ದರ ಏರಿಕೆಯಿಂದ ತತ್ತರಿಸಿದ್ದ ಜನತೆಗೆ ಕೇಂದ್ರವು ಶುಭ ಸುದ್ದಿಯೊಂದನ್ನು ನೀಡಿದೆ. ಅಡುಗೆ ಮನೆಯಲ್ಲಿ ಕಂಪನ ಉಂಟು ಮಾಡಿದ್ದ ಅಡುಗೆ ಎಣ್ಣೆ ದರವು ಶೀಘ್ರವೇ ಇಳಿಕೆಯಾಗಲಿದೆ.ಜಾಗತಿಕ ಮಾರುಕಟ್ಟೆಗನುಗುಣವಾಗಿ ಅಡುಗೆ ಎಣ್ಣೆಯ ಎಂಆರ್‌ಪಿ ದರವನ್ನು ಪ್ರತಿ ಲೀಟರ್‌ಗೆ 8 ರಿಂದ 12 ರೂ. ಕಡಿಮೆಗೊಳಿಸುವಂತೆ ಕೇಂದ್ರ ಆಹಾರ ಸಚಿವಾಲಯವು ಶುಕ್ರವಾರ ಉದ್ಯಮಗಳಿಗೆ ಸೂಚಿಸಿದೆ.ಕಳೆದ ಹಲವು ತಿಂಗಳಿನಿಂದ ವಿವಿಧ ಖಾದ್ಯ ತೈಲಗಳ ಬೆಲೆಯು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕುಸಿದಿದ್ದರೂ ಸಹಿತ ದೇಶೀಯ ಮಾರುಕಟ್ಟೆಯಲ್ಲಿನ ಬೆಲೆಗಳು ಕಡಿಮೆಯಾಗುತ್ತಿಲ್ಲ. ಹೀಗಾಗಿ ಅಡುಗೆ ಎಣ್ಣೆ ಬೆಲೆಯನ್ನು ಕಡಿತ ಮಾಡುವಂತೆ ಸೂಚಿಸಿಲಾಗಿದೆ.(ಏಜೆನ್ಸೀಸ್​)

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *