ಸಕಲೇಶಪುರ : ದಿನಾಂಕ 12-10-23 ರಂದು ಸಕಲೇಶಪುರ ಹೊಸ ಬಸ್ ನಿಲ್ದಾಣದಲ್ಲಿ ತಮ್ಮ ಊರಿಗೆ ತೆರಳಲು ನಿಂತಿದ್ದ ಯಸಳೂರು ಹೋಬಳಿ ಕುಂಭಾರಗೇರಿ(ಎಡಕೇರಿ ) ಗ್ರಾಮದ ತೀರ್ಥ ಕೋ ಸತೀಶ ಹಾಗೂ ಕಳಲೆ ಗ್ರಾಮದ ಶೀಲಾ ಕೋ ಸುಭ್ರಮಣ್ಯ ರವರ ಮಾಂಗಲ್ಯ ಸರ ಎಗ್ಗರಿಸಿ ಬಂಧಿತ ದಂಪತಿಗಳು ಪರಾರಿಯಾಗಿದ್ದರು.

ಇದೆ ರೀತಿ ಜಿಲ್ಲೆಯಲ್ಲಿ ನಾನಾ ಕಡೆ ಮಾಂಗಲ್ಯ ಕಳ್ಳತನ ಪ್ರಕರಣ ನೆಡೆದಿದ್ದ ಹಿನ್ನೆಲೆಯಲ್ಲಿ ಸಕಲೇಶಪುರ ಉಪವಿಭಾಗದಲ್ಲಿ ಒಂದು ವಿಶೇಷ ತಂಡ ರಚನೆ ಮಾಡಲಾಗಿತ್ತು.ಇದೀಗ ಆರೋಪಿಗಳಾದ ಚನ್ನರಾಯಪಟ್ಟಣ ತಾಲೂಕು ಬಾಗೂರು ಹೋಬಳಿಯ ಬಿ. ಹೊನ್ನೇನಹಳ್ಳಿ ಮೂಲದ ಧರ್ಮರಾಜ್ ಬಿನ್ ಶಿವಣ್ಣ ಮತ್ತು ನೆಲಮಂಗಲದ ಅರಿಶಿನಕುಂಟೆ ಆದರ್ಶನಗರದ ಲಕ್ಷ್ಮಿ ಕೋ ಧರ್ಮರಾಜ್ ದಂಪತಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವೀಯಾಗಿದ್ದಾರೆ ಬಂಧಿತರಿಂದ ಎರಡು ಮಾಂಗಲ್ಯ ಸರ ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ಸ್ವಿಫ್ಟ್ ಕಾರು ವಶ ಪಡಿಸಿಕೊಳ್ಳಲಾಗಿದೆ

ಸದರಿ ಪ್ರಕರಣಗಳನ್ನು ಹಾಸನ ಜಿಲ್ಲೆಯ ಪೊಲೀಸ್ ಅಧೀಕ್ಷಕರಾದ ಮಾನ್ಯ, ಕು| ಮೊಹಮ್ಮದ್ ಸುಜೀತಾ ಐ.ಪಿ.ಎಸ್. ಹಾಗೂ ಮಾನ್ಯ ಅಪರ ಪೊಲೀಸ್ ಅಧೀಕ್ಷಕರುಗಳಾದ 1) ಶ್ರೀ ಎಂ.ಕೆ.ತಮ್ಮಯ್ಯ ಕೆ.ಎಸ್.ಪಿ.ಎಸ್.(ಕಾ&ಸು) ಹಾಗೂ 2) ಶ್ರೀ ವೆಂಕಟೇಶ ನಾಯ್ಡು ಕೆ.ಎಸ್.ಪಿ.ಎಸ್. (ಅಪರಾಧ) ಹಾಗೂ ಸಕಲೇಶಪುರದ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಪ್ರಮೋದ್ ಕುಮಾರ್.ಬಿ ಕೆ.ಎಸ್.ಪಿ.ಎಸ್. ರವರುಗಳ ಮಾರ್ಗದರ್ಶನದಲ್ಲಿ ಸಕಲೇಶಪುರ ನಗರ ಪೊಲೀಸ್ ಠಾಣಾಯ ಪೊಲೀಸ್ ನಿರೀಕ್ಷಕರಾದ ಶ್ರೀ ಜಗದೀಶ ಎಂ. ಹಾಗೂ ಆಲೂರು ಪೋಲಿಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಗಂಗಾಧರ್ ರವರುಗಳ ನೇತೃತ್ವದಲ್ಲಿ ಸಕಲೇಶಪುರ ನಗರ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರುಗಳಾದ ಶ್ರೀ ಪ್ರಮೋದ್ ಹೆಚ್.ಎಸ್ .(ಕಾ&ಸು ), ಶ್ರೀ ಕೃಷ್ಣಪ್ಪ ( ಅಪರಾಧ), ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸ್ ಅಪರಾಧ ವಿಭಾಗ ಪಿ.ಎಸ್.ಐ ರವರಾದ ಯು.ಖತಿಜಾ ಹಾಗೂ ಸಿಬ್ಬಂದಿಗಳಾದ. ಶ್ರೀ ಪೃಥ್ವಿ ಸಿಹೆಚ್‌ಸಿ -214, ಶ್ರೀ ರೇವಣ್ಣ ಸಿಹೆಚ್‌ಸಿ -133, ಶ್ರೀ ರವಿ ಹೆಚ್‌ಸಿ 286, ಶ್ರೀಮತಿ ಸುಜಾತ ಮಹೆಚ್‌ಸಿ-231, ಚಂದ್ರಕಾಂತ್ ಸಿಪಿಸಿ -148, ಶ್ರೀ ಶಾಂತರಾಜು ಸಿಪಿಸಿ- 32, ಶ್ರೀ ಸುನೀಲ್ ಸಿಪಿಸಿ-95, ವೆಂಕಟೇಶ ಸಿಪಿಸಿ 614 ಚಾಲಕರಾದ ಶ್ರೀ ರಘು ಎ.ಹೆಚ್.ಸಿ-18 ಸಿಡಿಆರ್ ವಿಭಾಗದ ಶ್ರೀ ಫೀರ್‌ಖಾನ್ ಎ.ಹೆಚ್.ಸಿ.ರವರು ಸದರಿ ಪ್ರಕರಣಗಳನ್ನು ಪತ್ತೆಹಚ್ಚಿರುತ್ತಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *