
ಚನ್ನರಾಯಪಟ್ಟಣ : ಎ1 ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ಇಂದು ಹಲವಾರು ವರ್ಷಗಳ ಹಳೆಯ ಅಂಚೆ ಚೀಟಿಗಳ ಪ್ರದರ್ಶನವು ನಡೆಯಿತು.
ತಾಲೂಕು ಕ್ರೀಡಾಂಗಣದ ಬಳಿ ಇರುವ ಸ್ಪೋರ್ಟ್ಸ್ ಅಕಾಡೆಮಿಯ ಆವರಣದಲ್ಲಿ ನೌಕರರಾದ ಹಳೆಯ ಕಾಲದ ಹಲವಾರು ಪ್ರದರ್ಶನವನ್ನು ಮಾಡಿದರು,
ಕ್ರೀಡಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಚಿನ್ ಮೊದಲ ಕ್ರಿಕೆಟ್ ಪಂದ್ಯ ಹಾಗೂ ಕೊನೆಯ ಕ್ರಿಕೆಟ್ ಪಂದ್ಯದ ಅಂಚೆ ಚೀಟಿಗಳನ್ನು ತೋರಿಸಿ, ಕ್ರಿಕೆಟ್ ಆಟಗಾರರ ಸಾಧನೆಗಳ ಬಗ್ಗೆ ತಿಳಿಸಿಕೊಟ್ಟರು ಹಾಗೂ ವಿವಿಧ ಕ್ರೀಡಾಕೂಟದಲ್ಲಿ ಸಾಧನೆ ಮಾಡಿರುವ ಕ್ರೀಡಾಪಟುಗಳ ಬಗ್ಗೆ ಹಲವಾರು ಮಾಹಿತಿಗಳನ್ನು ತಿಳಿಸಿಕೊಟ್ಟರು.
ಇದೇ ಸಂದರ್ಭದಲ್ಲಿ ನ್ಯಾಯಾಂಗ ಇಲಾಖೆಯ ಸತೀಶ್, ಎವನ್ ಸ್ಪೋರ್ಟ್ಸ್ ಅಕಾಡೆಮಿಯ ಮುಖ್ಯಸ್ಥರಾದ ಬಿ ರಂಗನಾಥ್, ಪತ್ರಕರ್ತ ಐ ಕೆ ಮಂಜುನಾಥ್, ಹಾಗೂ ಅಕಾಡೆಮಿಯ ವಿದ್ಯಾರ್ಥಿಗಳು ಸೇರಿದಂತೆ ಇತರರು ಹಾಜರಿದ್ದರು.




