ಸಕಲೇಶಪುರ : ತಾಲೂಕಿನ ಬೆಳಗೋಡು ಗ್ರಾಮ ಪಂಚಾಯತಿ ವ್ಯಾಪ್ತಿಯ ಈಶ್ವರ ಹಳ್ಳಿ ಗ್ರಾಮದ ರಸ್ತೆಯ ಮಧ್ಯ ಭಾಗದಲ್ಲಿ ಜೆ. ಜೆ. ಎಂ ( ಜಲ್ ಜೀವನ್ ಮಿಷನ್ ) ನವರು ರಸ್ತೆ ಮಧ್ಯಭಾಗದಲ್ಲಿ ಚರಂಡಿ ಅಳವಡಿಸಿ ಪೈಪ್ಲೈನ್ ಮಾಡಿದ್ದರಿಂದ ರಸ್ತೆ ಕೆಸರುಗದ್ದೆ ಯಾದಂತೆ ಆಗಿದೆ ಇದಕ್ಕೆಲ್ಲ ಕಾರಣ ಅಧಿಕಾರಿಗಳ ನಿರ್ಲಕ್ಷೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ

ಪ್ರತಿದಿನ ಬೈಕು,ಕಾರು, ಕೃಷಿ ಚಟುವಟಿಕೆ ಯಾಂತ್ರಿಕ ವಾಹನಗಳು ಮತ್ತು ಸಿಲಿಂಡರ್ ವಾಹನಗಳು ಗ್ರಾಮದ ಒಳಗೆ ಪ್ರವೇಶಿಸದಂತಾಗಿದೆ ಹಾಗೂ ಶಾಲೆಯ ಮಕ್ಕಳು ಕೆಸರುಗದ್ದೆಯಂತಾಗಿರುವ ರಸ್ತೆಯಲ್ಲಿ ನಡೆದುಕೊಂಡು ಹೋಗಿ ಕಾಲು ಜಾರಿ ಬಿದ್ದು ನಂತರ ಪುನಃ ಶಾಲೆಯ ಸಮವಸ್ತ್ರ ಬದಲಿಸಿ ಶಾಲೆಗೆ ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ.

ಹಾಗೆಯೇ ಗ್ರಾಮದ ಜನರು ರಸ್ತೆಯಲ್ಲಿ ಸಾರ್ವಜನಿಕರು ಮತ್ತು ವಾಹನ ಸವಾರರು ತಿರುಗಾಡಲು ಅರಸಾಹಸ ಮಾಡಬೇಕಾಗಿದೆ ಇನ್ನು ಕೆಲವರು ರಸ್ತೆಯಲ್ಲಿ ಜಾರಿ ಬಿದ್ದು ಚಿಕಿತ್ಸೆ ಪಡೆಯುವಂತಾಗಿದೆ ಹಾಗೆಯೇ ಕೃಷಿ ಚಟುವಟಿಕೆಗಳಿಗೆ ತೆರಳಲು ಕಷ್ಟಕರವಾಗಿದೆ ಗ್ರಾಮದಲ್ಲಿ ಅಳವಡಿಸಿರುವ ಕಾಂಕ್ರೀಟ್ ರಸ್ತೆಯನ್ನು ಎರಡು ಬದಿ ಜೆಜೆ ಎಂ ಪೈಪ್ ಅಳವಡಿಸಲು ಯಂತ್ರದ ಮೂಲಕ ಕಟ್ ಮಾಡಿ ಕಾಂಕ್ರೀಟ್ ರಸ್ತೆ ಕೂಡ ಮಳೆ ನೀರು ತುಂಬಿ ಹಾಳಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣ ಬೆಳಗೋಡು ಗೌರವಾಧ್ಯಕ್ಷರಾದ ಬಸವರಾಜು ರವರು ರಸ್ತೆ ಆಳಾಗಿರುವುದನ್ನು ಖಂಡಿಸಿ ಶಾಸಕರು ಕೂಡಲೆ ಗಮನ ಹರಿಸಿ, ಗ್ರಾಮದ ರಸ್ತೆಯ ಸಮಸ್ಯೆ ಯನ್ನುಬಗೆಹರಿಸಬೇಕಾಗಿ ಆಗ್ರಹಿಸಿದ್ದಾರೆ.

ಇದೇ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಮಂಜುನಾಥ್, ರವಿಚಂದ್ರ, ಹರೀಶ್, ಚೈತ್ರ, ನಂದಿನಿ, ಈರಮ್ಮ, ಸೋಮಶೇಖರ್ ಹಾಗೂ ಇತರರು ಹಾಜರಿದ್ದರು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *