ಆಲೂರು: ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿಯವರು ಮೂರನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದ ಹಿನ್ನಲೆಯಲ್ಲಿ ತಾಲೂಕಿನ ಕೆ ಹೊಸಕೋಟೆಯ ವೃತ್ತದಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಜೈಕಾರ ಹಾಕುತ್ತಾ ಸಂಭ್ರಮಿಸಿದರು. ನಂತರ ಕಾಡ್ಲೂರ್ ಕೋಡಿಗೆ, ಟೆಂಪಲ್ ವೃತ್ತಗಳಲ್ಲಿ, ಅಪಾರ ಬಿಜೆಪಿ ಕಾರ್ಯಕರ್ತರ ಎಲ್ಲರು ಕೇಕ್ ಕತ್ತರಿಸಿ ಸಂಭ್ರಮಿಸಿದರು.

ಬಿಜೆಪಿ ಹಿರಿಯ ಮುಖಂಡ ಉದಯ್ ಕುಮಾರ್ ಮಾತನಾಡಿ , ನಮ್ಮ ನೆಚ್ಚಿನ ನಾಯಕರು ನರೇಂದ್ರ ಮೋದಿಯವರು 3ನೇ ಬಾರಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಈಗಾಗಲೇ ಎರಡು ಬಾರಿ 10 ವರ್ಷಗಳ ಕಾಲ ಆಡಳಿತ ನಡೆಸಿದ್ದಾರೆ. ಇವರ ಕಾಲದಲ್ಲಿ ಭಾರತ ದೇಶ ಅತ್ಯಂತ ಪ್ರಭಲವಾಗಿ ಹೊರಹೊಮ್ಮಿದೆ. ಅವರು ಕೈಗೊಂಡಂತಹ ಕೆಲಸ ಕಾರ್ಯಗಳು, ಕಾರ್ಯಚಟುವಟಿಕೆಗಳು ಗಮನರ್ಹವಾದ ಅಂಶಗಳಿವೆ ಎಂದರು.

ಇದೆ ವೇಳೆ , ಬಿಜೆಪಿ ಮಖಂಡ ಪ್ರಸಾದ್, ಜೆ ಡಿ ಎಸ್ ಮಖಂಡ ಯೋಗರಾಜ್ ,ಶಕ್ತಿ ಕೇಂದ್ರ ದ ಅಧ್ಯಕ್ಷ ನಂದನ್, ಮಾಜಿ ಗ್ರಾಂ.ಪಂ.ಸದಸ್ಯರುದ್ರೇಶ್ ಕಾಡ್ಲೂರು,ಹರ್ಷವರ್ಧನ್, ಚಂದನ್ ಗ್ರಾ ಪಂ ಸದಸ್ಯ, ಜೆಡಿಎಸ್ ಮುಖಂಡಗಳಾ ಶರತ್,ಚಂದ್ರಶೇಖರ್, ಇತರರು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *