
ಚನ್ನರಾಯಪಟ್ಟಣ : ಪಟ್ಟಣದ ಸರ್ಕಾರಿ ಆಸ್ಪತ್ರೆಯ ಸಭಾ ಗಣದಲ್ಲಿ ಏರ್ಪಡಿಸಿದ ವೇದಿಕೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ. ಯೋಗೇಶ್ ಮಾತನಾಡಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರು 34 ಪದವಿಗಳನ್ನು ಪಡೆದ ಏಕೈಕ ವ್ಯಕ್ತಿಯಾಗಿದ್ದಾರೆ ಎಂದು ತಿಳಿಸಿದರು.
ಅಂಬೇಡ್ಕರ್ ಅವರು ಅತ್ಯುನ್ನತವಾದ ವಿಶ್ವವಿದ್ಯಾಲಯಗಳಲ್ಲಿ ಡಾಕ್ಟರೇಟ್ ಪದವಿಗಳನ್ನು ಪಡೆದು ಜಗತ್ತಿನ ಸರ್ವಶ್ರೇಷ್ಠ ಜ್ಞಾನಿಗಳಲ್ಲಿ ಒಬ್ಬರಾಗಿದ್ದಾರೆ, ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರು ಸಂವಿಧಾನ ಶಿಲ್ಪಿ, ಭಾರತ ರತ್ನ,ಸಮಾನತವಾದಿ, ಸಮಾಜವಾದಿ, ಮಾನವತವಾದಿ, ಸಾಮಾಜಿಕ ತಜ್ಞ, ಅರ್ಥಶಾಸ್ತ್ರಜ್ಞ, ರಾಜಕೀಯ ತಜ್ಞ ಎಂಬ ಬಿರುದುಗಳನ್ನು ಪಡೆದು, ವಿಶ್ವಸಂಸ್ಥೆಯ ನೀಡುವ ವಿಶ್ವ ರತ್ನ ಎಂಬ ಬಿರುದನ್ನು ಪಡೆದು ನಮ್ಮ ಭಾರತ ದೇಶಕ್ಕೆ ಕೀರ್ತಿಯನ್ನು ತರುವ ಮೂಲಕ ಭಾರತ ದೇಶದ ಯುವ ಪೀಳಿಗೆಗೆ ಆದರ್ಶಪ್ರಾಯರಾಗಿದ್ದಾರೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ತಾಲೂಕು ಆಡಳಿತ ವೈದ್ಯಧಿಕಾರಿಗಳಾದ ಡಾ. ಮಹೇಶ್, ಡಾಕ್ಟರ್ ಯೋಗೇಶ್, ಡಾಕ್ಟರ್ ಶೇಖರ್, ಡಾಕ್ಟರ್ ಭಾನುವತಿ, ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ನಾಗರಾಜು, ಲಯನ್ಸ್ ಕ್ಲಬ್ ನ ಪದಾಧಿಕಾರಿಗಳಾದ ಮಂಜುನಾಥ್ ,ಕಾಂತರಾಜ್ ಗೋವಿಂದ್ ರಾಜ್, ಆಸ್ಪತ್ರೆಯ ನೌಕರರಾದ ನೀಲಮ್ಮ ಸೇರಿದಂತೆ ಇತರರು ಹಾಜರಿದ್ದರು.
