ಸಕಲೇಶಪುರ : ತಾಲ್ಲೂಕಿನ ವಳಲಹಳ್ಳಿ,ಹಿರಿಯೂರು,ಕರಡಿಗಾಲ,ಬೊಮ್ಮನಕೆರೆ,ಹರಗರಹಳ್ಳಿ ಮಾರ್ಗವಾಗಿ ಸಕಲೇಶಪುರಕ್ಕೆ ಬಸ್ ವ್ಯವಸ್ಥೆಯನ್ನು ಕಲ್ಪಿಸಿ ಕೊಡುವಂತೆ ಗ್ರಾಮಸ್ಥರು ಶಾಸಕರ ಮನವಿ ಪತ್ರದೊಂದಿಗೆ ಸಕಲೇಶಪುರ ಕೆ ಎಸ್ ಆರ್ ಟಿ ಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿಯನ್ನು ಸಲ್ಲಿಸಲಾಯಿತು.

ಬೊಮ್ಮನಕೆರೆ, ವಡ್ರಹಳ್ಳಿ, ಕರಡಿಗಾಲ, ಹರಗರಹಳ್ಳಿ, ನಡನಹಳ್ಳಿ, ನೂದರಹಳ್ಳಿ, ಚೀರಿ, ಚಿನ್ನಹಳ್ಳಿ, ಜಾತಹಳ್ಳಿ, ಬೊಬ್ಬನಹಳ್ಳಿ,ವಳಲಹಳ್ಳಿ ಗ್ರಾಮದ ಜನರಿಗೆ ಸಕಲೇಶಪುರ ಕಡೆ ಹೋಗಲು ಬೆಳಗ್ಗೆ 8.30 ರ ನಂತರ ಮಧ್ಯಾಹ್ನ 3:30ರವರಿಗೆ ಬಸ್ ವ್ಯವಸ್ಥೆ ಇಲ್ಲ.

ಇದರಿಂದ ಗ್ರಾಮದ ಜನರಿಗೆ ಸಕಲೇಶಪುರಕ್ಕೆ ಹೋಗಲು ಹೋಗಲು ಸುಮಾರು ಮೂರರಿಂದ ನಾಲ್ಕು ಕಿಲೋಮೀಟರ್ ಕಾಲು ನಾಡಿಗೆಯಲ್ಲಿ ಹೋಗಿ ಸಕಲೇಶಪುರಕ್ಕೆ ಬಸ್ ಹತ್ತಬೇಕು. ಅಲ್ಲದೆ ಈ ಭಾಗದಲ್ಲಿ ಕಾಡಾನೆಗಳು ಹೆಚ್ಚಾಗಿದ್ದು ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲದೆ ಈ ಭಾಗದ ಜನರು ಪ್ರತಿನಿತ್ಯ ಆಸ್ಪತ್ರೆ, ಬ್ಯಾಂಕ್‌, ನಾಡ ಕಛೇರಿ, ಶಾಲಾ ಕಾಲೇಜುಗಳಿಗೆ ಪ್ರತಿನಿತ್ಯ ಬಸ್ ವೆವಸ್ಥೆ ಇಲ್ಲದೆ ಗ್ರಾಮಸ್ಥರು ಸಮಸ್ಯೆ ಎದುರಿಸುತ್ತಿದ್ದರು.

ಎಲ್ಲಾ ಸಮಸ್ಯೆಗಳ ಪರಿಹಾರಕ್ಕಾಗಿ ಒಂದು ಬಸ್ ವ್ಯವಸ್ಥೆ ಬೇಕೆಂದು ಅಥವಾ ಸಕಲೇಶಪುರದಿಂದ ಬೆಳಗ್ಗೆ 10-30ಕ್ಕೆ ಹೊರಡುವ ರೂಟ್ ನಂಬರ್: 67AB ಬಸ್ಸು ಶುಕ್ರವಾರಸಂತೆಗೆ ಬಂದು ನಂತರ ಅದೇ ರೂಟಿನಲ್ಲಿ ಸಕಲೇಶಪುರಕ್ಕೆ ಹೋಗುತಿತ್ತು. ಈ ಬಸ್ ನ್ನು ಶುಕ್ರವಾರ ಸಂತೆಯಿಂದ ದೊಡ್ಡನಹಳ್ಳಿ, ಆದರಿಗೆರೆ, ಹಡ್ಲಹಳ್ಳಿ ಮಾರ್ಗವಾಗಿ ವಳಲಹಳ್ಳಿ,ಹಿರಿಯೂರು,ಕರಡಿಗಾಲ,ಬೊಮ್ಮನಕೆರೆ,ಹರಗರಹಳ್ಳಿ ಮಾರ್ಗವಾಗಿ ಸಕಲೇಶಪುರ ತಲುಪುವಂತೆ ಆದರೆ ಈ ಗ್ರಾಮಸ್ಥರಿಗೆ ಉಪಯೋಗ ಆಗುತ್ತೆ.

ಈ ನಿಟ್ಟಿನಲ್ಲಿ ಗ್ರಾಮಸ್ಥರಾದ ಕರಡಿ ಹರೀಶ್, ಚಿದಾನಂದ, ಅರುಣ್ ಗೌಡ, ಹಾಗೂ ಬೊಬ್ಬನಹಳ್ಳಿ ಸುಬ್ಬಣ್ಣ ಶಾಸಕರ ಮನವಿ ಪತ್ರವನ್ನು ಬಸ್ ಡಿಪೋ ಮ್ಯಾನೇಜರ್ ಗೆ ಮನವಿ ಪತ್ರ ಸಲ್ಲಿಸಿದ್ದರು .

ಇದಕ್ಕೆ ಸುಕಾರಾತ್ಮಕವಾಗಿ ಸ್ವಂದಿಸಿದ ಸಕಲೇಶಪುರ ಡಿಪೋ ಮ್ಯಾನೇಜರ್ ವಿಪಿನ್ ಕೂಡಲೇ ಮೇಲಧಿಕಾರಿಗಳಿಗೆ ಮನವಿ ಪತ್ರವನ್ನು ಕಳಿಸಿ ಬಸ್ ಮಾರ್ಗ ವನ್ನು ಬದಲಾವಣೆ ಮಾಡಿಕೊಡುವ ಬಗ್ಗೆ ಮನವಿ ಮಾಡುವುದಾಗಿ ಹೇಳಿದ್ದಾರೆ

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *

You missed