
ಚನ್ನರಾಯಪಟ್ಟಣ: 2024-25ನೇ ಸಾಲಿನ ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಕೆ ಎನ್ ಸುಂದರ್ ರಾಜು ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ.
ಪಟ್ಟಣದ ವಕೀಲರ ಸಂಘದಲ್ಲಿ ಬೆಳಿಗ್ಗೆ 9 ಗಂಟೆಗೆ ಆರಂಭಗೊಂಡು ಮಧ್ಯಾಹ್ನ 3.30 ವರೆಗೂ ಮತದಾನ ನಡೆಯಿತು.
ನಂತರ ಫಲಿತಾಂಶವನ್ನು ಪ್ರಕಟಿಸಲಾಯಿತು. ಕೆ. ಎನ್. ಸುಂದರ್‌ರಾಜ್ 85 ಮತಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರೆ, ಪರಾಜಿತ ಅಭ್ಯರ್ಥಿ ಡಿ.ಕೆ.ಹರೀಶ್ 66 ಮತ ಪಡೆದರು.ಡಿ.ಬಿ.ಬಸವರಾಜು 73 ಮತಗಳನ್ನು ಪಡೆದು ಉಪಾಧ್ಯಕ್ಷರಾಗಿ ಆಯ್ಕೆಯಾದರು,
ಪರಾಜಿತ ಅಭ್ಯರ್ಥಿ ಪ್ರದೀಪ್ 49 ಮತಗಳನ್ನು ಪಡೆದರು, ದಿನೇಶ್ ಅವರು 30 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡರು. ಕಾರ್ಯದರ್ಶಿಯಾಗಿ ಎ ಡಿ ಕುಮಾರ್ 108 ಮತಗಳನ್ನು ಪಡೆದು ಜಯಗಳಿಸಿದರು,
ರಾಘವೇಂದ್ರ 42 ಮತಗಳನ್ನು ಪಡೆದರು, ಖಜಾಂಚಿಯಾಗಿ ಡಿ ಸಿ ಮಂಜೇಶ್ 89 ಮತಗಳನ್ನು ಪಡೆದು ಜಯಗಳಿಸಿದರು, ಜಂಟಿ ಕಾರ್ಯದರ್ಶಿಯಾಗಿ ಶ್ವೇತಾ ವಿಶ್ವನಾಥ್ ಅವಿರೋಧವಾಗಿ ಆಯ್ಕೆಯಾದರು.
ಚುನಾವಣಾ ಅಧಿಕಾರಿಯಾಗಿ ಬಿ.ವಿ.ವಿಜಯ್, ಡಿ.ಆರ್. ದೇವರಾಜ್ ಕಾರ್ಯ ನಿರ್ವಹಿಸಿದರು.
ನೂತನ ಪದಾಧಿಕಾರಿಗಳ ಸ್ನೇಹಿತರು ಹಿತೈಶಿಗಳು ಹಾಗೂ ಕಿರಿಯ ವಕೀಲರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.



