
ಆಲೂರು : ತಾಲೂಕಿನಾದ್ಯಂತ ಬಿರುಸಿಕೊಂಡಿರುವ ಮಳೆಯಿಂದಾಗಿ, ಕೆಲವೆಡೆ ಮನೆಗಳು ಶೀತ ಹೆಚ್ಚಾಗಿ ಕುಸಿಯುತ್ತಿದ್ದರೆ ಇನ್ನೊಂದೆಡೆ ಬಾರಿ ಗಾಳಿಯಿಂದ ಮರಗಳು ಮನೆಯ ಮೇಲೆ ಬೀಳುತ್ತಿವೆ.
ತಾಲೂಕಿನ ಕದಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಯಸಮುದ್ರ ಗ್ರಾಮದ ವೃದ್ದೆ ಜಯಮ್ಮ ಬಿನ್ ಬೆಟ್ಟೇಗೌಡ ಎಂಬುವವರ ವಾಸದ ಮನೆಯ ಒಂದು ಭಾಗದ ಗೋಡೆ ಸತತವಾಗಿ ಸುರಿಯುತ್ತಿರುವ ಮಳೆಗೆ ಕುಸಿದು ಬಿದ್ದಿದ್ದು, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ನಾನು ಕೂಲಿ ಕೆಲಸ ಮಾಡಿ ಕೊಂಡು ಜೀವನ ನಡೆಸುತ್ತಿದ್ದು, ವಾಸವಾಗಿರುವ ಮನೆಯ ಗೋಡೆ ಮಳೆಯಿಂದಾಗಿ ಕುಸಿದು ಬಿದ್ದಿದ್ದು ವಾಸವಿರಲು ತುಂಬಾ ಸಮಸ್ಯೆ ಆಗಿದೆ.
ಈ ಬಗ್ಗೆ ತಾಲೂಕು ಆಡಳಿತ ಗಮನಹರಿಸಿ ಪರಿಹಾರ ನೀಡುವಂತೆ ಮನೆಯ ಮಾಲೀಕರಾದ ವೃದ್ದೆ ಜಯಮ್ಮ ಮನವಿ ಮಾಡಿದ್ದಾರೆ.

