ಬೆಂಗಳೂರು: ರಾಜ್ಯದಲ್ಲಿ ಡೆಂಘೀ ಸಾವಿನ ನರ್ತನದ ನಡುವೆಯೇ ಝಿಕಾ ವೈರಸ್‌ ಕಾಟ ಶುರುವಾಗಿದೆ. ಇಂದು ಝಿಕಾಗೆ ಮೊದಲ ಸಾವು ಆಗಿದ್ದು, ಶಿವಮೊಗ್ಗದಲ್ಲಿ ವೃದ್ಧ ಝಿಕಾಗೆ ಬಲಿಯಾಗಿದ್ದಾರೆ.

ಶಿವಮೊಗ್ಗದಲ್ಲಿ 74 ವರ್ಷದ ವೃದ್ಧರಿಗೆ ಝಿಕಾ ವೈರಸ್‌ನ ಗುಣಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಚಿಕಿತ್ಸೆ ನೀಡಲಾಗ್ತಿತ್ತು.

ಝಿಕಾ ವೈರಸ್ ಜೊತೆಗೆ ವ್ಯಕ್ತಿಯು ಜ್ವರ ಹಾಗೂ ವಿವಿಧ ಕಾಯಿಲೆಯಿಂದ ಬಳಲುತ್ತಿದ್ದರು.

ಈ ಹಿನ್ನೆಲೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಶಿವಮೊಗ್ಗದ ವ್ಯಕ್ತಿ ಕಳೆದ ಜುಲೈ 5ರಂದೇ ಸಾವನ್ನಪ್ಪಿದ್ದರು. ಝಿಕಾ ವೈರಸ್​ಗೆ ಸಾವನ್ನಪ್ಪಿದ ಶಂಕೆ ವ್ಯಕ್ತಪಡಿಸಿದ್ದ ಆರೋಗ್ಯ ಇಲಾಖೆ ಸ್ಯಾಂಪಲ್‌ ಕಲೆ ಹಾಕಿತ್ತು. ಇಂದು ಝಿಕಾ ವೈರಸ್​​ನಿಂದಲೇ ಸಾವನ್ನಪ್ಪಿರುವುದು ವರದಿಯಲ್ಲಿ ಪತ್ತೆಯಾಗಿದೆ.

ಶಿವಮೊಗ್ಗ ಗಾಂಧಿ ನಗರದ 74 ವರ್ಷದ ವೃದ್ಧನಿಗೆ ಕಳೆದ ಜೂನ್ 19ರಂದು ತೀವ್ರ ಜ್ವರದಿಂದ ಬಳಲುತ್ತಿದ್ದ. ಜೂನ್ 21ರಂದು ಝಿಕಾ ವೈರಸ್ ಪತ್ತೆ ಆಗಿತ್ತು. ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ವೃದ್ಧನಿಗೆ ಚಿಕಿತ್ಸೆ ನೀಡಲಾಗಿತ್ತು.

ಕುಟುಂಬಸ್ಥರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿ ಮನೆಗೆ ಕರೆದುಕೊಂಡು ಹೋಗಿದ್ದರು.

ಜ್ವರ ಮಾತ್ರವಲ್ಲದೇ ವಿವಿಧ ಕಾಯಿಲೆಯಿಂದ ಬಳಲುತ್ತಿದ್ದ ವೃದ್ಧ ಝಿಕಾ ವೈರಸ್‌ಗೆ ಸಾವನ್ನಪ್ಪಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *