ಹಾಸನ: ಅರಕಲಗೂಡಿನ ಆಸ್ಪತ್ರೆಯಿಂದ ಹಾಸನದ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ೧೦೮ ಅಂಬ್ಯುಲೆನ್ಸ್ ವಾಹನದ ಮುಂಬಾಗದ ಟೈರ್ ಸಿಡಿದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆಂದು ತೆಗೆದಿದ್ದ ಗುಂಡಿಗೆ ಹೋಗಿ ಬಿದ್ದಿದ್ದು, ವಾಹನದಲ್ಲಿದ್ದ ಓರ್ವ ರೋಗಿ ಜೊತೆ ಸೇರಿ ಐವರು ಪ್ರಾಣಾಪಯದಿಂದ ಪಾರಾದ ಘಟನೆ ತಾಲೂಕಿನ ಹನುಮಂತಪುರ ಶಂಕರನಹಳ್ಳಿ ರಸ್ತೆ ಕಾರ್ನರ್ ಬಳಿ ನಡೆದಿದೆ.

ಹನಮಂತಪುರ ರಸ್ತೆ ಮೂಲಕ ರೋಗಿಗಳನ್ನು ಕೂರಿಸಿಕೊಂಡು ಬರುತ್ತಿದ್ದ ೧೦೮ ಅಂಬ್ಯುಲೆನ್ಸ್ ವಾಹನವು ಶಂಕರನಹಳ್ಳಿ ಮಾರ್ಗ ಹೋಗುವ ಕಾರ್ನರ್ ಬಳಿ ವಾಹನದ ಎಡ ಭಾಗದ ಟೈರ್ ಪಂಚರ್ ಆಗಿದ್ದು, ತಕ್ಷಣ ವಾಹನದ ನಿಯಂತ್ರಣ ತಪ್ಪಿ ತನಗೆ ಇಷ್ಟ ಬಂದ ಕಡೆ ಹೋಗಲು ಪ್ರಾರಂಭಿಸಿದೆ.

ಈ ವೇಳೆ ವಾಹನ ಚಾಲಕ ನಿಯಂತ್ರಣ ಮಾಡಿದಾಗ ಎಡ ಭಾಗದಲ್ಲಿ ಗುಂಡಿ ತೋಡಿದ್ದ ಚರಂಡಿಗೆ ಹೋಗಿ ನಿಂತಿದೆ.

ವಾಹನದ ಒಳಗೆ ಇದ್ದ ರೋಗಿಗಳಿಗೆ ಲಲಲ್ಪಸಲ್ಪ ಪೆಟ್ಟಾಗಿದ್ದು, ತಕ್ಷಣ ಮತ್ತೊಂದು ತುರ್ತು ವಾಹನಕ್ಕೆ ಚಾಲಕ ಕರೆ ಮಾಡಿ ಹಾಸನಕ್ಕೆ ಕಳುಹಿಸಿಕೊಡಲಾಯಿತು.

ಕೆಲ ಸಮಯದ ನಂತರ ಕ್ರೈನ್ ಮೂಲಕ ವಾಹನವನ್ನು ಮೇಲಕ್ಕೆ ಎತ್ತಲಾಯಿತು. ೧೦೮ ಅಂಬ್ಯುಲೆನ್ಸ್ ವಾಹನದ ನಾಲ್ಕು ಟೈರ್ ಸವೆದು ಒಳಗಿನ ತಂತಿ ಹೊರಗೆ ಬಂದಿದೆ. ಇನು ವಾಹನದ ಸ್ಥಿತಿ ಸರಿಯಾಗಿಲ್ಲ. ಇಂತಹ ವಾಹನದಲ್ಲಿ ರೋಗಿಗಳನ್ನು ಸಾಗಿಸುವುದು ಎಷ್ಟು ಸುರಕ್ಷಾವಾಗಿದೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಇನ್ನು ಅರಕಲಗೂಡಿನಲ್ಲಿ ಈ ವಾಹನ ಸರಿಯಿಲ್ಲದೇ ರಾತ್ರಿ ಕೊಣನೂರಿನಿಂದ ತುರ್ತು ವಾಹನ ಕರೆಯಿಸಿಕೊಂಡಿದ್ದಾರೆ. ಉತ್ತಮವಲ್ಲದ ವಾಹನವನ್ನು ರಸ್ತೆಗೆ ಬಿಡದೇ ಉತ್ತಮವಾಗಿರುವ ವಾಹನವನ್ನು ಸೇವೆ ಕೊಡುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ.

ಹನುಮಂತಪುರದ ನಿವಾಸಿ ಪ್ರೇಮ್ ಕುಮಾರ್ ಮಾಧ್ಯಮದೊಂದಿಗೆ ಮಾತನಾಡಿ, ಅರಕಲಗೂಡಿನ ತಾಲೂಕಿನಿಂದ ಬರುತಿದ್ದ ೧೦೮ ಅಂಬ್ಯೂಲೆನ್ಸ್ ವಾಹನ ಸ್ಕಿಡ್ ಆಗಿ ಬಿದ್ದುದ್ದು, ಈ ವಾಹನದ ನಾಲ್ಕು ಟೈರ್ ಸವೇದು ಹೋಗಿದ್ದು, ಜನರನ್ನು ರಕ್ಷಣೆ ಮಾಡಬೇಕಾದ ಅಂಬ್ಯೂಲೆನ್ಸ್ ವಾಹನಗಳೇ ಈ ರೀತಿ ಆದರೇ ಜನರ ರಕ್ಷಣೆ ಎಲ್ಲಿದೆ.

ಸರಕಾರವು ಕೂಡಲೇ ಇಂತಹ ವಾಹನದ ಬಗ್ಗೆ ಎಚ್ಚರವಹಿಸಿ ವಾಹನಗಳಿಗೆ ಉತ್ತಮವಾದ ಟೈರ್ ಹಾಕಿಸಿ, ಸರಿಮಾಸುವ ಕೆಲಸ ಮಾಡಿಸಬೇಕು. ರೋಗಿಗಳನ್ನು ಕರೆದೊಯ್ಯುವ ವಾಹನ ಉತ್ತಮವಾಗಿರಬೇಕು ಎಂದರು.

ಸೋಮವಾರ ಬೆಳಿಗ್ಗೆ ಅರಕಲಗೂಡಿನ ಆಸ್ಪತ್ರೆಯಲ್ಲಿ ರೋಗಿಯನ್ನು ಕರೆತರುವಾಗ ಈ ದುರ್ಘಟನೆ ಸಂಭವಿಸಿದ್ದು, ತಕ್ಷಣ ಆರೋಗಿಯನ್ನು ಇನ್ನೊಂದು ತುರ್ತು ವಾಹನದಲ್ಲಿ ಕಳುಹಿಸಿಕೊಡಲಾಗಿದೆ.

ಚಾಲಕರ ನಿಯಂತ್ರಣದಿಂದ ಇವತ್ತು ಆಗುತ್ತಿದ್ದ ದೊಡ್ಡ ಅಪಘಾತ ತಪ್ಪಿದಂತಾಗಿದೆ.

ಮುಂದಾದರೂ ಈ ರ್ತು ವಾಹನವನ್ನು ಹೊರ ಬಿಡುವ ಮೊದಲು ಸರಿಯಾಗಿದಿಯೇ ಎಂಬುದನ್ನು ಖಾತರಿಪಡಿಸಿ ನಂತರ ಸೇವೆಗೆ ಅವಕಾಶ ಕೊಡಬೇಕೆಂದು ಮನವಿ ಮಾಡಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *