
ಸಕಲೇಶಪುರ : ಪಟ್ಟಣದಲ್ಲಿ ಇಂದು ಸಕಲೇಶಪುರ ಬಿಜೆಪಿ ವತಿಯಿಂದ ಕಾಂಗ್ರೆಸ್ ಸರ್ಕಾರ ತಮ್ಮ ಗ್ಯಾರೆಂಟಿಗಳನ್ನು ಈಡೇರಿಸಲು ಆಗದೇ ರಾಜ್ಯ ಕಾಂಗ್ರೆಸ್ ಸರ್ಕಾರವು ಇಂದು ಪೆಟ್ರೋಲ್ ದರವನ್ನು ಲೀಟರ್‌ಗೆ 3 ರೂ. ಹಾಗೂ ಡಿಸೇಲ್ ದರವನ್ನು 3.5 ಕ್ಕೆ ಏರಿಸಿರುವುದನ್ನು ವಿರೋದಿಸಿ ಎತ್ತಿನ ಗಾಡಿ ಹಾಗೂ ಸೈಕಲ್ ಓಡಿಸುವ ಮೂಲಕ ಕೆಲ ಕಾಲ ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಮಾಜಿ ಅದ್ಯಕ್ಷ ರಾಜ್ ಕುಮಾರ್ ಮಾತನಾಡಿರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ನಂತರ ಭ್ರಷ್ಟಾಚಾರ ಮಿತಿಮೀರಿದ್ದು, ಕೊಲೆ ಸುಲಿಗೆಗಳು ನಡೆದು ಕಾನೂನು ಸುವ್ಯವಸ್ಥೆ ಹಾಳಾಗಲು ಕಾಂಗ್ರೆಸ್ ಸರ್ಕಾರ ಕಾರಣವಾಗಿದ್ದು, ಕೂಡಲೇ ಮುಖ್ಯ ಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ನಿಕಟ ಪೂರ್ವ ಬಿಜೆಪಿ ಮಂಡಲ ಅದ್ಯಕ್ಷ ಮಂಜುನಾಥ್ ಸಂಘ್ವಿ ಮಾತನಾಡಿ ಕಾಂಗ್ರೆಸ್ ಸರ್ಕಾರ ಚುನಾವಣೆ ಸಂದರ್ಭದಲ್ಲಿ ಮನೆ ಮನೆಗೆ ಗ್ಯಾರಂಟಿ ಕಾರ್ಡ್ ನೀಡುವ ಮೂಲಕ ಅಧಿಕಾರಕ್ಕೆ ಬಂದು ಈಗ ಪೆಟ್ರೋಲ್ ,ಡಿಸೇಲ್ ಹಾಗೂ ಜನಸಾಮಾನ್ಯರು ಕುಡಿಯುವ ಮದ್ಯದ ಬೆಲೆಯನ್ನು ಹೆಚ್ಚಿಸಿ ಬಡಜನರಿಗೆ ವಂಚನೆ ಮಾಡುತ್ತಿದ್ದಾರೆ ಮುಂದಿನ ದಿನಗಳಲ್ಲಿ ಜನರು ನಿಮ್ಮನ್ನು ಕ್ಷಮಿಸುವುದಿಲ್ಲ ಅಭಿವೃದ್ಧಿಯ ಕಡೆ ಗಮನ ಕೊಡದೆ ಕೇವಲ ತಮ್ಮ ಸ್ವಾರ್ಥದ ಗ್ಯಾರಂಟಿ ಯೋಜನೆಗಳನ್ನಷ್ಟೇ ಜಪಿಸುತ್ತ ಕಾಲಹರಣ ಮಾಡುತ್ತಿದ್ದಾರೆ ಎಂದು ದೂರಿದರು.
ಹಳೆ ಬಸ್ ನಿಲ್ದಾಣದಲ್ಲಿ ಕೆಲ ನಿಮಿಷ ಹೆದ್ದಾರಿ ತಡೆದು ಉಪವಿಭಾಗಾಧಿಕಾರಿ ಕಛೇರಿಯ ವರೆಗೆ ಮೆರವಣಿಗೆ ನಡೆಸಿ ಉಪವಿಭಾಗಾಧಿಕಾರಿ ಡಾ. ಕೆ.ಎಂ.ಶೃತಿ ಅವರಿಗೆ ಮನವಿ ಪತ್ರ ನೀಡಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಅದ್ಯಕ್ಷ ವಳಲಹಳ್ಳಿ ಅಶ್ವತ್, ಪುರಸಭೆ ಸದಸ್ಯರಾದ ವನಜಾಕ್ಷಿ, ರೇಖಾ ರುದ್ರಕುಮಾರ್, ಸಂದೀಪ್, ರಘು, ಜಂಬರಡಿ ಲೋಹಿತ್, ಕೌಡಳ್ಳಿ ಲೋಹಿತ್, ಬಾಲು, ದೇವರಾಜು, ಮೋಹನ್ ,ಆನಂದ್ ಲಿಯೋ ವಾಸ್ ಹಾಗೂ ಇತರರು ಹಾಜರಿದ್ದರು. .

