
ಬೇಲೂರು : ಹಿರಿಯ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಆಯೋಜನೆ ಮಾಡಲಾಗಿದ್ದ ಕಾರ್ಯಕ್ರಮದಲ್ಲಿನ್ಯಾಯಾಲಯದ ಆದೇಶವನ್ನು ಜಾರಿಗೊಳಿಸಲು ಕಕ್ಷಿದಾರರುಗಳಿಗೆ ತಾಲೂಕು ಕಚೇರಿ ಮತ್ತು ಎ.ಡಿ.ಎಲ್.ಆರ್. ಕಚೇರಿಯಲ್ಲಿ ಆದೇಶವನ್ನು ಪಾಲನೆ ಮಾಡಲು ವಿಳಂಬ ಧೋರಣೆ ಮಾಡುತ್ತಿದ್ದಾರೆಂದು
ವಕೀಲರ ದೂರಿನ ಮೇರೆಗೆ ತಾಲೂಕು ದಂಡಾಧಿಕಾರಿಗಳು ಹಾಗೂ ಎ.ಡಿ.ಎಲ್.ಆರ್. ಅಧಿಕಾರಿಗಳನ್ನು ವಕೀಲರ ಸಮ್ಮುಖದಲ್ಲಿ ಕರೆಸಿ ಕಕ್ಷಿದಾರರಿಗೆ ತೊಂದರೆಯಾಗುತ್ತಿರುವ ಬಗ್ಗೆ ವಕೀಲರುಗಳಿಂದ ಇಲಾಖೆಯ ಅಧಿಕಾರಿಗಳ ಮುಂದೆ ನೇರ ನೇರವಾಗಿ ಚರ್ಚೆ ನಡೆಸಿ ನ್ಯಾಯಾಲಯದ ಎಲ್ಲಾ ಆದೇಶವಾಗಿಯೂ ಸುಮಾರು ವರ್ಷಗಳಿಂದ ಕಕ್ಷಿದಾರರಿಗೆ ಸರ್ವಯರ್ ಮತ್ತು ಸಿಬ್ಬಂದಿ ವರ್ಗದವರು ಕೆಲಸ ಮಾಡಿಕೊಡಲು ವಿನಾಕಾರಣ ಅಲೇಸುತ್ತಿದಾರೆ ಎಂದು ವಕೀಲರು ನ್ಯಾಯಾಧೀಶರ ಮುಂದೆ ಪ್ರಸ್ತಾಪಿಸಿದರು
ಇದೇ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿಗಳಾದ ಮಮತಾ ಮಾತನಾಡಿ ನಾನು ಒಂದು ವರ್ಷದ ಹಿಂದೆ ಅಷ್ಟೇ ಬಂದಿದ್ದೇನೆ ತಾಲೂಕು ಕಚೇರಿಯಿಂದ ಆಗಬೇಕಾಗಿರುವ ಎಲ್ಲಾ ನ್ಯಾಯಾಲಯದ ಆದೇಶದ ಕಡತಗಳನ್ನು ತತಕ್ಷಣದಲ್ಲಿ ಕಾರ್ಯಗತಗೊಳಿಸುವಂತೆ ಕ್ರಮ ಕೈಗೊಂಡು ಕಡತಗಳನ್ನು ವರದಿಯೊಂದಿಗೆ ಮುಕ್ತಾಯಗೊಳಿಸಿಕೊಡುತ್ತೇನೆಂದು ವಕೀಲರು ಮತ್ತು ನ್ಯಾಯಾಧೀಶರ ಮುಂದೆ ತಿಳಿಸಿದರು
ಇದೇ ಸಂದರ್ಭದಲ್ಲಿ ನ್ಯಾಯಾಧೀಶರು ಬಾಕಿ ಉಳಿಸಿಕೊಂಡಿರುವ ಎಲ್ಲಾ ಕಡತಗಳನ್ನು 20 ದಿನದೊಳಗೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ವರದಿ ಮಾಡಬೇಕೆಂದು ನ್ಯಾಯಾಧೀಶರಾದ ಎಂ.ಎಸ್. ಶಶಿಕಲಾ ರವರು ಅಧಿಕಾರಿಗಳಿಗೆ ಕಡಕ್ ಮಾತಿನೊಂದಿಗೆ ನ್ಯಾಯಾಲಯದ ಆದೇಶವಾದರೂ ಕಡತವನ್ನು ಯಾಕೆ ವಿಲೇವಾರಿ ಮಾಡುತ್ತಿಲ್ಲ ಎಂದು ಅಧಿಕಾರಿಗಳ ಮೇಲೆ ಗರಂ ಆದ ನ್ಯಾಯಾಧೀಶರು ಮುಂದಿನ ದಿನಗಳಲ್ಲಿ ಎ.ಡಿ.ಎಲ್.ಆರ್. ಮತ್ತು ತಾಲೂಕು ಕಚೇರಿಯ ಎಲ್ಲಾ ಸರ್ವೆ ಅಧಿಕಾರಿಗಳಿಗೆ ನ್ಯಾಯಾಲಯದ ಆವರಣದಲ್ಲಿ ಕಾನೂನು ಸೇವಾ ಪ್ರಾಧಿಕಾರ ವತಿಯಿಂದ ಕಾನೂನಿನ ಬಗ್ಗೆ ತರಬೇತಿ ನೀಡಲಾಗುವುದು ಎಂದು ತಿಳಿಸಿದರು
ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷರಾದ ಪೃಥ್ವಿ ಕಾರ್ಯದರ್ಶಿಗಳಾದ ಪುಟ್ಟಸ್ವಾಮಿಗೌಡ ಹಿರಿಯ ಮತ್ತು ಕಿರಿಯ ವಕೀಲರು ಹಾಜರಿದ್ದರು
