ಬೇಲೂರು : ತಾಲೂಕಿನ ಗೆಂಡೇಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನಡೆದ ಅವರ ಹುಟ್ಟುಹಬ್ಬದ ಅಂಗವಾಗಿ ಗೆಳೆಯರ ಬಳಗ ವಿಜಯ ವಿದ್ಯಾರ್ಥಿಗಳಿಗೆ ಟ್ರಾಕ್ ಸೂಟ್ ವಿತರಿಸಿ ಮಾತನಾಡಿದ ಅವರು ಸರ್ಕಾರಿ ಶಾಲೆಗಳೆಂದರೆ ಅಸಡ್ಡೆ ತೋರುವ ದಿನಮಾನದಲ್ಲಿ ಸರ್ಕಾರಿ ಶಾಲೆಯಲ್ಲಿ ಓದದಂತ ವಿದ್ಯಾರ್ಥಿಗಳು ಏಪಿಎಸ್ ಐಎಎಸ್ ಅಧಿಕಾರಿಗಳಾಗಿರುವ ಉದಾಹರಣೆಗಳಿದ್ದು ಯಾರೂ ಸಹ ಸರ್ಕಾರಿ ಶಾಲೆಗಳೆಂದು ಕೀಳಾಗಿ ತೋರಬಾರದು.

ಗ್ರಾಮೀಣ ಭಾಗದಲ್ಲಿ ಎಷ್ಟೋ ವಿದ್ಯಾರ್ಥಿಗಳಿಗೆ ಅನುಕೂಲಗಳಿಲ್ಲದೆ ಓದನ್ನು ನಿಲ್ಲಿಸಿರುತ್ತಾರೆ.ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳು ಓದನ್ನು ಅರ್ಧಕ್ಕೆ ನಿಲ್ಲಿಸದೆ ವಿದ್ಯಾಭ್ಯಾಸ ಮಾಡುವುದಾದರೆ ನಮ್ಮ ಕುಟುಂಬದ ವತಿಯಿಂದ ಆರ್ಥಿಕ ಸಹಾಯವನ್ನು ನಾವು ನಿಮಗೆ ನೀಡುತ್ತೇವೆ .

ಪೋಷಕರು ನಿಮ್ಮ ವಿದ್ಯೆಗಾಗಿ ತಮ್ಮ ದುಡಿಮೆಯ ಅರ್ಧ ಭಾಗವನ್ನು ನಿಮ್ಮ ವಿದ್ಯೆಗೆ ಇಟ್ಟಿರುತ್ತಾರೆ ಅವರ ಕನಸನ್ನು ನನಸು ಮಾಡುವ ಮೂಲಕ ಉತ್ತಮ ವಿದ್ಯಾರ್ಥಿಗಳಾಗಿ ಸಮಾಜದಲ್ಲಿ ಒಳ್ಳೆಯ ಹೆಸರು ಪಡೆದು ತಾವು ಓದಿದಂತ ಶಾಲೆ ಹಾಗೂ ಪೋಷಕರಿಗೆ ಹೆಸರುತರಬೇಕು ಎಂದರು.

ಜಿಲ್ಲಾ ಕೆಡಿಪಿ ಸದಸ್ಯೆ ಸೌಮ್ಯ ಆನಂದ್ ಮಾತನಾಡಿ ಸರ್ಕಾರಿ ಶಾಲೆಗಳು ಇತ್ತೀಚಿನ ದಿನಗಳನ್ನು ಖಾಸಗಿ ಶಾಲೆಗಳಿಗೆ ಸರಿಸಮನಾಗಿ ಪೈಪೊಟಿ ನೀಡುತ್ತಿದ್ದು ಸರ್ಕಾರಿ ಶಾಲೆಗಳಿಗೆ ಸರ್ಕಾರ ಹಲವಾರು ಮೂಲಭೂತ ಸೌಕರ್ಯಗಳನ್ನು ನೀಡುತ್ತಿದೆ.ಸರ್ಕಾರಿ ಶಾಲೆಯಲ್ಲಿ ಓದುವ ವಿದ್ಯಾರ್ಥಿಗಳಿಗೆ ಸಂಸ್ಕಾ ರಯುತ ಶಿಕ್ಷಣ ದೊರಕುತ್ತಿರುವುದರಿಂದ ಇತ್ತೀಚೆಗೆ ಸರ್ಕಾರಿ ಶಾಲೆಗಳೆ ಮೇಲುಗೈ ಸಾಧಿಸುತ್ತಿದೆ.ಅಲ್ಲದೆ ಸರ್ಕಾರಿ ಶಾಲೆಯಲ್ಲಿ ಓದುವ ಪ್ರತಿಯೊಬ್ಬ ವ್ಯಕ್ತಿಗೂ ಜೀವನದ ಮೌಲ್ಯಗಳು ತಿಳದಿರುತ್ತದೆ ಆದರೆ ಖಾಸಗಿ ಶಾಲೆಗಳಲ್ಲಿ ಆನ್ ಲೈನ್ ಶಾಲೆಗಳ ಮೂಲಕ ಅವರಿಗೆ ವಿದ್ಯಾಭ್ಯಾಸ ನೀಡುವುದರಿಂದ ಕೇವಲ ಅವರು ಮೊಬೈಲ್ ದಾಸಾಗಿದ್ದಾರೆ.ಆದ್ದರಿಂದ ಪೋಷಕರು ಖಾಸಗಿ ಶಾಲೆಗಳಿಗೆ ಪ್ರಾದ್ಯಾನ್ಯತೆ ಸರ್ಕಾರಿ ಶಾಲೆಗಳಿಎ ಸೇರಿಸುವ ಕೆಲಸ ಮಾಡಬೇಕು ಎಂದರು.

ಪ್ರಾಂಶುಪಾಲ ಗಣೇಶ್ ಮಾತನಾಡಿ ಹಲವಾರು ಜನ ತಮ್ಮ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಡಂಬರದಿಂದ ಆಚರಿಸಿಕೊಳ್ಳುತ್ತಾರೆ.ಆದರೆ ಸಮಾಜ ಸೇವಕರಾದ ಸಂತೋಷ್ ರವರು ಅವರ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಳ್ಳದೆ ಸರ್ಕಾರಿ ಶಾಲೆಗಳಲ್ಲಿ ವಿದ್ಯರ್ಥಿಗಳಿಗೆ ಕ್ರೀಡಾ ಸಮವಸ್ತ್ರ ಕ್ರೀಡಾ ಸಾಮಗ್ರಿಗಳನ್ನು ನೀಡುವ ಮೂಲಕ ಆಚರಿಸಿಕೊಳ್ಳುತ್ತಿರುವುದು ನಿಜಕ್ಕೂ ಉತ್ತಮ ವಿವಾರವಾಗಿದ್ದು ಅವರು ಇದೇ ರೀತಿ ಸಮಾಜಸೇವೆ ಮುಂದುವರಿಸಲಿ ಎಂದರು.

ಇದೇ ವೇಳೆ ೧೨ ಸರ್ಕಾರಿ ಶಾಲೆಗಳ ಸುಮಾರು ೫೦೦ ವಿದ್ಯಾರ್ಥಿಗಳಿಗೆ ಕ್ರೀಡಾ ಸಮವಸ್ತ್ರ ವನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ಕೆಂಚೇಗೌಡ,ನೌಕರರ ಸಂಘದ ನಿರ್ದೇಶಕ ಆನಂದ್,ಕಾವ್ಯ ಸಂತೋಷ್,ಶಿಕ್ಷಕಾದ ಸರೋಜ ,ಸುಶ್ಮಾ,ಅನಿಕಾ,ಸುಧಾ, ರವಿಂದ್ರ,ಹಾಗೂ ಉಪನ್ಯಾಸಕರಾದ ಪೂರ್ಣೇಶ್,ಪ್ರದೀಪ್ ಇತರರು ಹಾಜರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *