
ದೇಶದಲ್ಲಿ ‘ಜಾತ್ಯತೀತ ನಾಗರಿಕ ಸಂಹಿತೆ’ ಜಾರಿಗೊಳಿಸುವ ಅಗತ್ಯವಿದೆ. ಈಗ ಇರುವ ನಾಗರಿಕ ಸಂಹಿತೆ ‘ಕೋಮುವಾದಿ ಮತ್ತು ತಾರತಮ್ಯ’ ಸ್ವರೂಪದಿಂದ ಕೂಡಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ತಮ್ಮ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಹೇಳಿದ್ದಾರೆ.
ಈ ಮೂಲಕ ‘ಸಮಾನ ನಾಗರಿಕ ಸಂಹಿತೆ’ ಜಾರಿಗೆ ಮುಂದಾಗಿರುವುದನ್ನು ಸಮರ್ಥಿಸಿಕೊಂಡಿದ್ದಾರೆ.
ಪ್ರಧಾನಿಯ ಈ ಹೇಳಿಕೆಗೆ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಇದು ಸಂವಿಧಾನ ಶಿಲ್ಪಿ ಡಾ.ಬಿಆರ್ ಅಂಬೇಡ್ಕರ್ ಅವರಿಗೆ ಮಾಡಿರುವ ದೊಡ್ಡ ಅವಮಾನ ಎಂದಿದೆ.
ಈ ಕುರಿತು ಎಕ್ಸ್‌ನಲ್ಲಿ ಬರೆದುಕೊಂಡಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ “ಜೈವಿಕವಲ್ಲದ ಪ್ರಧಾನಿಯ ಇತಿಹಾಸವನ್ನು ತಿರುಚುವ, ಕುಚೇಷ್ಟೆ ಮಾಡುವ ಹಾಗೂ ಕಳಂಕ ತರುವ ಸಾಮರ್ಥ್ಯಕ್ಕೆ ಗಡಿ ಎಂಬುವುದೇ ಇಲ್ಲ. ಅದು ಇಂದು ಕೆಂಪು ಕೋಟೆಯ ಮೇಲಿಂದ ಸಂಪೂರ್ಣವಾಗಿ ಅನಾವರಣಗೊಂಡಿದೆ. ನಾವು ಇಲ್ಲಿಯವರೆಗೆ ಕೋಮುವಾದಿ ನಾಗರಿಕ ಸಂಹಿತೆಯನ್ನು ಹೊಂದಿದ್ದೆವು ಎಂಬುವುದು ಅಂಬೇಡ್ಕರ್ ಅವರಿಗೆ ಮಾಡುವ ದೊಡ್ಡ ಅವಮಾನವಾಗಿದೆ.
1950ರ ಮಧ್ಯಭಾಗದಲ್ಲಿ ನೈಜವಾಗಿ ಹೊರ ಹೊಮ್ಮಿದ್ದ ಹಿಂದೂ ವೈಯಕ್ತಿಕ ಕಾನೂನುಗಳಲ್ಲಿ ಸುಧಾರಣೆ ತಂದ ಮಹಾನ್ ದಾರ್ಶನಿಕರವರು. ಈ ಸುಧಾರಣೆಗಳನ್ನು ಆರೆಸ್ಸೆಸ್ ಹಾಗೂ ಜನಸಂಘ ತೀವ್ರವಾಗಿ ವಿರೋಧಿಸಿದ್ದವು ಎಂದು ಹೇಳಿದ್ದಾರೆ.
