ಹಾಸನ: ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮತದಾರರ ಹಿತಾದೃಷ್ಠಿಯಲ್ಲಿ ದೇವೇಗೌಡರ ಕುಟುಂಬದ ವಿರುದ್ಧ ಣೇರವಾಗಿ ಹೋರಾಟ ಮಾಡಕೊಂಡು ಬರುತ್ತಿರುವ ಪಕ್ಷದ ಶಿಸ್ತಿನ ಸಿಪಾಯಿ ವಿನಯ್ ಗಾಂಧಿ ಅವರಿಗೆ ನಗರಭಿವೃದ್ಧಿ ಪ್ರಾಧೀಕರಾದ ಅಧ್ಯಕ್ಷರ ಹುದ್ದೆ ನೀಡುವಂತೆ ಆಗ್ರಹಿಸಿ ಹಾಗೂ ಕೆ.ಎನ್. ರಾಜಣ್ಣ ಅವರನ್ನು ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾಗಿ ಮುಂದುವರೆಸಲು ಒತ್ತಾಯಿಸಿ ಕಾಂಗ್ರೆಸ್ ಪಕ್ಷದಿಂದ ಪ್ರತಿಭಟಿಸಿ ಅಪರ ಜಿಲ್ಲಾಧಿಕಾರಿ ಕೆ.ಟಿ. ಶಾಂತಲಾ ಅವರಿಗೆ ಮನವಿ ಸಲ್ಲಿಸಲಾಯಿತು.

ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ಎನ್.ಆರ್. ವೃತ್ತದ ಮೂಲಕ ಜಿಲ್ಲಾಧಿಕಾರಿ ಕಛೇರಿ ಆವರಣಕ್ಕೆ ಬಂದ ಅವರು, ಕಾಂಗ್ರೆಸ್ ಮುಖಂಡರಾದ ಮುನಿಸ್ವಾಮಿ ಮಾಧ್ಯಮದೊಂದಿಗೆ ಮಾತನಾಡಿ, ಸಾಮಾಜಿಕ ನ್ಯಾಯಕೋಸ್ಕರ ಹಾಸನ ಲೋಕಸಭೆಯಲ್ಲಿ ೮ ವಿಧಾನಸಭಾ ಕ್ಷೇತ್ರದಲ್ಲಿ ನಿಷ್ಠಾವಂತ ಕಾಂಗ್ರೇಸ್ ಕಾರ್ಯಕರ್ತರು ಹಾಗೂ ಮುಖಂಡರ ಮನವಿ ಲೋಕಸಭೆಯಲ್ಲಿ ಒಂದು ವಿಧಾಸಭಾ ಟಿಕೆಟನ್ನು ಲಿಂಗಾಯತರಿಗೆ ನೀಡಬೇಕಾಗಿದೆ ಹಾಗೂ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನವನ್ನು ದಲಿತರಿಗೆ, ದಾಸ ಒಕ್ಕಲಿಗರಿಗೆ, ಮುಸಲ್ಮಾನರು, ಕ್ರಿಶ್ಚಿಯನ್ನರಿಗೆ ಹಾಗೂ ಹಿಂದುಳಿದ ವರ್ಗದವರಿಗೆ ನೀಡಬೇಕಾಗಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು, ಸನ್ಮಾನ್ಯ ಉಪ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್‌ರವರು, ಸನ್ಮಾನ್ಯ ಉಸ್ತುವಾರಿ ಸಚಿವರಾದ ಕೆ. ಎನ್. ರಾಜಣ್ಣ ನವರಲ್ಲಿ ಮನವಿ ಮಾಡುತ್ತೇವೆ ಎಂದರು. ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ೩೦ ವರ್ಷಗಳಿಂದ ಕಾಂಗ್ರೇಸ್ ಶಾಸಕರಿಲ್ಲದೆ ಕಾಂಗ್ರೇಸ್ ಮೇಲೆ. ಜೆಡಿಎಸ್ ಪಕ್ಷದ ಕಾರ್ಯಕರ್ತರು ದಬ್ಬಾಳಿಕೆ ದೌರ್ಜನ್ಯ ಸಾವು ನೋವುಗಳಲ್ಲದೇ ಹಲವಾರು ರೈತರ ಜಮೀನುಗಳನ್ನು ಹಾನಿಮಾಡಿ ಹಲವಾರು ಮನೆಗಳನ್ನು ಜಖಂಗೊಳಿಸಿ ಹಲವಾರು ಕಾಂಗ್ರೇಸ್ ಕಾರ್ಯಕರ್ತರ ಕೈ-ಕಾಲುಗಳನ್ನು ಕತ್ತರಿಸಿ ಕಾಂಗ್ರೇಸ್‌ನ ಕೆಲವು ಮುಖಂಡರನ್ನು ಜಾತಿ ವೈಷಮ್ಯದಿಂದ ಕೊಲೆಮಾಡಿರುತ್ತಾರೆ ಎಂದು ದೂರಿದರು.

ಕಾಂಗ್ರೇಸ್ ಕಾರ್ಯಕರ್ತರು ಕಾಂಗ್ರೇಸ್ ಶಾಸಕರಿಲ್ಲದೇ ತಬ್ಬಲಿಯಾಗಿರುತ್ತಾರೆ, ವಿನಯ ಗಾಂಧಿಯವರು ಯಾವುದೇ ಸರ್ಕಾರದ ನಾಮಿನೇಷನ್ ಅಧಿಕಾರ ಇಲ್ಲದಿದ್ದರೂ ಸುಮಾರು ೪೫ ವರ್ಷದಿಂದ ಹಾಸನ ಕ್ಷೇತ್ರದ ಜನರ ಕುಂದುಕೊರತೆಗಳಿಗೆ ಸ್ಪಂಧಿಸುತ್ತ ಬಂದಿರುತ್ತಾರೆ. ಹಾಸನ ವಿಧಾನಸಭಾ ಕ್ಷೇತ್ರದ ಸ್ಥಳೀಯರಾದ ವಿನಯ ಗಾಂಧಿಯವರಿಗೆ ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಮಾಡಿದರೆ ಮುಂದೆ ಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷದ ಶಾಸಕರಾಗಿ ಭಾರಿ ಬಹುಮತದ ಅಂತರದಿಂದ ಗೆದ್ದು ಹಾಸನ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರು ಮತ್ತು ಮತ ಬಾಂಧವರಿಗೆ ಶಕ್ತಿ ತುಂಬಲು ನೆರವಾಗಲ್ಲಿದ್ದಾರೆ ಎಂದು ವಿಶ್ವಾಸವ್ಯಕ್ತಪಡಿಸಿದರು.

ಹಾಸನದಲ್ಲಿ ಕ್ಷೇತ್ರದ ಸ್ಥಳೀಯರಲ್ಲದವರು ಬೇರೆ ಕ್ಷೇತ್ರದಲ್ಲಿ ಮನೆ ಮಾಡಿಕೊಂಡು ನಾವು ಸ್ಥಳೀಯರು ಎಂದು ಹೇಳಿಕೊಂಡು ಸ್ಥಳೀಯ ಮತದಾರರಿಗೆ ದಾರಿ ತಪ್ಪಿಸಿ ಇಲ್ಲ ಸಲ್ಲದ ಆಸೆ ಅಮಿಷಗಳನ್ನು ಮತದಾರರಿಗೆ ತೋರಿಸಿ ಗುಂಪು ಕಟ್ಟಿ ಕ್ಷೇತ್ರದ ಜನರಿಗೆ ವಂಚಿಸುತ್ತಿದ್ದಾರೆ ಅಂತಹವರಿಗೆ ಅವಕಾಶ ಕೊಡದೆ ಯಾರು ಇದೇ ಕ್ಷೇತ್ರದಲ್ಲಿ ಹುಟ್ಟಿ ಬೆಳೆದು ಕ್ಷೇತದ ಜನತೆಗೆ ಜನಾನುರಾಗಿ ಚಿರ ಪರಿಚಯವಿರುವ ಸ್ಥಳೀಯ ಅಭ್ಯರ್ಥಿಗಳಿಗೆ ಅವಕಾಶ ಕೊಡಬೇಕೇ ಹೊರೆತು ಬೇರೆ ಕ್ಷೇತದವರಿಗೆ ಅವಕಾಶ ಕೊಡಬಾರದಾಗಿ ವಿನಂತಿಸುತ್ತ ಹಾಗೆಯೇ ನಿಗಮ ಮಂಡಳಿಯಲ್ಲೂ ಸಹ ಇದೇ ನೀತಿಯನ್ನು ಅನುಸರಿಸಬೇಕಾಗಿ ಕೋರಿದರು.

ಕೆ.ಎನ್. ರಾಜಣ್ಣನವರನ್ನು ಹಾಸನ ಜಿಲ್ಲೆಗೆ ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕ ಮಾಡಿದ ಮೇಲೆ ಜಿಲ್ಲೆಯಲ್ಲಿ ಕಾಂಗ್ರೇಸ್ ಪಕ್ಷದ ಮುಖಂಡರು, ಕಾರ್ಯಕರ್ತರುಹಲವು ಭಿನ್ನಾಭಿಪ್ರಾಯಕ್ಕೆ ಒಳಗೊಂಡಂತೆ ಗುಂಪು ಗುಂಪಾಗಿ ಹೋಗಿದ್ದರು. ನಂತರ ಕೆ.ಎನ್. ರಾಜಣ್ಣ ಅವರು ಜಿಲ್ಲಾ ಉಸ್ತುವಾರಿ ವಹಿಸಿಕೊಂಡ ಮೇಲೆ ಜಿಲ್ಲೆಯ ಎಲ್ಲಾ ಜನಾಂಗದ ಮುಖಂಡರನ್ನು ಮತ್ತು ಎಲ್ಲಾ ಕಾರ್ಯಕರ್ತರನ್ನು ಒಟ್ಟುಗೂಡಿಸಿ ತಳಹಂತದಿಂದ ಕಾಂಗ್ರೇಸ್ ಪಕ್ಷವನ್ನು ಸಂಘಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದರಲ್ಲೂ ದಲಿತರು, ಮುಸ್ಲಿಮರು ಮತ್ತು ಕ್ರಿಶ್ಚಿಯನ್ ಹಾಗೂ ಹಿಂದುಳಿದವರ್ಗದವರು, ಒಕ್ಕಲಿಗರು, ಲಿಂಗಾಯತರು ಇತರ ಎಲ್ಲಾ ಸಣ್ಣ ಪುಟ್ಟ ಸಮುದಾಯವನ್ನು ಒಟ್ಟುಗೂಡಿಸಿದ್ದಾರೆ ಎಂದರು.

ಜಿಲ್ಲೆಯಲ್ಲಿ ಸನ್ಮಾನ್ಯ ಶ್ರೀ ಕೆ.ಎನ್. ರಾಜಣ್ಣ ನವರು ಹಾಸನ ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡು ಹಾಸನ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಕಾಂಗ್ರೇಸ್ ಕಾರ್ಯಕರ್ತರಿಗೆ ಹಾಗೂ ಮುಖಂಡರಿಗೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಕುಟುಂಬದ ವಿರುದ್ಧ ಸಮರ ಸಾರಿದ್ದು, ಆ ಕುಟುಂಬದ ಜೊತೆ ಹೊಂದಾಣಿಕೆ ಮಾಡಿಕೊಳ್ಳದೆ ಕಾಂಗ್ರೇಸ್ ಕಾರ್ಯಕರ್ತರಿಗೆ ಧೈರ್ಯ ತುಂಬಿದ್ದಾರೆ. ಅಲ್ಲದೇ ಈಗ ತಾನೇ ನಡೆದ ಲೋಕಸಭಾ ಚುನಾವಣೆಯಲ್ಲಿ ಮಾನ್ಯ ಉಸ್ತುವಾರಿ ಸಚಿವರಾದ ಕೆ.ಎನ್. ರಾಜಣ್ಣನವರು ಜಿಲ್ಲೆಯ ಎಲ್ಲಾ ಜಾತಿ ಧರ್ಮದ ಮತ್ತು ತಳಮಟ್ಟದ ಜನಾಂಗ ಮುಖಂಡರು ಮತ್ತು ಕಾರ್ಯಕರ್ತರನ್ನು ಒಂದು ಕಡೆ ಸೇರಿಸಿ ಅವರಿಗೆ ಲೋಕಸಭಾ ಚುನಾನಣೆಗೆ ಸ್ಪರ್ಧಿಸಿದ್ದ ಶ್ರೀಯುತ ಶ್ರೇಯಸ್ ಪಟೇಲ್ ರವರಿಗೆ ಹೆಚ್ಚು ಮತಗಳಿಂದ ಗೆಲ್ಲಿಸುವಂತೆ ಕರೆ ನೀಡಿದ್ದರು.

ಹೆಚ್ಚಿನ ಅಂತರದಿಂದ ಗೆಲ್ಲಿಸದಿದ್ದರೆ ಮುಂದೆ ಹಾಸನಕ್ಕೆ ನಾನು ಕಾಲಿಡುವುದಿಲ್ಲ ಎಂದು ಹೇಳಿದ್ದರು. ಆದ್ದರಿಂದ ಕಾರ್ಯಕರ್ತರು ಎಲ್ಲಾ ಒಟ್ಟುಗೂಡಿ ಲೋಕಸಭಾ ಕ್ಷೇತ್ರದ ಎಲ್ಲಾ ಭಾಗದ ಮತದರಾರನ್ನು ಭೇಟಿಮಾಡಿ ಮತದಾರರ ವಿಶ್ವಾಸಗಳಿಸಿ ೨೫ ವರ್ಷಗಳಿಂದ ಗೆಲ್ಲದಿದ್ದ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಭಾರಿ ಬಹುಮತದಿಂದ ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ಶ್ರೇಯಸ್ ಪಾಟೇಲರನ್ನು ಬಹಳ ಮತಗಳ ಅಂತರದಿಂದ ಗೆಲ್ಲಿಸಲು ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಕೆ. ಎನ್. ರಾಜಣ್ಣ ನವರ ನೇತೃತ್ವದ ಶ್ರಮದಿಂದ ಯಶಸ್ವಿಯಾಗಿದೆ ಎಂದರು.

ಶೀಘ್ರದಲ್ಲಿ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ನಗರಸಭೆ, ಪಟ್ಟಣ ಪಂಚಾಯ್ತಿ ಚುನಾವಣೆಗಳು ಬರುತ್ತಿರುವುದರಿಂದ ಜಿಲ್ಲೆಯಲ್ಲಿ ಕಾಂಗ್ರೇಸ್ ಪಕ್ಷ ೭ ವಿಧಾನಸಭಾ ಕ್ಷೇತ್ರದಲ್ಲಿ ಅಧಿಕಾರ ಹಿಡಿಯಲು ಅವರ ನೇತೃತ್ವದಲ್ಲಿ ಕಾರ್ಯಕರ್ತರು ಒಗ್ಗಟಾಗಿ ಪಕ್ಷದ ಗೆಲುವಿಗೆ ಶ್ರಮಿಸಬೇಕಾಗಿದೆ ಆದ್ದರಿಂದ ಸನ್ಮಾನ್ಯ ಶ್ರೀ ಕೆ. ಎನ್. ರಾಜಣ್ಣ ನವರನ್ನು ಹಾಸನ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮುಂದುವರೆಸಲು ಕಳಕಳಿಯಿಂದ ಮನವಿ ಮಾಡುತ್ತೇವೆ ಎಂದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ವಿನಯ್ ಗಾಂಧಿ, ಕಡಾಖಡಿ ಫೀರ್ ಸಾಹೇಬ್, ಜಗದೀಶ್, ಆರ್. ವಿಜಯಕುಮಾರ್, ಪಂಕಜ, ಮಂಜೀರ್, ಮೆಹರುನ್ನಿಸಾ, ಮಂಜು ಸೇರಿದಂತೆ ಇತರರು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *