
ಹಾಸನ ಜಿಲ್ಲೆ ಚನ್ನರಾಯಪಟ್ಟಣದ ನ್ಯಾಷನಲ್ ಕ್ಲಾಸಿಕಲ್ ಡ್ಯಾನ್ಸ್ ಅಕಾಡೆಮಿ ಮತ್ತು ಶೃಂಗೇರಿ ಶ್ರೀ ಶಾರದಾಂಬ ಪೀಠದ ಶ್ರೀಗುರು ಶಂಕರಾಚಾರ್ಯರ ಅನುಗ್ರಹದಿಂದ ಜಗದ್ಗುರುಗಳಾದ ಶ್ರೀ ಶ್ರೀ ಭಾರತಿ ತೀರ್ಥ ಮಹಾಸ್ವಾಮೀಜಿಗಳು ಮತ್ತು ಶ್ರೀ ಶ್ರೀ ವಿದುಶೇಖರಭಾರತಿ ಮಹಾಸ್ವಾಮೀಜಿಗಳವರ ಆಶೀರ್ವಾದದಿಂದ ಜೂನ್ 9 ಭಾನುವಾರ 62ನೇ ರಾಷ್ಟ್ರೀಯ ನೃತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ಶೃಂಗೇರಿ ಶ್ರೀ ಶಾರದಾ ಪೀಠದ ಗೌರವಾನ್ವಿತ ಆಡಳಿತಾತ್ಮಕ ಅಧಿಕಾರಿಗಳಾದ ಪಿ.ಎ.ಮುರಳಿ ರವರು
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಜಗದಂಬೆಯ ಸನ್ನಿಧಿಯಲ್ಲಿ ರಾಷ್ಟ್ರೀಯ ನೃತ್ಯೋತ್ಸವ ನಡೆಯುತ್ತಿರುವುದು ಸಂತೋಷ ತಂದಿದೆ ಈ ದಿನ ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲಾ ನೃತ್ಯ ಕಲಾವಿದರಿಗೂ ಶುಭವಾಗಲಿ ಈ ದಿನ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ ಎಂದು ಆಶೀರ್ವದಿಸಿದರು
ಬೆಳಗ್ಗೆ 10 ರಿಂದ ಸಂಜೆ 5:00 ವರೆಗೆ ದಿನ ನಡೆಯುವ ನೃತ್ಯೋತ್ಸವ ಕಾರ್ಯಕ್ರಮದಲ್ಲಿ ಭಾರತ ದೇಶದ ಚೆನ್ನೈ, ಆಂಧ್ರ ,ಪ್ರದೇಶ್, ಒರಿಸ್ಸಾ ಗುಜರಾತ್ ,ಬಿಹಾರ್ ,ಉತ್ತರ ಪ್ರದೇಶ್ ಸೇರಿದಂತೆ ಕರ್ನಾಟಕದ ಹಲವಾರು ಜಿಲ್ಲೆಗಳಿಂದ ಆಗಮಿಸಿದ್ದ 135 ಕಲಾವಿದರು ಭರತನಾಟ್ಯ ಕುಚುಪುಡಿ ಓಡಿಸಿ ಕಥಕ್ ಸೇರಿದಂತೆ ವಿವಿಧ ನೃತ್ಯಗಳನ್ನು ಪ್ರದರ್ಶನ ನೀಡುತ್ತಿದ್ದಾರೆಂದು ಹಾಗೂ 2017 ರಲ್ಲಿ ಸ್ಥಾಪಿತವಾದ ನ್ಯಾಷನಲ್ ಕ್ಲಾಸಿಕಲ್ ಡ್ಯಾನ್ಸ್ ಅಕಾಡೆಮಿಯು ವಿಶ್ವದಾದ್ಯಂತ 24,000 ನೃತ್ಯ ಕಲಾವಿದರ ಸದಸ್ಯತ್ವವನ್ನು ಹೊಂದಿರುವ ಅಕಾಡೆಮಿ ವತಿಯಿಂದ ಈ ವರವಿಗೆ 61 ರಾಷ್ಟ್ರೀಯ ನೃತ್ಯೋತ್ಸವಗಳನ್ನು ನಡೆಸಿಕೊಂಡು ಬಂದಿದ್ದು ಭಾರತ ದೇಶದ ಎಲ್ಲಾ ಪ್ರಖ್ಯಾತ ದೇವಾಲಯಗಳಲ್ಲಿ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ಕಲಿಯುತ್ತಿರುವ ಕಲಿತಿರುವ ಹಾಗೂ ವೇದಿಕೆ ವಂಚಿತ 12500 ಕಲಾವಿದರಿಗೆ ವೇದಿಕೆಯನ್ನು ಕಲ್ಪಿಸಿಕೊಡಲಾಗಿದೆ
ಭಾರತ ದೇಶದ ಎಲ್ಲಾ ದೇವಾಲಯಗಳು ನಮ್ಮ ಕಾರ್ಯಕ್ರಮಕ್ಕೆ ಸಂಪೂರ್ಣ ಪ್ರೋತ್ಸಾಹ ನೀಡಿ ಆಶೀರ್ವದಿಸುತ್ತಾ ಬಂದಿದ್ದಾರೆ ಅಲ್ಲದೆ ಶ್ರೀಲಂಕಾ, ಮಲೇಶಿಯಾ ,ನ್ಯೂಜಿಲ್ಯಾಂಡ್, ಥೈಲ್ಯಾಂಡ್, ಸೇರಿದಂತೆ ಹಲವಾರು ಭಾಗಗಳಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ನೃತ್ಯೋತ್ಸವಗಳನ್ನು ನಡೆಸುತ್ತಾ ಬಂದಿದೆವೆ ಈ ದಿನ ಶೃಂಗೇರಿಯಲ್ಲಿ 4 ವರ್ಷದ ಮಗುವಿನಿಂದ 55 ವರ್ಷದ ವಯಸ್ಸಿನ ಕಲಾವಿದರು ತಮ್ಮ ನೃತ್ಯ ಪ್ರದರ್ಶನ ನೀಡಿ ಶ್ರೀ ಶಾರದಾಂಬೆಯ ಪಾದಾರವಿಂದಕ್ಕೆ ಹಾಗೂ ಗುರುಗಳ ಆಶೀರ್ವಾದಕ್ಕಾಗಿ ಸಮರ್ಪಣೆ ಮಾಡುತ್ತಿದ್ದಾರೆ ಹಾಗೂ ಸಂಜೆ ಒಂದು ಗಂಟೆಗಳ ಕಾಲ ಪ್ರಸಿದ್ಧ ಕಲಾವಿದರು ಸಮೂಹ ತಬಲ ನುಡಿಸುವ ಕಾರ್ಯಕ್ರಮವನ್ನು ಮಹಾತಾಯಿಯ ಪಾದಾರವಿಂದಕ್ಕೆ ಸಮರ್ಪಣೆ ಮಾಡುತ್ತಿದ್ದಾರೆಂದು ನೃತ್ಯೋತ್ಸವ ಆಯೋಜನ ಕಾರ್ಯದರ್ಶಿ ಗಿನ್ನಿಸ್ ದಾಖಲೆ ಭರತನಾಟ್ಯ ಕಲವಿದೆ ವಿದೂಷಿ ಡಾ.ಸ್ವಾತಿ ಪಿ. ಭಾರದ್ವಾಜ್ ತಿಳಿಸಿದರು.



