ಸಕಲೇಶಪುರ : ಜಿಲ್ಲಾ ಪಂಚಾಯಿತಿ ಕೈಗಾರಿಕಾ ವಿಭಾಗದಿಂದ ವೃತ್ತಿಪರ ಕರಕುಶಲಕರ್ಮಿಗಳಿಗೆ ನೀಡುವ ಉಚಿತ ಉಪಕರಣಗಳ ವಿತರಣಾ ಕಾರ್ಯಕ್ರಮ ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ  ಸೋಮವಾರ ನಡೆಯಿತು.

ಸುಧಾರಿತ ಉಪಕರಣಗಳ ವಿತರಿಸಿ ಮಾತನಾಡಿದ ಶಾಸಕರು,ಇದು ಯಾವುದೇ ಒಂದು ಜಾತಿ ಅಥವಾ ಜನಾಂಗಕ್ಕೆ ಸೀಮಿತವಾದ ಯೋಜನೆ ಅಲ್ಲ. ಕೈಗಳ ಮೂಲಕ ಅಥವಾ ಸಲಕರಣೆಗಳನ್ನು ಬಳಸಿ ಕಾರ್ಯ ನಿರ್ವಹಿಸುವ ಎಲ್ಲಾ ಕುಶಲ ಕರ್ಮಿಗಳೂ ಈ ಯೋಜನೆ ವ್ಯಾಪ್ತಿಗೆ ಬರುತ್ತಾರೆ. ಅದರಲ್ಲೂ ಸಾಂಪ್ರದಾಯಿಕ ಕೌಶಲ್ಯಗಳನ್ನು ಹೊಂದಿರುವ ಜನ ಸಮೂಹಕ್ಕೆ ನೆರವು ನೀಡೋದು ಈ ಯೋಜನೆಯ ಉದ್ದೇಶ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿಶ್ವಕರ್ಮ ಯೋಜನೆ ಅಡಿ  17 ಕೆಲಸಗಳಿಗೆ ಸೌಲತ್ತು  ನೀಡಲು ಮುಂದಾಗಿದೆ ಈ ಯೋಜನೆಯ  ಸದುಪಯೋಗವನ್ನು ಪಡೆದುಕೊಂಡು  ಕುಶಲಕರ್ಮಿಗಳು ಆರ್ಥಿಕವಾಗಿ  ಮುಂದುವರೆದು ಸಾವಲಂಬಿ ಜೀವನ ಕಟ್ಟಿಕೊಳುವಂತೆ ಕರೆ ನೀಡಿದರು.

ಸಾಂಪ್ರದಾಯಿಕ ಕಲೆಗಾರರು, ಕರಕುಶಲ ಕರ್ಮಿಗಳು, ಕಾರ್ಪೆಂಟರ್, ಚಿನಿವಾರರು, ಕಲ್ಲಿನ ಕೆತ್ತನೆ ಕೆಲಸ ಮಾಡುವವರು, ಮಡಿಕೆ ಸೇರಿದಂತೆ ಮಣ್ಣಿನಲ್ಲಿ ಕೆಲಸ ಮಾಡುವವರು, ಮೂರ್ತಿ ಕೆತ್ತನೆಗಾರರು, ಆಟಿಕೆ ತಯಾರಕರು, ಮರಗೆಲಸ ಮಾಡುವವರು, ಟೈಲರ್‌ಗಳು ಹೀಗೆ ಹಲವರು ಈ ಯೋಜನೆಯ ಲಾಭ ಪಡೆಯಲಿದ್ದಾರೆ.

ಇದೇ ಉದ್ಯೋಗವನ್ನು ನೆಚ್ಚಿಕೊಂಡು ಜೀವನ ಮಾಡುತ್ತಿರುವ ಎಲ್ಲರಿಗೂ ಈ ಯೋಜನೆಯಿಂದ ನೆರವಾಗಲಿದೆ.

ಯೋಜನೆಯ ಅಡಿ ಕರಕುಶಲ ಕರ್ಮಿಗಳಿಗೆ ತರಬೇತಿ, ತಾಂತ್ರಿಕ ಜ್ಞಾನ, ಹೊಸ ಉಪಕರಣ, ಸಾಲ, ಸಬ್ಸಿಡಿ ಸೇರಿದಂತೆ ಹಲವು ಅನುಕೂಲಗಳನ್ನು ಮಾಡಿಕೊಡುವ ಮೂಲಕ, ಅವರ ಉತ್ಪನ್ನಗಳಿಗೆ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆ ಒದಗಿಸೋದು ಈ ಯೋಜನೆಯ ಉದ್ದೇಶವೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಕೈಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ರವಿಪ್ರಸಾದ್, ಕೈಗಾರಿಕಾ ಇಲಾಖೆಯ ವಿಸ್ತರಣಾ ಅಧಿಕಾರಿ ಆನಂದ್, ಸಹಾಯಕ ಸೈಯದ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *

You missed