ಬೇಲೂರು : ತಾಲೂಕಿನ ಇಬ್ಬೀಡು ಗ್ರಾಪಂ ವ್ಯಾಪ್ತೀಯ ನೆಟ್ಟೆಕೆರೆ ಗ್ರಾಮದಲ್ಲಿ ಸುಮಾರು ೨೦ ದಿನಗಳಿಂದ ಸಮರ್ಪಕವಾಗಿ ಕುಡಿಯುವ ನೀರನ್ನು ನೀಡದೆ ವಿಚಾರಿಸಿದರೆ ಅಧಿಕಾರಿಗಳು ಉಡಾಫೆ ಉತ್ತರ ನೀಡುತ್ತಿದ್ದಾರೆಂದು ನೆಟ್ಟೆಕೆರೆ ಗ್ರಾಮದಲ್ಲಿ ಮಹಿಳೆಯರು ಗ್ರಾಪಂ ಪಿಡಿಒ ಹಾಗು ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಗ್ರಾಮದ ಮಹಿಳೆ ಲಕ್ಷ್ಮಿ ನಮ್ಮ ಗ್ರಾಮದಲ್ಲಿ ಕೆಳಹಟ್ಟಿಯಲ್ಲಿ ಸಮರ್ಪಕವಾಗಿ ನೀರನ್ನು ಬಿಡುತ್ತಾರೆ.ಆದರೆ ನಮ್ಮ ಮೇಲಿನ ಹಟ್ಟಿಗೆ ೧೫ ದಿನಕ್ಕೊಮ್ಮೆ ನೀರು ಬಿಡುತ್ತಾರೆಅದು ಸಹ ನೀರಲ್ಲಿ ಹುಳು ಹಾಗು ಕೆಸರು ಮಿಶ್ರಿತ ನೀರು ಬಿಡುತ್ತಾರೆ. ನಾವು ಬದುಕುವುದಾದರೂ ಹೇಗೆ.ಅದರಲ್ಲೂ ಸಹ ತಿಂಗಳಿಗೊಮ್ಮೆ ನಮಗೆ ಕುಡಿಯಲು ನೀರಿಲ್ಲದೆ ವೇರೆಯವರ ಮನೆಯಿಂದು ನೀರು ತರುವ ಪರಿಸ್ಥಿತಿ ಉಂಟಾಗಿದೆ.

ಅಲ್ಲದೆ ಈಗಾಗಲೇ ಚಿಕನ್ ಗುನ್ಯಾ ಹಾಗು ಡೆಂಗ್ಯೂ ರೋಗಗಳು ಹೆಚ್ಚಿದ್ದು ನಮ್ಮ ಊರಿನಲ್ಲಿ ಆಶಾ ಕಾರ್ಯಕರ್ತರು ಬಂದು ಇಂತಹ ನೀರನ್ನು ಹೇಗೆ ಬಳಸುತ್ತೀರೆಂದು ಅದನ್ನು ಹೊರಗೆ ಚಲ್ಲುತ್ತಾರೆ.

ಇದರ ಬಗ್ಗೆ ಅಧಿಕಾರಿಗಳ ಬಳಿ ನಮ್ಮ ಸಮಸ್ಯೆ ಹೇಳಿದರೆ ಅದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ.ವಾರಕ್ಕೊಮ್ಮೆ ನೀರುಗಂಟಿ ಸಹಾಯಕ ಹಣಕೊಟ್ಟರೆ ಅವರಿಗೊಂದು ನ್ಯಾಯ ಬಡವರಿಗೊಂದು ನ್ಯಾಯ ನಾವೆಲ್ಲರೂ ಕೂಲಿ ಕಾರ್ಮಿಕರಾಗಿದ್ದು ಬರಿ ನೀರಿಗಾಗಿ ಹೋರಾಟ ಮಾಡುತ್ತಾ ಕೂತರೆ ನಮ್ಮ ಜೀವನ ಹೇಗೆ ಸಾಗುತ್ತದೆ. ಕೂಡಲೆ ನಮಗೆ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಮನವಿ ಮಾಡಿದರು.

ಗ್ರಾಮಸ್ಥರಾದ ಕೃಷ್ಣಮೂರ್ತಿ ಹಾಗು ಮೊಗಪ್ಪ ಮಾತನಾಡಿ ತಿಂಗಳಿಗೊಮ್ಮೆ ಕುಡಿಯುವ ನೀರನ್ನು ಸಮರ್ಪಕವಾಗಿ ಬಿಡುತ್ತಿಲ್ಲ.ನಮ್ಮ ಗ್ರಾಮದ ಬಳಿ ನೀರಿಗೆ ವ್ಯವಸ್ಥೆ ಇದ್ದರೂ ನಮಗೆ ಕೊಳಚೆ ನೀರನ್ನು ಬಿಡುತ್ತಿದ್ದಾರೆ.ನಮ್ಮ ಗ್ರಾಮದಲ್ಲಿ ವೃದ್ದರು ಹಾಗು ಮಕ್ಕಳೆ‌ ಹೆಚ್ಚಿದ್ದು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

ಈ ನೀರನ್ನು ಉಪಯೋಗಿಸುವುದರಿಂದ ನಮ್ಮ ಗ್ರಾಮದ ಜನರು ಕಾಯಿಲೆಗೆ ತುತ್ತಾಗುತ್ತಿದ್ದು ಅವರು ದುಡಿದ ಹಣವೆಲ್ಲಾ ಆಸ್ಪತ್ರೆಗೆ ಸುರಿಯುತ್ತಿದ್ದಾರೆ.ಇಲ್ಲಿ ನೀರು ಬಿಡುವ ಸಹಾಯಕರನ್ನು ಕೇಳಿದರೆ ಇಲ್ಲಿ ನಮ್ಮನೆಯಿಂದ ನೀರು ತಂದು ಕೊಡಬೇಕ ಎಂದು ಉಡಾಫೆ ಉತ್ತರ ನೀಡುತ್ತಾರೆ.

ಕೆಲವರು ಕುಡಿಯುವ ನೀರನ್ನು ಸಹ ಬಿಡದೆ ನಮಗೆ ಸತಾಯಿಸುತ್ತಿದ್ದು ,ಈ ಬಗ್ಗೆ ಗ್ರಾಪಂ ಗೆ ಮನವಿ ಮಾಡಿದರು ಅದು ಮೂಲೆಯ ಕಸವಾಗಿದೆ.ನಾವೆಲ್ಲರೂ ಸೇರಿ ಕುಡಿಯುವ ನೀರಿಗೆ ಶಾಶ್ವತ ಪರಿಹಾರ ನೀಡದಿದ್ದರೆ ತಾಪಂ ಭಾಗ ಉಗ್ರಪ್ರತಿಭಟನೆ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಯೊಗೇಶ್ ಬಲರಾಮ್ ಪ್ರಕಾಶ್ ದೇವರಾಜು ಗೋವಿಂದರಾಜು,ಜ್ಯೋತಿ,ಪುಟ್ಟಲಕ್ಷ್ಮೀ ,ಮಂಜುಳಾ,ಕುಮಾರಿ,ಸಾಕಮ್ಮ,ಇತರರು ಹಾಜರಿದ್ದರು.. *

ಶಾಸಕರ ಭರವಸೆಗೆ ಪ್ರತಿಭಟನೆ ಹಿಂಪಡೆದ ಗ್ರಾಮಸ್ಥರುವಿಷಯ ತಿಳಿದು ದೂರವಾಣಿಯಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಶಾಸಕ ಸುರೇಶ್ ನಮ್ಮ ತಾಲೂಕಿನಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದೇನೆ.

ಕುಡಿಯುವ ನೀರಿಗೆ ಡಮಸ್ಯೆಗಳು ಬಂದರೆ ಅವರ ಮೇಲೆ‌ನಿರ್ದಾಕ್ಷಿಣವಾಗಿ ಕ್ರಮ ಕೈಗೊಳ್ಳುತ್ತೇನೆ.ಸ್ಥಳೀಯ ಅಧಿಕಾರಿಗಳಿಗೆ ರಜೆ ಇದ್ದರೂ ಕೂಡ ಅಲ್ಲಿಗೆ ತೆರಳಿ ಸಮಸ್ಯೆ ಬಗೆಹರಿಬೇಕು ಇಲ್ಲದಿದ್ದರೆ ಅಧಿಅಕರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳುತ್ತೇನೆ.

ನಾನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನಗೆ ಬರುವುದೊಳಗಾಗಿ ಸಮಸ್ಯೆ ಬಗೆಹರಿಸಬೇಕು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *