
ಸಕಲೇಶಪುರ : ಪಟ್ಟಣದಲ್ಲಿ ಬಿಡದೇ ಸುರಿಯುತ್ತಿರುವ ಧಾರಾಕಾರ ಮಳೆಗೆ ಕುಶಾಲನಗರ ಬಡಾವಣೆಯ ಬಿಲಾಲ್ ಮಸೀದಿ ಸಮೀಪದ ಕಲೀಲ್ ಎಂಬುವವರ ಮನೆ ಹತ್ತಿರ ಭೂ ಕುಸಿತವಾಗಿದೆ ಎಂದು ಮಾಹಿತಿಯಿಂದ ತಿಳಿದುಬಂದಿದೆ.
ಮಳೆಯ ಅಬ್ಬರಕ್ಕೆ ಕುಶಾಲನಗರ ಬಡಾವಣೆಯ ಬಿಲಾಲ್ ಮಸೀದಿಯ ಬಳಿ ಇರುವ ಖಲೀಲ್ ಎಂಬುವರ ಮನೆ ಅತಿಯಾದ ಮಳೆಗೆ ಬಿದ್ದು ಹೋಗಿದ್ದು ಇದೆ ರೀತಿ ಮಳೆ ಮುಂದುವರೆದರೆ ಸಂಪೂರ್ಣ ನೆಲಸಮವಾಗುವ ಭೀತಿ ಎದುರಾಗಿದ್ದು ಕೂಡಲೇ ಪುರಸಭೆಯ ಅಧಿಕಾರಿಗಳು ಇತ್ತ ಗಮನಹರಿಸಬೇಕು ಎಂದು ಸಂತ್ರಸ್ತ ಖಲೀಲ್ ಅವರು ಅಳಲನ್ನು ತೋಡಿಕೊಂಡಿದ್ದಾರೆ.



