
ದಿನದಿಂದ ದಿನಕ್ಕೆ ರಾಜ್ಯಾಧ್ಯoತ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿದ್ದು ನಮ್ಮ ಸಕಲೇಶಪುರ ನಗರದ ಪುರಸಭೆಯ ಅಧಿಕಾರಿಗಳು ಡೆಂಗ್ಯೂ ಪ್ರಕರಣದ ತಡೆಗೆ ಯಾವುದೇ ರೀತಿಯ ಕ್ರಮ ಕೈಗೊಳ್ಳದೇ ಇರುವುದು ವಿಷಾದನೀಯ
ನಮ್ಮ ಸಕಲೇಶಪುರ ನಗರಾದ್ಯಂಥ ಯಾವುದೇ ಚರಂಡಿಗಳಿಗೂ ಕೂಡ ಬ್ಲೀಚಿಂಗ್ ಪೌಡರ್ ಏನೆಂದು ತಿಳಿದೇ ಇಲ್ಲ ಏಕೆಂದರೆ ನಗರದ ಸ್ವಚ್ಛತೆಗೆ ಬ್ಲೀಚಿಂಗ್ ಪೌಡರ್ ಬಳಕೆ ಆಗುತ್ತಿಲ್ಲ ಸರಿಯಾದ ರೀತಿಯಲ್ಲಿ ಕಸ ವಿಲೇವಾರಿ ಆಗುತ್ತಿಲ್ಲ
ಜನರಿಗೆ ಸರಿಯಾದ ಕುಡಿಯುವ ನೀರಿನ ವ್ಯವಸ್ಥೆ ಆಗುತ್ತಿಲ್ಲ,ಜನರ ತೆರಿಗೆ ಹಣದಲ್ಲಿ ಸಂಬಳ ತೆಗೆದುಕೊಳ್ಳುತ್ತಿರುವ ಪುರಸಭೆಯ ಅಧಿಕಾರಿಗಳು ಕೂಡಲೇ ತಮ್ಮ ದರ್ಪವನ್ನು ಬಿಟ್ಟು ಡೆಂಗ್ಯೂ ತಡೆಗೆ ಬೇಕಾದ ಸೂಕ್ತ ಕ್ರಮಗಳನ್ನು ಕೈಗೊಳ್ಳದೇ ಇದ್ದಲ್ಲಿ ನಮ್ಮ ಮಾನವ ಹಕ್ಕುಗಳ ರಕ್ಷಣಾ ಸಮಿತಿಯ ವತಿಯಿಂದ ಹೋರಾಟ ಮಾಡಲಾಗುವುದು
ಇಂತಿ : ಜೀವನ್ ಗೌಡ ಜಿಲ್ಲಾಧ್ಯಕ್ಷರು ವಿಜಯ್ ಕುಮಾರ್ ತಾಲ್ಲೂಕು ಅಧ್ಯಕ್ಷರು ಮಾನವ ಹಕ್ಕುಗಳ ರಕ್ಷಣಾ ಸಮಿತಿಯ ಎಲ್ಲಾ ಪದಾಧಿಕಾರಿಗಳು
