
ಆಲೂರು : ಲಯನ್ ರಘು ಪಾಳ್ಯ ಪಿಎಂಜೆಎಫ್ ಕರವೇ ಜಿಲ್ಲಾ ಕಾರ್ಯದರ್ಶಿ ಹಾಗೂ ಆಲೂರು ಸಕಲೇಶಪುರ ತಾಲೂಕಿನ ಕರವೇ ಉಸ್ತುವಾರಿಗಳು ಇಂದು ನಡೆದ 78ನೇ ಸ್ವಾತಂತ್ರ್ಯ ದಿನದ ಸಂಭ್ರಮಾಚರಣೆಯ ಪ್ರಯುಕ್ತ ಸಂಕ್ಲಾಪುರ ಮಠದ 85 ವಿದ್ಯಾರ್ಥಿಗಳಿಗೆ ಸಮವಸ್ತ್ರ ಹಾಗೂ ಸಿಹಿ ಹಂಚಿಕೆ ಮಾಡಿದರು
ರಘು ಪಾಳ್ಯ ರವರು ಈ ವರ್ಷದಲ್ಲಿ ಇದು ಮೂರನೇ ಶಾಲೆಗೆ ಸಮವಸ್ತ್ರ ವಿತರಿಸುತ್ತಿರುವುದು ಮೊದಲನೇದಾಗಿ ಸಿಂಗೋಡನಹಳ್ಳಿ ಸರ್ಕಾರಿ ಶಾಲೆಗೆ ಸಮಸ್ತ ನೀಡಿದರು.
ಎರಡನೆಯದಾಗಿ ಚಿನ್ನಹಳ್ಳಿ ಶಾಲೆಯ ಸರ್ಕಾರಿ ಮಕ್ಕಳಿಗೆ ಸಮಸ್ತ ವಿತರಿಸಿದ್ದರು
ಇಂದು ಸಂಕ್ಲಾಪುರ ಮಠದ ಶಾಲೆಗೆ ಸಮವಸ್ತ್ರ ವಿತರಿಸಿದರು
ಇದೇ ಸಂದರ್ಭದಲ್ಲಿ ಈ ಒಂದು ಕಾರ್ಯಕ್ರಮದ ಘನ ವೇದಿಕೆಯಲ್ಲಿ ಸಂಕಲಾಪುರ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಧರ್ಮರಾಜೇಂದ್ರ ಸ್ವಾಮಿಗಳು ಅಧ್ಯಕ್ಷತೆ ವಹಿಸಿದ್ದರು, ಈ ಶಾಲೆಯ ಕಾರ್ಯದರ್ಶಿಗಳಾದ ಕಾಂತರಾಜ್ ರವರು, ಆಲೂರು ಲಯನ್ಸ್ ಸಂಸ್ಥೆಯ ಅಧ್ಯಕ್ಷರಾದ ಕೆ ವಿ ಮಹೇಶ್, ಆಲೂರು ಲಯನ್ಸ್ ಟ್ರಸ್ಟಿನ ಅಧ್ಯಕ್ಷರಾದ ರೇಣುಕಾ ಪ್ರಸಾದ್ ರವರು, ಬೆಳಮೆ ಕೃಷಿ ಪತ್ತಿನಸಹಕಾರಿ ಸಂಘದ ಅಧ್ಯಕ್ಷರಾದ ಯಶವಂತರವರು, ಆಲೂರು ಲಯನ್ಸ್ ಸೇವಾ ಸಂಸ್ಥೆಯ ಸದಸ್ಯರು ಹಾಜರಿದ್ದರು ಇದೇ ಸಂದರ್ಭದಲ್ಲಿ ನೀಡಿದ ಲಯನ್ ರಘು ಪಾಳ್ಯ ಕರವೇ ಜಿಲ್ಲಾ ಕಾರ್ಯದರ್ಶಿ ಹಾಗೂ ಆಲೂರು ಸಕಲೇಶಪುರ ತಾಲೂಕಿನ ಕರವೇ ಉಸ್ತುವಾರಿಗಳಿಗೆ ಶಾಲೆ ವತಿಯಿಂದ ಅಭಿನಂದಿಸಲಾಯಿತು






