
ಹಾಸನ ಜಿಲ್ಲೆ ಚನ್ನರಾಯಪಟ್ಟಣದ ನ್ಯಾಷನಲ್ ಕ್ಲಾಸಿಕಲ್ ಡ್ಯಾನ್ಸ್ ಅಕಾಡೆಮಿ ಮತ್ತು ಶೃಂಗೇರಿ ಶ್ರೀ ಶ್ರೀ ಜಗದ್ಗುರು ಶಂಕರಾಚಾರ್ಯ ಮಹಾ ಸಂಸ್ಥಾನ ಶ್ರೀ ಶಾರದಾಂಬ ಪೀಠದ ಶ್ರೀಗುರು ಶಂಕರಾಚಾರ್ಯರ ಅನುಗ್ರಹದಿಂದ 62ನೇ ರಾಷ್ಟ್ರೀಯ ನೃತ್ತ್ಯೋತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದ ಎಲ್ಲಾ ಕಲಾವಿದರಿಗೆ ಶ್ರೀ ಶಾರದಾಂಬ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ ಗೌರವಿಸಿ ಮಾತನಾಡಿದ ಶ್ರೀ ಶಾರದಾ ಪೀಠದ ಕಾರ್ಯದರ್ಶಿಗಳಾದ ಶ್ರೀಯುತ ಕೃಷ್ಣಮೂರ್ತಿ ರವರು ಇದೇ ಮೊಟ್ಟ ಮೊದಲ ಬಾರಿಗೆ ಶೃಂಗೇರಿಯಲ್ಲಿ ಅಮ್ಮನವರ ಮುಂದೆ ಶಾಸ್ತ್ರಿಯ ನೃತ್ಯದ ಕಾರ್ಯಕ್ರಮದಲ್ಲಿ ಅತಿ ಹೆಚ್ಚು ಕಲಾವಿದರು ಒಂದೇ ವೇದಿಕೆಯಲಿ ಸೇರಿರುವುದು ಸಂತೋಷ ತಂದಿದೆ ಮಕ್ಕಳು ತಮ್ಮಲ್ಲಿರುವ ಪ್ರತಿಭೆಯನ್ನು ದೇವಾಲಯಗಳಲ್ಲಿ ಪ್ರದರ್ಶಿಸುವ ಮೂಲಕ ತಮ್ಮ ತಮ್ಮ ಜ್ಞಾನವನ್ನು ವೃದ್ಧಿಗೊಳಿಸಿಕೊಡು ಪ್ರತಿಭಾವಂತ ಕಲಾವಿದರಾಗಲಿ ಎಂದು ಆಶೀರ್ವದಿಸಿದರು
ನಂತರ ಜಗದ್ಗುರುಗಳಾದ ಶ್ರೀ ಶ್ರೀ ವಿದೂಶೇಕರ ಭಾರತಿ ಮಹಾ ಸ್ವಾಮೀಜಿಯವರು ನೃತ್ಯೋತ್ಸವದ ಆಯೋಜನ ಕಾರ್ಯದರ್ಶಿ ಡಾ. ಸ್ವಾತಿ ಬಿ ಭಾರದ್ವಾಜ್ ರವರ ಸಾಧನೆಯ ಬಗ್ಗೆ ಪರಿಪೂರ್ಣವಾಗಿ ಪರಿಚಯ ಮಾಡಿಸಿಕೊಂಡು ಬೆಳಗ್ಗೆನಿಂದ ಸಂಜೆವರೆಗೆ ನ್ಯಾಷನಲ್ ಕ್ಲಾಸಿಕಲ್ ಡ್ಯಾನ್ಸ್ ವತಿಯಿಂದ ನಡೆಸಿರುವ ನೃತ್ಯೋತ್ಸವನ್ನು ಶ್ಲಾಘಿಸಿ ಮುಂದಿನ ದಿನಗಳಲ್ಲಿ ಭಾರತೀಯ ಸಂಸ್ಕೃತಿಯ ಕಲೆಗಳನ್ನು ಉಳಿಸಿ ಬೆಳೆಸುವಂತಹ ನಿಟ್ಟಿನಲ್ಲಿ ಪ್ರತಿಭಾವಂತ ಕಲಾವಿದರನ್ನು ಹೊರ ತರುವಂತ ಕೆಲಸ ಮಾಡುವಲ್ಲಿ ತಾವು ಕಾರ್ಯ ಪ್ರವೃತ್ತವಾಗಬೇಕಾಗಿದೆ ಎಂದು ತಿಳಿಸಿದರು
ನೃತ್ಯೋತ್ಸವದ ಆಯೋಜನ ಕಾರ್ಯದರ್ಶಿ ಡಾ.ಸ್ವಾತಿ ಪಿ ಭಾರದ್ವಾಜ್ ರವರಿಗೆ ಗುರುಗಳು ಅಭಿನಂದಿಸಿ ಆಶೀರ್ವದಿಸಿದರು
