
ಆಲೂರು : ಪಟ್ಟಣದ ಮುಖ್ಯ ರಸ್ತೆ ಮಧ್ಯ ಬಾಯಿ ತೆರೆದಿದ್ದ ಆಳತ್ತರದ ಗುಂಡಿ ಕುರಿತು ಪ್ರಕಟವಾದ ವರದಿಗೆ ಸ್ಪಂದಿಸಿದ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಬೆಳಗ್ಗೆಯಿಂದನೇ ಗುಂಡಿ ಮುಚ್ಚಿಸುವ ಕೆಲಸ ಆರಂಭ ಮಾಡಿದ್ದಾರೆ.
ಪಟ್ಟಣದಲ್ಲಿ ಗುಂಡಿ ಬಿದ್ದ ರಸ್ತೆ ಕುರಿತು ಮಲೆನಾಡು ನ್ಯೂಸ್ ಸೋಮವಾರ ಸುದ್ದಿ ವರದಿ ಪ್ರಕಟಿಸಿತ್ತು.
ಇದಕ್ಕೆ ಸ್ಪಂದಿಸಿರುವ ಇಂಜಿನಿಯರ್ ಕವಿತಾ ಹಾಗೂ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಮುಂಜಾನೆಯೇ ಗುಂಡಿ ಮುಚ್ಚಿಸಿ ರಸ್ತೆ ದುರಸ್ತಿ ಮಾಡಿಸಿದ್ದಾರೆ.
ವರದಿ ಪ್ರಕಟವಾದ ಒಂದೇ ದಿನದಲ್ಲೇ ದುರಸ್ತಿ ಕಾರ್ಯ ಮಾಡಿದ್ದು, ಜನರು ನಿಟ್ಟಿಸಿರು ಬಿಟ್ಟಿದ್ದಾರೆ.
ಡಾಂಬರೀಕರಣವಾಗಿದ್ದರು ಪದೇ ಪದೇ ತಿಂಗಳಿಗೊಮ್ಮೆ , ಗುಂಡಿ ಬಿದ್ದಿದ್ದರಿಂದ ವಾಹನ ಸವಾರರು ಸರ್ಕಾರಕ್ಕೆ ಹಿಡಿಶಾಪ ಹಾಕಿದ್ದರು. ಕೋಟ್ಯಂತರ ರೂಪಾಯಿ ಖರ್ಚಾದರೂ ಗುಣಮಟ್ಟದ ಡಾಂಬರೀಕರಣ ಮಾಡಿಲ್ಲ ಎನ್ನುವ ಆರೋಪಗಳನ್ನು ಮಾಡಿದ್ದರು.
ಪ್ರತಿಬಾರಿಯೂ ಅದೇ ಸ್ಥಳದಲ್ಲಿ ಗುಂಡಿಗಳಾಗಿ ರಸ್ತೆ ದುರಸ್ತಿಗೆ ಬರುತ್ತಿತ್ತು. ಹೀಗಾಗಿ ಈಗ ಅದೇ ಸ್ಥಳದಲ್ಲಿರುವ ರಸ್ತೆ ವಿಭಕಜವನ್ನು ಒಡೆದು ನೀರು ಹರಿದು ಹೋಗಲು ದಾರಿ ಮಾಡಿಕೊಟ್ಟಿದ್ದಾರೆ.
ಇದರಿಂದ ಮತ್ತೆ ರಸ್ತೆ ಹಾಳಾಗುವುದಿಲ್ಲ ಎನ್ನುವುದು ಇಂಜಿನಿಯರ್ ಕವಿತಾರವರ ಮಾತಾಗಿದೆ.
ಒಟ್ಟಾರೆ ಸುದ್ದಿ ಬಿತ್ತರಿಸಿದ ಬೆನ್ನಲ್ಲೇ ಹೆಚ್ಚೇತ್ತು ಕೊಂಡು ಕಣ್ಮುಚ್ಚಿ ಕುಳಿತ ಅಧಿಕಾರಿಗಳು ಸುದ್ದಿ ನೋಡಿ ಗುಂಡಿ ಮುಚ್ಚಿಸುವಂತಹ ಕೆಲಸ ಮಾಡಿದ್ದಾರೆ




