ಆಲೂರು : ಗುರು ಬ್ರಹ್ಮ ಗುರು ವಿಷ್ಣು ..! ಗುರು ದೇವೋ ಮಹೇಶ್ವರ ..! ಗುರುವಿಗೆ ದೇವರೆಂದು ಕರೆಯುತ್ತಾರೆ. ಶಿಕ್ಷಕರು ತಮ್ಮಲ್ಲಿರುವ ಜ್ಞಾನವನ್ನು ವಿದ್ಯಾರ್ಥಿಗಳಿಗೆ ಧಾರೆ ಎರೆದು ವಿದ್ಯಾರ್ಥಿಗಳಿಗೆ ಅಕ್ಷರ ಕಲಿಸಿದ ನೆಚ್ಚಿನ ಗುರುಗಳಿಗಾಗಿ ಶಾಲೆ ಮಕ್ಕಳು ಗಳ ಗಳನೇ ಕಣ್ಣೀರು ಹಾಕಿದ್ದಾರೆ.

ಶಾಲೆ ಬಿಟ್ಟು ಹೋಗುವದನ್ನು ಅರಗಿಸಿಕೊಳ್ಳಲು ಸಾಧ್ಯವಾಗದೇ ಶಾಲೆ ವಿದ್ಯಾರ್ಥಿಗಳು ಕಣ್ಣೀರಾದರು.

ಹಾಸನ ಜಿಲ್ಲೆ ಆಲೂರು ತಾಲ್ಲೂಕಿನ ಕಸಬಾ ಹೋಬಳಿ ಗೇಕರವಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಶಿಕ್ಷಕಿ ಲೀಲಮ್ಮ ಅವರಿಗಾಗಿ ಶಾಲೆಯ ವಿದ್ಯಾರ್ಥಿಗಳು ಕಣ್ಣೀರು ಹಾಕಿದರು

ಸುದೀರ್ಘ 22 ವರ್ಷಗಳಿಂದ ಈ ಶಾಲೆಯಲ್ಲಿ ಸೇವೆಸಲ್ಲಿಸಿದ್ದು ಬೇರೆಡೆಗೆ ವರ್ಗಾವಣೆಗೊಂಡ ಶಿಕ್ಷಕಿಗೆ ಸನ್ಮಾನಿಸಿ ಗೌರವಿಸಲಾಯಿತು.

ದಯವಿಟ್ಟು ಶಾಲೆ ಬಿಟ್ಟು ಹೋಗಬೇಡಿ ಮೇಡಂ ಗೇಕರವಳ್ಳಿ ಗ್ರಾಮದ ಶಾಲೆಯ ಶಿಕ್ಷಕಿ ಲೀಲಮ್ಮ ಅವರು ಕಳೆದ 22 ವರ್ಷದಿಂದ ಶಿಕ್ಷಕರಾಗಿ ಸೇವೆ ಸಲ್ಲಿಸಿ ಶಾಲೆಯ ಮಕ್ಕಳ ಪ್ರೀತಿಗೆ ಪಾತ್ರರಾಗಿದ್ದರು.

ಕಂಬನಿಯಲ್ಲೂ ಸಂಭ್ರಮವಿರುತ್ತದೆ. ಅರಿಯಲು ವಿಶಾಲ ಮನೋಭಾವ ಇರಬೇಕು. ಸರಳತೆಯಲ್ಲೂ ಸಿರಿವಂತಿಕೆಯಿರುತ್ತದೆ ಗುರುತಿಸಲು ಹೃದಯವಂತಿಕೆಬೇಕು. ಮೌನದಲ್ಲೂ ಮಾತು ಇರುತ್ತದೆ, ಅರ್ಥ ಮಾಡಿಕೊಳ್ಳೋ ಎದೆಗಾರಿಕೆ ಬೇಕು”ಎಂಬ ಈ ಮಾತುಗಳು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಗೇಕರವಳ್ಳಿ ಇಲ್ಲಿನ ಶಿಕ್ಷಕಿ ಲೀಲಮ್ಮ ಅವರಿಗೆ ಅನ್ವಯಿಸುತ್ತದೆ. ತಮ್ಮ 22ವರ್ಷಗಳ ಸುದೀರ್ಘ ಸೇವೆಯಿಂದ ಬೇರೆ ಶಾಲೆಗೆ ವರ್ಗಾವಣೆ ಹೊಂದಿದರು.

ಹೆಸರಿಗೆ ತಕ್ಕಂತೆ ಇವರು ಶಾಂತಸ್ವಭಾವ, ಕ್ರಿಯಾಶೀಲತೆ ಹಾಗೂ ಚಟುವಟಿಕೆಯಿಂದ ಕೂಡಿದ್ದು ಇವರ ಪಾಠಗಳು ಸುಲಭವಾಗಿ ಮಕ್ಕಳಿಗೆ ಅರ್ಥವಾಗುವಂತೆ ಇರುತ್ತಿತ್ತು. ಪ್ರತಿಭಾವಂತ ಶಿಕ್ಷಕಿ ಪ್ರಾಮಾಣಿಕತೆಯಿಂದ ತಮ್ಮ ಕಾರ್ಯ ನಿರ್ವಹಿಸುತ್ತಿದ್ದು, ಸಹಬಾಳ್ವೆ, ಸಹಕಾರ, ಸದಾಚಾರ, ಸುಕೋಮಲತೆ ಇತ್ಯಾದಿ ಮೌಲ್ಯಗಳಿಂದ ಕೂಡಿದ ಅನನ್ಯ ವ್ಯಕ್ತಿತ್ವ ಇವರದು. ಹಸಮ್ಮುಖಿಯಾಗಿ ಸುದೀರ್ಘ 25 ವರ್ಷಗಳ ಅಮ್ಯೂಲ ಸೇವೆ ನೀಡಿ ಮಕ್ಕಳ ಉಜ್ವಲ ಭವಿಷ್ಯಕ್ಕೆ ಕಾರಣಕರ್ತರಾದ ಶ್ರೀಮತಿ ಲೀಲಮ್ಮ ಕುಮಾರಿಯವರಿಗೆ ಗೇಕರವಳ್ಳಿ ಹಾಗೂ ಹುಲ್ಲಹಳ್ಳಿ ಗ್ರಾಮಸ್ಥರಿಂದ ವಿದಾಯ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಲೀಲಮ್ಮ ಪ್ರೀತಿಯ ವಿದ್ಯಾರ್ಥಿಗಳಿಂದ ಸನ್ಮಾನ ಹಾಗೂ ಉಡುಗೊರೆ ಸ್ವೀಕರಿಸಿ ಮಾತನಾಡಿದವರು ಒಂದೇ ಶಾಲೆಯಲ್ಲಿ 22 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು ನಿಜಕ್ಕೂ ಸಂತೋಷ ಆತ್ಮತೃಪ್ತಿ ತಂದಿದೆ. ಇದೇ ಶಾಲೆಯಿಂದ ವರ್ಗಾವಣೆ ಹೊಂದುತ್ತಿರುವುದು ನನ್ನ ಬದುಕಿನ ಅವಿಸ್ಮರಣೀಯ ಕ್ಷಣ ಹಾಗೂ ಬೇಸರದ ಸಂಗತಿ ಈ ಗ್ರಾಮದಲ್ಲಿ 22ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿದ್ದೇನೆ ಗ್ರಾಮದ ಜನರು ನಮಗೆ ತುಂಬಾ ಸಹಕಾರ ನೀಡಿದ್ದಾರೆ ವಿದ್ಯಾರ್ಥಿಗಳು ನನಗೆ ಒಳ್ಳೆಯ ಗೌರವವನ್ನು ಕೊಡುವುದರ ಮೂಲಕ ನನಗೆ ಈ ಶಾಲೆಯಲ್ಲಿ ಸೇವೆಸಲ್ಲಿಸಲು ಅವಕಾಶ ಸಿಕ್ಕಿತುಯೆಂದು ಬಾವುಕರಾಗಿ ಕಣ್ಣೀರಿಟ್ಟರು.

ಹಳೆಯ ವಿದ್ಯಾರ್ಥಿ ಪ್ರಸನ್ನ ಮಾತನಾಡಿ ಶಿಕ್ಷಕರು ನಮ್ಮ ಜೀವನದಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತಾರೆ. ಹೆತ್ತವರ ನಂತರ, ಶಿಕ್ಷಕರು ನಮಗೆ ಶಿಕ್ಷಣ ದೀಕ್ಷೆ ಮತ್ತು ಸಮಾಜದ ಜ್ಞಾನ ನೀಡುತ್ತಾರೆ ಇಂದು ಅವರ ವರ್ಗಾವಣೆ ನಮಗೆ ತುಂಬಾ ಬೇಸರವನುಂಟು ಮಾಡಿದೆ ಎಂದರು…

ನೂತನ ಶಿಕ್ಷಕಿ ವಾಣಿ ಪ್ರಸ್ತಾವಿಕವಾಗಿ ಮಾತಾನಾಡಿ ಶಾಲೆಗಳಲ್ಲಿ ಶಿಕ್ಷಕ ವಿದ್ಯಾರ್ಥಿಗಳ ಸಂಬಂಧ ಪೋಷಕ ಮಗುವಿನ ಸಂಬಂಧವಾಗಿರುತ್ತದೆ ಒಬ್ಬ ಸಹೋದ್ಯೋಗಿ ವರ್ಗವದಾಗ ಮನಸಿಗೆ ಬಹಳದುಃಖವಾಗುತ್ತದೆ, ಆದರೆ ವರ್ಗಾವಣೆ ಅನಿವಾರ್ಯ ಬದಲಾವಣೆ ಜಗದ ನಿಯಮ ಈ ನಮ್ಮ ಶಾಲೆಗೆ ಈ ಶಿಕ್ಷಕಯ ಕೊಡುಗೆ ಸದಾ ಅವಿಸ್ಮರಣೀಯ ವಿದ್ಯಾರ್ಥಿಗಳ ಏಳಿಗೆಯಲ್ಲಿ ಸಿಂಹಪಾಲು ಇಂಥ ಶಿಕ್ಷಕರ ವರ್ಗಾವಣೆ ತುಂಬಾಲಾರದ ನಷ್ಟ ಈ ಹಿಂದೆ ಇದ್ದ ಶಿಕ್ಷಕಿಗೆ ಹೇಗೆ ಸಹಕಾರ ನೀಡಿದ್ದೀರೂ ಮುಂದೆಯೂ ಕೂಡ ನಮಗೆ ನಿಮ್ಮ ಸಹಕಾರ ನೀಡಿಯೆಂದರು..

ಈ ಕಾರ್ಯಕ್ರಮದಲ್ಲಿ ಗೇಕರವಳ್ಳಿ ಹುಲ್ಲಹಳ್ಳಿ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳಾದ ಜಗದೀಶ್, ಬಸವಣ್ಣ, ದಿನೇಶ್, ಮಧು, ಶಂಕರ್, ಶಶಿ, ಜೀವನ್ ಸಂತೋಷ, ಸಂದೀಪ, ಲತೇಶ್, ಸಚಿನ್,ಚೇತನ್ ಅಪ್ಪು, ಶಶಾಂಕ್, ಮದನ್ ಇತರರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *