ಹಾಸನ: ನಗರದ ಸಮೀಪ ಅರಸೀಕೆರೆ ರಸ್ತೆ ಬಳಿ ಇರುವ ಬಿ. ಕಾಟಿಹಳ್ಳಿ ಕೊಪ್ಪಲಿನ ಆಂಜನೇಯ ದೇವಾಲಯದಲ್ಲಿ ವಿಶ್ವ ಯೋಗ ದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಅಗ್ನಿಹೋತ್ರವು ಹೊಸಬರಿಂದ ಯಶಸ್ವಿಯಾಗಿ ಜರುಗಿತು.

ಹೋಮವನ್ನು ಮಾಡುತ್ತಿರುವ ನಾಲ್ಕು ಜನ ಮಾತೆಯರು ಸೇರಿದಂತೆ ೧೮ ಜನ ಮಾತೆಯರಿಗಾಗಿ ಹಾಸನದ ಬಿ. ಕಾಟಿಹಳ್ಳಿ ಕೊಪ್ಪಲಿನ ಆಂಜನೇಯ ದೇವಾಲಯದಲ್ಲಿ ೨೦ ದಿನಗಳ ಅಗ್ನಿಹೋತ್ರ ಕಲಿಕಾ ಶಿಬಿರವು ಕಳೆದ ಏಪ್ರಿಲ್ ನಲ್ಲಿ ನಡೆದಿತ್ತು.

ಹಾಸನದ ಈಶಾವಾಸ್ಯಮ್ ನ ಸಾಧಕರು ಇವರಿಗೆ ಪ್ರೇರಕರು. ಈಶಾವಾಸ್ಯಮ್ ಟೀಮ್ ನಂತೆ ನಮ್ಮದೂ ಒಂದು ಟೀಮ್ ಆಗಬೇಕೆಂಬ ಬೇಡಿಕೆ ಕಾಟಿಹಳ್ಳಿ ಕೊಪ್ಪಲಿನ ಮಾತೆಯರದ್ದು ಆಗಿದೆ. ಅವರ ಆಸೆ ನಿನ್ನೆ ಈಡೇರಿದೆ. ಅದೇ ಮಾತೆಯರು ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿ, ಎಲ್ಲಾ ವ್ಯವಸ್ಥೆ ಅವರೇ ಮಾಡಿದ್ದರು. ಅವರ ಜೊತೆಗೆ ಕಾರ್ಯಕ್ರಮದಲ್ಲಿ ಅಗ್ನಿಹೋತ್ರ ಮಂತ್ರ ಹೇಳಿದವರು ಈಶಾವಾಸ್ಯಮ್ ನ ಸಾಧಕರು.

ವೇದಿಕೆಯಲ್ಲಿ ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರಸನ್ನ ಎನ್. ರಾವ್ ಉದ್ಘಾಟಿಸಿದರು.

ಮತ್ತು ಅವರ ಪತ್ನಿ ಡಾ. ಶೈಲಜಾ ರಾವ್ ಹಾಗೂ ಮಂಗಳೂರು ಪಬ್ಲಿಕ್ ಶಾಲೆಯ ಅಧ್ಯಕ್ಷರಾದ ಚಂದ್ರರಾಜ ಜೈನ್ ಇದ್ದರು.

ಪತಂಜಲಿ ಪರಿವಾರದ ಪ್ರಭಾರಿಗಳಾದ ದೊರೆಸ್ವಾಮಿ, ನಾಗೇಶ್, ಪರಮೇಶ್ವರ್ ಸುಪರ್ಣಸ, ಶ್ರೀಮತಿ ಶಾರದಾ ಹಾಗೂ ವೇದಭಾರತಿಯ ಹಾಸನ ನಗರ ಅಧ್ಯಕ್ಷರಾದ ಹೇಮಂತ್ ಕುಮಾರ್, ಉಪಾಧ್ಯಕ್ಷರಾದ ವಿಜಯಕುಮಾರ್ ಕಾರ್ಯದರ್ಶಿಗಳಾದ ಸತೀಶ್, ಯೋಗ ಶಿಕ್ಷಕರಾದ ಚಿದಾನಂದ್, ಪತಂಜಲಿ ಯೋಗ ಶಿಕ್ಷಣ ಸಮಿತಿಯ ಶ್ರೀಮತಿ ಶೋಭಾ ಯೋಗರಾಜ್ ಮತ್ತು ಮಂಗಳೂರು ಪಬ್ಲಿಕ್ ಸ್ಕೂಲಿನ ದಿನೇಶ್ ಹಾಗೂ ಬಡಾವಣೆಯ ನೂರಾರು ಜನರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಪ್ರಸನ್ನ ರಾವ್ ಕಾರ್ಯಕ್ರಮವನ್ನು ಉದ್ಘಾಟಿಸಿ ವೇದಪ್ರಸಾರವಾಗುತ್ತಿರುವ ಬಗ್ಗೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.

ಚಂದ್ರರಾಜ ಜೈನ್ ಮತ್ತು ಡಾಟಟ ಶೈಲಜಾ ರಾವ್ ಶುಭಹಾರೈಸಿದರು. ವೇದಭಾರತಿಯ ಸಂಯೋಜಕ ಹರಿಹರಪುರ ಶ್ರೀಧರ್ ಪ್ರಾಸ್ತಾವಿಕ ಭಾಷಣ ಮಾಡಿದರು. ಕಾ

ರ್ಯಕ್ರಮವನ್ನು ಶ್ರೀಮತಿ ಜಯ ನಾಗೇಶ್ ನಿರೂಪಣೆ ಮಾಡಿದರು. ಶ್ರೀಮತಿ ಮಮತಾ ರಮೇಶ್ ಎಲ್ಲರನ್ನೂ ಸ್ವಾಗತಿಸಿದರು.

ದೇವಾಲಯ ಸಮಿತಿಯ ಅಧ್ಯಕ್ಷರಾದ ಲೋಕೇಶ್ ಅವರು ವೇದಭಾರತಿಯ ನೂತನ ಶಾಖೆಯು ತಮ್ಮ ದೇವಾಲಯದಲ್ಲಿ ಶುರುವಾಗಿದ್ದಕ್ಕೆ ಸಂತಸ ವ್ಯಕ್ತ ಪಡಿಸಿ ಸಹಕರಿಸಿದ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು.

ಶ್ರೀನಾಗೇಶ್ ಸಹಕರಿಸಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *