
ಸಕಲೇಶಪುರ : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸಕಲೇಶಪುರ ವಿಧಾನಸಭಾ ಕ್ಷೇತ್ರ ಪ್ರತಿನಿದಿ ಸಭೆ ಶನಿವಾರ ನೆರವೇರಿತು .
ಎಸ್ ಡಿ ಪಿ ಐ ಜಿಲ್ಲಾಧ್ಯಕ್ಷರಾದ ಸಿದ್ದೀಕ್ ಆನೆಮಹಲ್ ನಾಯಕತ್ವದಲ್ಲಿ ತರಗತಿ ನಡೆಸಿದರು.
ಹೈದರ್ ಆನೆಮಹಲ್ ರವರು ಕಳೆದ ಮೂರುವರ್ಷಗಳ ವರದಿ ಮಂಡಿಸಿದರು.
ನಂತರ ಸಕಲೇಶಪುರ ವಿಧಾನಸಭಾ ಕ್ಷೇತ್ರ ಸಮಿತಿಗೆ 2024-27 ನೇ ಸಾಲಿಗೆ ಆಂತರಿಕ ಚುನಾವಣೆ ನಡೆಸುವ ಮೂಲಕ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ವಾಜಿದ್ ಪಾಷ ಚಂಪಕನಗರಕಾರ್ಯದರ್ಶಿ ಹೈದರ್ ಆನೆಮಹಲ್ಉಪಾಧ್ಯಕ್ಷರಾಗಿ ಸೆಯ್ಯದ್ ಅಲವಿ ಕಾಡ್ಲೂರ್ ಕೊಪ್ಪಲುಸಹ ಕಾರ್ಯದರ್ಶಿಯಾಗಿ ಸಾದಿಕ್ ಮಂಜ್ರಬಾದ್ಕೋಶಾಧಿಕಾರಿ ಯಾಗಿಅನ್ಸರ್ ಖಾನ್ ಕುಶಾಲನಗರ ಸಮಿತಿ ಸದಸ್ಯರಾಗಿ ಸಲೀಂ ಪಿಶ್ ಯಾಸೀನ್ ಖಾನ್ ಕುಶಾಲನಗರ ಆಯ್ಕೆಯಾದರು.
RO ಇಮ್ರಾನ್ ಅರೇಹಳ್ಳಿ ಹಾಗು ಸರ್ಜಿಲ್ ಹಾಸನ್ ಚುನಾವಣೆ ನಡೆಸಿಕೊಟ್ಟರು
ಸಕಲೇಶಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇರುವ ಎಲ್ಲಾ ಬ್ರಾಂಚ್ ಗಳ ಪದಾಧಿಕಾರಿಗಳು ಚುನಾವಣೆಯಲ್ಲಿ ಬಾಗವಹಿಸಿದರು.
ಶಂಶುದ್ದೀನ್ ಕಾಡ್ಲೂರ್ ಸ್ವಾಗತಿಸಿದರು .
ಕೊನೆಯಲ್ಲಿ ಹೈದರ್ ಆನೆಮಹಲ್ ಎಲ್ಲರಿಗೂ ವಂದನೆಗಳನ್ನು ಸಲ್ಲಿಸಿದರು.

