಮಧುಮಾಲತಿ ರುದ್ರೇಶ್ ಅವರ ಸ್ವಾತಿ ಹನಿ ಪ್ರೀತಿಮುತ್ತಾದಂತೆ ಹಾಗೂ ಕು. ಶಶಿ ಎಂ.ಟಿ.ಮಂಡಲಮನೆ ಅವರ ಬೆಳ್ಳಿ ಬೆಳಕು ಕವನ ಸಂಕಲನ ಬಿಡುಗಡೆ ಸಮಾರಂಭ ಕಾರ್ಯವನ್ನು ಉದ್ಘಾಟಿಸಿ ಮಾತನಾಡಿದ ಅವರು

ಐತಿಹಾಸಿಕ ಬೇಲೂರಿನಲ್ಲಿ ಅನೇಕ ಸಾಹಿತಿಗಳು, ಕವಿಗಳಿದ್ದಾರೆ ಇಂದು ಮಧುಮಾಲತಿ, ಶಶಿ ಅವರು ಸೇರ್ಪಡೆಯಾಗುತ್ತಿರುವುದು ಸಂತೋಷವಾಗಿದೆ. ಮನುಷ್ಯನ ಅಂತರಾಳದಲ್ಲಿ ವಿಭಿನ್ನ ಭಾವನೆಯ ಗುಚ್ಛವಿದ್ದು, ಅದನ್ನು ಹೊರಗೆಡವಿ ಲೋಕ ಹಿತಕ್ಕೆ ಮುಡಿಸಿ ಮುಕ್ತಿ ಹೊಂದುವುದೇ ನಿಸ್ವಾರ್ಥ ಬದುಕಾಗಿದೆ. ಓದು ಮನುಷ್ಯನನ್ನು ಮನುಷ್ಯನನ್ನಾಗಿ ನೋಡುವುದನ್ನು ಕಲಿಸುತ್ತದೆ.

ಇಂದಿನ ಮಕ್ಕಳಿಗೆ ಕಂಪ್ಯೂಟ‌ರ್, ಮೊಬೈಲ್ ಅಟ್ಯಾಚ್‌ಮೆಂಟ್‌ ಜಾಸ್ತಿ ಇರುತ್ತದೆ. ಪುಸ್ತಕ ಓದುವ ಹವ್ಯಾಸ ಕಡಿಮೆ ಇರುತ್ತದೆ. ಪೋಷಕರು ಮಕ್ಕಳಿಗೆ ಬಾಲ್ಯದಲ್ಲೇ ಅವರ ವಯಸ್ಸಿಗೆ ಅನುಗುಣವಾಗಿ ಮೊಬೈಲ್ ಬದಲಿಗೆ ಪುಸ್ತಕಗಳನ್ನು ಕೊಡಿಸಿ ಓದಲು ಪ್ರೇರೆಪಿಸಬೇಕು. ಜೊತೆಗೆ ಪೋಷಕರು ಸಹ ಅವರೊಟ್ಟಿಗೆ ಓದುವ ಅಭ್ಯಾಸ ಬೆಳೆಸಿಕೊಳ್ಳಲು ಮುಂದಾಗಬೇಕು ಎಂದರು.

ಮೈಸೂರು ಮುಕ್ತ ವಿಶ್ವ ವಿದ್ಯಾಲಯದ ಸಂಯೋಜನಾಧಿಕಾರಿ ಸಾಹಿತಿ ಅವರೇಕಾಡು ವಿಜಯಕುಮಾರ್ ಮಾತನಾಡಿ ವಾಸ್ತವ ಜಗತ್ತಿನಲ್ಲಿ ಓದುವ ಬಾಗ್ಯ ಒಂದಾದರೆ ಬರೆಯುವ ಬಾಗ್ಯವು ಒಂದಾಗಿದೆ, ಬರವಣಿಗೆ ಸುಲಭದ ಮಾತಲ್ಲ ಕಾವ್ಯಕ್ಕೆ ತನ್ನದೇ àಅದ ಶಕ್ತಿ ಮತ್ತು ಸ್ವಂತಿಕೆ ಹೊಂದಿದೆ, ಭಾಷೆಗೆ ಪ್ರಮುಖ ಅತ್ತಿರವೆಂದರೆ ಅದು ಕಾವ್ಯ ಸಾಮಾಜಿಕ ಸ್ಥಿತಿಗತಿಗಳ ಬಗ್ಗೆ ವಿವರ ಕಾವ್ಯದಲಿರುತ್ತದೆ.

ಸಾಮಾನ್ಯ ಜನರ ಆಶೂತ್ತರಗಳನ್ನು ಚಿತ್ರೀಸುವ ಕೆಲಸ ಇಂದು ಕಾವ್ಯ ರಚನೆ ಕಾರರಾದ ಮದುಮಲಾತಿ, ಶಶಿ ಅವರು ಬರೆದಿದ್ದಾರೆ,ಕೃತಿ ಬಿಡುಗಡೆ ಹಾಗೂ ಪರಿಚಯವನ್ನು ಕಸಾಪ ಮಾಜಿ ಅಧ್ಯಕ್ಷ ಟಿ.ಡಿ.ತಮ್ಮಣ್ಣಗೌಡ, ಹಾಗೂ ಸೋಂಶೋಧಕ ಎಸ್ ವಟಿ ಕಾವ್ಯದ ಬಗ್ಗೆ ಪರಿಚಯಿಸಿದರು.

ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಿ.ಎಲ್.ರಾಜೇಗೌಡ, ಕಸಾಪ 8 ನೆಯ ಸಮ್ಮೇಳನದ ಸರ್ವಾಧ್ಯಕ್ಷೆ ಇಂದಿರಮ್ಮ, ಕಸಾಪ ಕೋಶಾಧ್ಯಕ್ಷ ಮಾ.ನ‌.ಮಂಜೇಗೌಡ. ಸಾಹಿತಿ ಸಂಶೋಧಕ ಡಾ.ಶ್ರೀ ವತ್ಸ ಎಸ್.ವಟಿ. ಸ.ಪ.ಪೂ.ಕಾಲೇಜು ಪ್ರಾಂಶುಪಾಲ ಎಸ್.ಗಣೇಶ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಂಜುನಾಥ್, ಕಸಾಪ ಮಾಜಿ ಅಧ್ಯಕ್ಷ ಮಾ.ಶಿವಮೂರ್ತಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಕಸಾಪ ಗೌರವ ಕಾರ್ಯದರ್ಶಿ ಬಿ.ಬಿ.ಶಿವರಾಜು, ಆರ್.ಎಸ್.ಮಹೇಶ್, ಸಂಘಟನಾ ಕಾರ್ಯದರ್ಶಿ ಬೊಮ್ಮಡಿಹಳ್ಳಿ ಕುಮಾರಸ್ವಾಮಿ, ಸ್ವಾತಿಹನಿ ಪ್ರೀತಿಮುತ್ತಾದಂತೆ ಕವಯಿತ್ರಿ ಮಧುಮಾಲತಿ ರುದ್ರೇಶ್, ಬೆಳ್ಳಿ ಬೆಳಕು ಕವಯಿತ್ರಿ ಕು.ಶಶಿ ಎಂ.ಟಿ. ಮಂಡಲಮನೆ ಸೇರಿದಂತೆ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಇದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *