
ಚನ್ನರಾಯಪಟ್ಟಣದ : ಗಾಂಧಿ ವೃತ್ತದಲ್ಲಿರುವ ಮಂತ್ರಾಲಯದ ಪರಮಪೂಜ್ಯ ಶ್ರೀ ಡಾ. ಶುಭವೇಂದ್ರ ತೀರ್ಥ ಮಹಾ ಸ್ವಾಮೀಜಿಗಳ ಆಶೀರ್ವಾದದಿಂದ ನಿರ್ಮಾಣವಾಗಿರುವ ಹಾಗೂ ಪ್ರತಿ ಗುರುವಾರ ಸಾರ್ವಜನಿಕ ಸೇವೆಯಲ್ಲಿ ರಾಯರ ರಂಗಮಂದಿರವನ್ನು ತೆರೆದು ಭಕ್ತಾದಿಗಳಿಗೆ ರಾಯರ ಸೇವೆಯನ್ನು ಮಾಡಲು ಅವಕಾಶ ಕಲ್ಪಿಸಿಕೊಟ್ಟು ಆಧ್ಯಾತ್ಮಿಕ ಚಿಂತನೆಗಳ ಬಗ್ಗೆ ಪ್ರವಚನಗಳನ್ನು ನೀಡುವ ಮೂಲಕ ಭಕ್ತರಲ್ಲಿ ಭಗವಂತನ ಬಗ್ಗೆ ನಂಬಿಕೆ ಬರುವಂತಹ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ರೂಪಿಸಿಕೊಳ್ಳುತ್ತಾ ಈ ಗುರುವಾರ ಪಟ್ಟಣಕ್ಕೆ ಆಗಮಿಸಿದ ಕೇರಳದ ಶ್ರೀ ಕೃಷ್ಣಮೂರ್ತಿ ಗುರೂಜಿ ರವರನ್ನು ಮಂದಿರಕ್ಕೆ ಆತ್ಮೀಯವಾಗಿ ಆಹ್ವಾನಿಸಲಾಗಿತ್ತು
ಶ್ರೀ ರಾಘವೇಂದ್ರ ಸ್ವಾಮಿಗಳವರಿಗೆ ಮಹಾಮಂಗಳಾರತಿ ಮಾಡಿ ನಂತರ ಭಕ್ತರೊಂದಿಗೆ ಮಾತನಾಡಿದ ಗುರೂಜಿಯವರು ಮಾನವ ಜನ್ಮ ಈ ಶ್ರೇಷ್ಠವಾದದ್ದು ಎಷ್ಟೋ ಜೀವರಾಶಿಗಳ ಜನ್ಮದ ನಂತರ ಬರುವ ಮಾನವ ಜನ್ಮ ಮಾನವನಿಗೆ ಅತಿಯಾದ ಆಸೆಯಿಂದ ಕಷ್ಟಗಳನ್ನು ತಂದುಕೊಳ್ಳುತ್ತಾನೆ ತನಗೆ ಬೇಕಾದಷ್ಟನ್ನು ಭಗವಂತ ಕೊಟ್ಟ ನಂತರ ತೃಪ್ತಿ ಪಡೆದೆ ಬೇರೊಬ್ಬರ ಬಗ್ಗೆ ಚಿಂತೆ ಮಾಡಿಕೊಂಡು ಬೇರೊಬ್ಬರಿಗಾಗಿ ಬದುಕುತ್ತಾ ತನ್ನ ಜೀವನವನ್ನು ತಾನೇ ಹಾಳು ಮಾಡಿಕೊಳ್ಳುವಂತಹ ಈಗಿನ ಪರಿಸ್ಥಿತಿಯಾಗಿದೆ ಮನುಷ್ಯ ಆಸೆ ಪಡಬೇಕು ದುರಾಸೆ ಪಡಬಾರದು ಪ್ರತಿಯೊಬ್ಬರೂ ನಮ್ಮವರೇ ಎಂಬ ಭಾವನೆ ಬರಬೇಕು ಯಾರಿಗೂ ಕೆಡಕು ಬಯಸಬಾರದು ಇನ್ನೊಬ್ಬರ ಕೆಡಕಿಗಾಗಿ ಯಾವುದೇ ಮಾಟ ಮಂತ್ರಗಳನ್ನು ಮಾಡಿಸುವುದರ ಮೂಲಕ ನಿಮಗೆ ಸುಖ ದೊರೆಯುವುದಿಲ್ಲ ಕುಟುಂಬ ಸೌಕರ್ಯಕ್ಕಾಗಿ ಭಗವಂತನ ಪ್ರಾರ್ಥನೆಯಲ್ಲಿ ಬದುಕಬೇಕೆಂದರು ನಂತರ ರಾಯರ ರಂಗಮಂದಿರದ ವತಿಯಿಂದ ಗುರೂಜಿರವರಿಗೆ ರಾಯರ ಪ್ರಸಾದ ನೀಡಿ ಗೌರವಿಸಿ ಅಭಿನಂದಿಸಲಾಯಿತು
ನಂತರ ಬಂದಂತಹ ನೂರಾರು ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು
ಇದೇ ಸಂದರ್ಭದಲ್ಲಿ ಕೆಂಪೇಗೌಡ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ಕಾಳೆನಹಳ್ಳಿ ಆನಂದ್, ರಾಯರ ಭಕ್ತರಾದ ಜಗದೀಶ್, ರಾಯರ ರಂಗಮಂದಿರದ ಮುಖ್ಯಸ್ಥ ಪ್ರಕಾಶ್ ಸೇರಿದಂತೆ ಇತರರು ಹಾಜರಿದ್ದರು.





