
ಹಾಸನ: ನಗರದ ಅರಳೇಪೇಟೆ ರಸ್ತೆ ಮತ್ತು ಗಾಣೀಗರ ಬೀದಿ ಮಧ್ಯೆ ಇರುವ ರಂಗಾಚಾರ್ ಗಲ್ಲಿಯ ಯುಜಿಡಿ ದುರಸ್ತಿ, ರಸ್ತೆ ಸರಿಪಡಿಸಲು ಕಾಮಗಾರಿಗೆ ಹಣ ಬಿಡುಗಡೆಯಾದರೂ ಕೂಡ ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಇಲ್ಲಿನ ಸುತ್ತಮುತ್ತ ನಿವಾಸಿಗಳೂ ಪ್ರತಿನಿತ್ಯ ನರಕಯಾಥನೆ ಅನುಭವಿಸಬೇಕಾಗಿದೆ. ಇನ್ನೊಂದು ವಾರದಲ್ಲಿ ಸರಿಪಡಿಸದಿದ್ದರೇ ನಗರಸಭೆ ಮುಂದೆ ನಿವಾಸಿಗಳೆಲ್ಲಾ ಸೇರಿ ಪ್ರತಿಭಟನೆ ಮಾಡುವುದಾಗಿ ಸ್ಥಳೀಯರು ಎಚ್ಚರಿಸಿದ್ದಾರೆ.
೧೯ನೇ ವಾರ್ಡಿನ ನಿವಾಸಿ ಮಾಲಾ ಹಾಗೂ ನಿವಾಸಿಗಳು ಮಾಧ್ಯಮದೊಂದಿಗೆ ಮಾತನಾಡಿ, ೧೯ನೇ ವಾರ್ಡಿನ ನಗರದ ಉತ್ತರ ಬಡಾವಣೆ ಸರಕಾರಿ ಶಾಲೆ ಬಳಿ ಅರಳೇಪೇಟೆ ರಸ್ತೆ ಹಾಗೂ ಗಾಣೀಗರ ಬೀದಿ ಮಧ್ಯೆ ಇರುವ ರಂಗಾಚಾರ್ ಗಲ್ಲಿಯಲ್ಲಿ ಯುಜಿಡಿ ಸಮಸ್ಯೆ, ರಸ್ತೆ ಸಮಸ್ಯೆ, ಕಸ ತುಂಬಿದ ಸಮಸ್ಯೆಯಿಂದ ಪ್ರತಿನಿತ್ಯ ನರಕ ಯಾಥನೆಯನ್ನು ಇಲ್ಲಿನ ನಿವಾಸಿಗಳು ಅನುಭವಿಸಬೇಕಾಗಿದೆ.
ಇಲ್ಲಿನ ಜನರ ಗೋಳನ್ನು ಯಾರು ಕೇಳುವವರಿಲ್ಲ. ಯುಜಿಡಿ ತುಂಬಿಕೊಂಡು ೬ ತಿಂಗಳುಗಳೇ ಕಳೆದು ಹೋಗಿದೆ. ಮಳೆ ಬಂದರೇ ಸಾಕು ಮನೆಗೆ ಯುಜಿಡಿ ನೀರು ಹರಿಯುತ್ತದೆ. ಈ ಬಗ್ಗೆ ನಗರಸಭೆಗೆ ಮನವಿ ನೀಡಿ ಮೂರು ತಿಂಗಳುಗಳಾಗಿದೆ. ಈ ಕಾಮಗಾರಿಗೆ ಒಪ್ಪಿಗೆ ದೊರಕಿದ್ದರೂ ಕೂಡ ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೆಲಸ ನಡೆಯುತ್ತಿಲ್ಲ.
ಇಲ್ಲಿನ ನಿವಾಸಿಗಳು ಅನೇಕ ಬಾರಿ ನಗರಸಭೆ ಹಾಗೂ ಜಿಲ್ಲಾಧಿಕಾರಿ Pಛೇರಿಗೆ ಹೋಗಿ ಮನವಿ ಮಾಡುತ್ತಿರುವ ಹಿನ್ನಲೆಯಲ್ಲಿ ಎರಡು ದಿವಸ ಬಂದು ರಸ್ತೆ ಹಗೆದು ಹೋದವರು ಮತ್ತೆ ಇತ್ತ ಕಡೆ ಸುಳಿಯಲೆ ಇಲ್ಲ. ಡ್ರೈನ್ಭೆಜ್ ನಿಷ್ಕ್ರಿಯವಾಗಿರುವ್ಯದರಿಂದ ಈ ನೀರು ಕೊಳವೆ ಬಾವಿ ನೀರಿಗೆ ಸೇರುತ್ತಿದೆ.
ಇನ್ನು ಗಬ್ಬು ವಾಸನೆ. ಮನೆ ಒಳಗೆ ವಾಸ ಮಾಡಲು ಆಗುತ್ತಿಲ್ಲ. ಈಗಾಗಲೇ ಎರಡು ಮೂರು ಮನೆಚಿiವರು ಮನೆ ಖಾಲಿ ಮಾಡಿಕೊಂಡು ಬೇರೆ ಕಡೆ ಬಾಡಿಗೆ ಮನವಿಯಲ್ಲಿ ಇರಬೇಕಾದ ಪರಿಸ್ಥಿತಿ ಬಂದಿತು. ಕೊಳಚೆ ನೀರು ಹರಿಯುತ್ತಿರುವ್ಯದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಅನೇಕರಿಗೆ ಡೆಂಗ್ಯೂ ಜ್ವರ ಬಂದಿದೆ. ಅನೇಕ ರೋಗ ರುಜಿನಗಳು ಸಂಭವಿಸುತ್ತಿದೆ. ಮನೆಯಲ್ಲಿ ಚಿಕ್ಕ ಮಕ್ಕಳು ಇದ್ದು ಕೂಡಲೇ ಸರಿಪಡಿಸದಿದ್ದರೇ ನಗರಸಭೆ ಮುಂದೆ ನಿವಾಸಿಗಳೆಲ್ಲಾ ಸೇರಿ ಪ್ರತಿಭಟನೆ ಮಾಡಬೇಕಾಗದ ಅನಿವಾರ್ಯತೆ ಬರುತ್ತದೆ ಎಚಿದು ಇದೆ ವೇಳೆ ಎಚ್ಚರಿಸಿದರು.
ನಿವಾಸಿ ಲಕ್ಷ್ಮಿ ಮಾಧ್ಯಮದೊಂದಿಗೆ ಮಾತನಾಡಿ, ಸುಮಾರು ವರ್ಷಗಳಿಂದ ರಂಗಾಚಾರ್ ಗಲ್ಲಿಯಲ್ಲಿ ಹಲವಾರು ಕುಟುಂಬಗಳು ವಾಸವಿದ್ದು, ಈ ಗಲ್ಲಿಯಲ್ಲಿ ಡ್ರೈನ್ಭೆಜ್ ದುರಸ್ತಿಯಲ್ಲಿದ್ದು, ಪದೇಪದೇ ಡ್ರೈನ್ಭೆಜ್ ಚೇಂಬರ್ ಭರ್ತಿಯಾಗಿ ಮತ್ತು ಡ್ರೈನ್ಭೆಜ್ ನೀರು ಕೊಳವೆ ಬಾವಿ ನೀರಿಗೆ ಸೇರುತ್ತಿದ್ದು, ಇಲ್ಲಿನ ನಿವಾಸಿಗಳಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ಈ ವಿಚಾರವಾಗಿ ತಮ್ಮ ಇಚಿಜಿನಿಯರ್ ಹತ್ತಿರ ಸಮಸ್ಯೆಯ ಬಗ್ಗೆ ವಿವರವಾಗಿ ತಿಳಿಸಿದ ನಚಿತರ ಇಲ್ಲಿನ ಪೈಪ್ ಲೈನ್ ಸಂಪೂರ್ಣವಾಗಿ ನಿಷ್ಕ್ರಿಯವಾಗಿದೆ ಇದನ್ನು ಬದಲಿಸುವ ಅವಶ್ಯಕತೆಯಿದೆ ಎಚಿದು ಮಾಹಿತಿ ನೀಡಿದ್ದರು.
ಈ ವಿಚಾರವಾಗಿ ಈ ವಾರ್ಡಿನ ನಗರಸಭಾ ಸದಸ್ಯರಿಗೂ ಮಾಹಿತಿ ತಿಳಿಸಿ ಆಯಿತು ಈ ಪೈಪ್‌ಲೈನ್ನನ್ನು ವಿಧಾನಸಭಾ ಚುನಾವಣಾ ಪೂರ್ವ ದಲ್ಲಿಯೇ ಬದಲಿಸುವುದಾಗಿ ಭರವಸೆ ನೀಡಿದರು.
ಚುನಾವಣೆ ಕಳೆದು ವರ್ಷಗಳು ಉರುಳಿದರು ಇಲ್ಲಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರಕಿರುವುದಿಲ್ಲ. ಇನ್ನು ಕಾಮಗಾರಿ ಮಾಡಬೇಕಾದರೇ ನೆಲ್ಲಿ ಪೈಪ್ ಹೊಡೆದು ಹಾಕಿದ್ದು, ದುರಸ್ತಿ ಮಾಡದೇ ಆಗೆ ಹೊರಟು ಹೋಗಿದ್ದಾರೆ. ಈ ವಿಷಚಿiವನ್ನು ಗಂಭೀರವಾಗಿ ಪರಿಗಣಿಸಿ ಇಲ್ಲಿನ ಸಮಸ್ಯೆಗೆ ಶಾಶ್ವತ ಪರಿಹಾರ ಪರಿಹರಿಸಿಕೊಡಬೇಕೆಂದು ಎಚಿದು ತಮ್ಮ ಅಳಲು ತೋಡಿಕೊಂಡರು.
ಇದೆ ವೇಳೆ ನಿವಾಸಿಗಳಾದ ಹೆಚ್.ಎಂ. ಸರಸ್ವತಿ, ಎ.ಎಂ. ದೇವಿಕಾಂಬ, ಲತಾ, ಧನಲಕ್ಷ್ಮಿ, ಲಕ್ಷ್ಮೀಶ್, ವರಲಕ್ಷ್ಮಿ, ಮನು, ಕುಕ್ಕೇಶ್ರೀ ಇತರರು ಉಪಸ್ಥಿತರಿದ್ದರು.



