
ಹಾಸನ : ಎಸ್.ಎಂ.ಕೆ ನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ, ಹಾಗೂ ರೋಟರಿ ಕ್ಲಬ್ ಆಫ್ ಹಾಸನ್ ಸನ್ ರೈಸ್ ಮತ್ತು ಯೋಗ ಚೇತನ ಕೇಂದ್ರ ಅಡಗೂರು, ಇವರ ವತಿಯಿಂದ ದಿನಾಂಕ : 02-08-2024 ರಿಂದ ದಿನಾಂಕ : 17-08-2024 ರವರೆಗೆ ಹಮ್ಮಿಕೊಳ್ಳಲಾಗಿದ್ದ, ಯೋಗಾಸನ, ಪ್ರಾಣಾಯಾಮ, ಧ್ಯಾನ ಶಿಬಿರದಲ್ಲಿ “ಚೇತನ್ ಗುರೂಜಿ” ರವರ ನೇತೃತ್ವದಲ್ಲಿ ದಿನಾಂಕ : 17-08-2024 ರಂದು ಶನಿವಾರ ಬೆಳಿಗ್ಗೆ 09-30 ಗಂಟೆಗೆ ಹಾಸನದ ಆರ್ ಟಿ ಓ ಕಚೇರಿ ಹತ್ತಿರ ಇರುವ ಎಸ್.ಎಂ.ಕೆ ನಗರದಲ್ಲಿ ಹಾಸನದ ನುರಿತ ವೈದ್ಯರುಗಳಿಂದ ರಕ್ತದಾನ ಶಿಬಿರ, ಉಚಿತ ನೇತ್ರ ಮತ್ತು ದಂತ ತಪಾಸಣಾ ಶಿಬಿರ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು,
ಸದರಿ ಕಾರ್ಯಕ್ರಮಕ್ಕೆ ಎಲ್ಲಾ ರೋಟೇರಿಯನ್ ಗಳು, ಶಿಬಿರಾರ್ಥಿಗಳು ಹಾಗೂ ಅವರ ಕುಟುಂಬ ವರ್ಗದವರೂ ಹಾಗೂ ಬಂಧು ಬಾಂಧವರೊಡನೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಸದರಿ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ತಪಾಸಣೆಯನ್ನು ಮಾಡಿಸಿಕೊಂಡು ಆರೋಗ್ಯ ತಪಾಸಣಾ ಶಿಬಿರವನ್ನು ಯಶಸ್ವಿಗೊಳಿಸಿಕೊಡಬೇಕೆಂದು ತಮ್ಮಲ್ಲಿ ಈ ಮೂಲಕ ಕೇಳಿಕೊಳ್ಳುತ್ತೇವೆ.
ಇಂತಿ : ಅಧ್ಯಕ್ಷರು/ಕಾರ್ಯದರ್ಶಿಗಳು ಹಾಗೂ ಪದಾಧಿಕಾರಿಗಳು ಮತ್ತು ಕಾರ್ಯಕಾರಿಣಿ ಮಂಡಳಿ ಸದಸ್ಯರುಗಳು, ರೋಟರಿ ಕ್ಲಬ್ ಆಫ್ ಹಾಸನ್ ಸನ್ ರೈಸ್,ಹಾಸನ.

