ಭಾರತ ಚುನಾವಣಾ ಆಯೋಗದ ನಿರ್ದೇಶನದ ಅನುಸಾರ 16-ಹಾಸನ ಲೋಕಸಭಾ ಕ್ಷೇತ್ರದ 199-ಸಕಲೇಶಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಚುನಾವಣಾ ಕರ್ತವ್ಯದಲ್ಲಿ ನಿಯೋಜನೆಗೊಂಡಿರುವ ಅಧಿಕಾರಿ ಸಿಬ್ಬಂದಿಗಳಿಗೆ ಮತದಾನ ಮಾಡಲು ಮತಗಟ್ಟೆಗೆ ತೆರಳಲು ಸಾಧ್ಯವಾಗದ ಕಾರಣ 12ಎ ನಮೂನೆಯಲ್ಲಿ ಅರ್ಜಿ ಸಲ್ಲಿಸಿದವರು ನಮೂನೆ 129 (ಇ.ಡಿ.ಸಿ) ಪಡೆದು ದಿನಾಂಕ: 26.04.2024 ರಂದು ನಿಯೋಜನೆಗೊಂಡ ಮತಗಟ್ಟೆಯಲ್ಲಿಯೇ ಮತದಾನ ಮಾಡಬಹುದು

ಆದ್ದರಿಂದ 12ಎ ಸಲ್ಲಿಸಿರುವ ಅಧಿಕಾರಿ/ಸಿಬ್ಬಂದಿಗಳು ದಿನಾಂಕ: 23-04-2024 ಹಾಗೂ 24-04-2024 ರಂದು ಬೆಳಗ್ಗೆ 10.00 ಗಂಟೆಯಿಂದ ತಾಲ್ಲೂಕು ಕಛೇರಿ ಸಕಲೇಶಪುರ ಇಲ್ಲಿ ಹಾಜರಾಗಿ ಕೌಂಟರ್ ಮೂಲಕ ನಮೂನೆ 12ಬಿ (ಇ.ಡಿ.ಸಿ) ಪಡೆಯಲು ತಿಳಿಸಿದೆ.

ಹೆಚ್ಚಿನ ಮಾಹಿತಿಗಾಗಿ 199-ಸಕಲೇಶಪುರ ವಿಧಾನಸಭಾ ಕ್ಷೇತ್ರದ ಅಂಚೆ ಮತಪತ್ರದ ನೂಡಲ್ ಅಧಿಕಾರಿಯಾದ ಶ್ರೀ ನಿತಿನ್ (7760255219) ಅಥವಾ ಕುಮಾರಸ್ವಾಮಿ(9242314161) ಇವರನ್ನು ಸಂಪರ್ಕಿಸಲು ಕೋರಿದೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *