TV 46 ಮಲೆನಾಡು ನ್ಯೂಸ್ ಸಕಲೇಶಪುರ: ಸಕಲೇಶಪುರ ಪಟ್ಟಣದಲ್ಲಿ ಲಯನ್ಸ್ ಇಂಟರ್ ನ್ಯಾಷನಲ್ ಸೇವಾ ಸಮಿತಿಯ ವತಿಯಿಂದ ಜೀಣ್ರೋದ್ದರ ಗೊಂಡಿರುವ ಹಿಂದೂ ರುಧ್ರ ಭೂಮಿ ಜೂನ್ 10 ರಂದು ಲೋಕಾರ್ಪಣೆ ಆಗಲಿದ್ದು ಈ ಕಾರ್ಯಕ್ರಮಕ್ಕೆ ಉಪವಿಭಾಗಾಧಿಕಾರಿ ಅನ್ಮೋಲ್ ಜೈನ್, ಲಯನ್ ಹಾಗೂ ಶಾಸಕ ಮಂಜುನಾಥ್ ,ಹಿಂದೂ ರುಧ್ರ ಭೂಮಿ ಟ್ರಸ್ಟ್ ಅಧ್ಯಕ್ಷ ಜೈ ಮಾರುತಿ ದೇವರಾಜು ,ಲಯನ್ ಜಿಲ್ಲಾ ರಾಜ್ಯಪಾಪರಾದ ಡಾ.ಮೆಲ್ವಿನ್ ಡಿಸೋಜ, ಪ್ರಥಮ ಉಪ ಜಿಲ್ಲಾ ರಾಜ್ಯಪಾರಾದ ಬಿ.ಎಂ.ಭಾರತಿ, ದ್ವಿತೀಯ ಜಿಲ್ಲಾ ರಾಜ್ಯಪಾಲರಾದ ಲಯನ್ ಕುಡ್ಪಿ ಅರವಿಂದ್ ಶೆಣೈ ಜಿಲ್ಲಾ ಸಂಪುಟ ಕಾರ್ಯದರ್ಶಿ ಅನೀಲ್ ಕುಮಾರ್, ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದು ಈ ಕಾರ್ಯಕ್ರಮಕ್ಕೆ ಸಾರ್ವಜನಿಕ ಬಂದುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಬೇಕಾಗಿ ಲಯನ್ಸ್ ಇಂಟರ್ ನ್ಯಾಷನಲ್ ಸಂಸ್ಥೆಯ ಜಿಲ್ಲಾ ಗವರ್ನರ್ ಸಂಜಿತ್ ಶೆಟ್ಟಿ ಹೇಳಿದ್ದಾರೆ.ಮಂಗಳವಾರ ಪಟ್ಟಣದ ಹಿಂದೂ ರುಧ್ರಭೂಮಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಸಿ ಮಾತಾನಡಿದ ಅವರುಲಯನ್ಸ್ ಎಂದೊಡನೆ ಕಣ್ಣೆದುರಿಗೆ ಬರುವುದು ಕಾಡಿನ ರಾಜ ಸಿಂಹದ ಗಾಂಭೀರ್ಯತೆ, ಗುರಿಯೆಡೆಗಿನ ನಿಖರತೆ ಹಾಗೂ ಕಾರ್ಯ ಸಾಧನೆಯ ಪ್ರಖರತೆ. ಈ ವಿಶೇಷತೆಗಳನ್ನೇ ಸೇವಾ ಕ್ಷೇತ್ರದಲ್ಲಿ ಮೈಗೂಡಿಸಿಕೊಂಡಿರುವ 106 ವರ್ಷಗಳ ಇತಿಹಾಸದ, 200ಕ್ಕೂ ಅಧಿಕ ದೇಶಗಳಲ್ಲಿ ಅಸ್ತಿತ್ವ ಹೊಂದಿರುವ ಲಯನ್ಸ್ ಅಂತಾರಾಷ್ಟ್ರೀಯ ಸೇವಾ ಸಂಸ್ಥೆ ವಿಶ್ವದಲ್ಲಿಯೇ ಅಗ್ರ ಕ್ರಮಾಂಕದ ಸರ್ಕಾರೇತರ ಸೇವಾ ಸಂಸ್ಥೆ ಎಂಬ ಮಾನ್ಯತೆ ಪಡೆದಿರುವುದು ಹೆಗ್ಗಳಿಕೆ. ಇಂತಹ ಸಂಸ್ಥೆಯ ಮಂಗಳೂರು, ಹಾಸನ, ಚಿಕ್ಕಮಗಳೂರು ಹಾಗೂ ಮಡಿಕೇರಿಯಂತಹ ನಾಲ್ಕು ಕಂದಾಯ ಜಿಲ್ಲೆಗಳನ್ನೊಳಗೊಂಡಿರುವ ‘ಲಯನ್ಸ್ ಜಿಲ್ಲೆ 317 ಡಿ’ ಯ ಜಿಲ್ಲಾ ರಾಜ್ಯಪಾಲನಾಗಿ 2022-23ರಲ್ಲಿ ಸೇವೆ ಸಲ್ಲಿಸುವ ಸದಾವಕಾಶ ದೊರೆತದ್ದು ನನ್ನ ಪಾಲಿನ ಸೌಭಾಗ್ಯವೇ ಸರಿ. ಅದರ ಭಾಗವಾಗಿ, ಈಗ ಸಕಲೇಶಪುರದ ಪುಣ್ಯ ಮಣ್ಣಿನಲ್ಲಿ ಹಮ್ಮಿಕೊಂಡಿರುವ ನಮ್ಮ ಲಯನ್ಸ್ ಜಿಲ್ಲೆಯ ಸೇವಾ ಕಾರ್ಯದ ಯೋಜನೆ ಮುಂದಿನ ದಿನಗಳಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹುದು.ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ. ಇವೆರಡರ ನಡುವಿನ ಒಂದಷ್ಟು ದಿನಗಳ ಬದುಕು ಕೈಯೊಳಗಿರುವ ಬಂಗಾರ. ಮನುಷ್ಯ ಬಾಳನ್ನು ಅದೆಷ್ಟು ಗೌರವಿಸುವನೋ, ಅದಕ್ಕಿಂತ ಹೆಚ್ಚಿನ ಗೌರವ ತನ್ನ ಸಾವಿಗೂ ಸಿಗಬೇಕೆಂದು ಬಯಸುವುದು ಸಹಜ. ಸಾವು ಎನ್ನುವುದು ಎಲ್ಲರಿಗೂ ಸಮಾನ, ಗೌರವಯುತವಾದ ಅಂತ್ಯಸಂಸ್ಕಾರ, ಶ್ರೇಷ್ಠ ಬದುಕಿಗೆ ನೀಡುವ ಗೌರವಯುತ ಅಂತಿಮ ವಿದಾಯ. ಎಲ್ಲರ ಬದುಕಿಗೂ ಒಂದು ಗೌರವಯುತವಾದ ಅಂತಿಮ ವಿದಾಯ ದಕ್ಕುವ ನೆಲೆಯಲ್ಲಿ, ಹೆಸರಿನಲ್ಲೇ ‘ಈಶ್ವರನನ್ನು ಹೊಂದಿರುವ ಸಕಲೇಶಪುರದಲ್ಲಿ ಸುಸಜ್ಜಿತವಾದ ರುದ್ರಭೂಮಿಯನ್ನು ಸುಮಾರು 35 ಲಕ್ಷಕ್ಕೂ ಹೆಚ್ಚಿನ ವೆಚ್ಚದಲ್ಲಿ ಪುನರುತ್ಥಾನದ ಕಾಯಕಲ್ಪ ಒದಗಿಸುತ್ತಿರುವುದು, ಸಮಾಜದ ಕಟ್ಟಕಡೆಯ ಜನರಿಗೂ ಸೇವೆ ದೊರೆಯಬೇಕೆನ್ನುವ ಲಯನ್ಸ್ ಸೇವಾ ಸಂಸ್ಥೆಯ ಶ್ರೇಷ್ಠ ನಿಲುವಿಗೆ ಸಾಕ್ಷಿ ಸ್ವರೂಪ. ಈ ಮೂಲಕ ಅನಿವಾರ್ಯವಾಗಿ ಎರಗುವ ಸಾವಿಗೂ ಗೌರವಯುತವಾದ ಮುಕ್ತಿಯನ್ನೊದಗಿಸುವಲ್ಲಿ ಲಯನ್ಸ್ ಸೇವಾ ಸಂಸ್ಥೆ ಕಾರಣವಾಗುತ್ತಿದೆ ಎಂಬ ಹೆಮ್ಮೆಯನ್ನು ತನ್ನದಾಗಿಸಿಕೊಂಡಿದೆ.ಎಂದರು.ಲಯನ್ಸ್‌ ಈ ಶಾಶ್ವತ ಯೋಜನೆ ಒಂದೆರಡು ದಿನದ ಕನಸಲ್ಲ. ನನ್ನ ಕರ್ಮಭೂಮಿ ಸಕಲೇಶಪುರದಲ್ಲಿ ಹಿಂದೂ ಮುಕ್ತಿಧಾಮ ಟ್ರಸ್ಟ್ ಕಾರ್ಯನಿರ್ವಹಣೆಯಲ್ಲಿದ್ದ ರುದ್ರಭೂಮಿಯನ್ನು ಆಧುನಿಕ ರೀತಿಯಲ್ಲಿ ನವೀಕರಿಸಿ ಸಮಾಜಕ್ಕೆ ಅರ್ಪಿಸಬೇಕೆನ್ನುವ ಹಲವಾರು ದಿವಸಗಳ ಕನಸು ನನ್ನದಾಗಿತ್ತು. ಈ ಕನಸು ನನಸಾಗುವುದಕ್ಕೆ ಹೆಗಲಿಗೆ ಹೆಗಲು ಕೊಟ್ಟು ಅವಿರತ ಶ್ರಮಪಟ್ಟವರು ಅದೆಷ್ಟೋ ಮಂದಿ. ಆರ್ಥಿಕತೆಯ ಕ್ರೋಢೀಕರಣದಲ್ಲಿ ನನ್ನ ಕೈ ಹಿಡಿದವರು ಕೂಡ ಹತ್ತು ಹಲವಾರು ಮಂದಿ ಹಿಂದೂ ರುದ್ರಭೂಮಿಯಾದರೂ ಇದಕ್ಕೊಲಿದ ನೆರವು ಧರ್ಮಾತೀತವಾದುದು. ನನ್ನಿಂದಾದಷ್ಟು ಮಾತ್ರವಲ್ಲದೆ, ನನ್ನಂತೆ ಇರುವ ಒಂದಷ್ಟು ಸಮಾನ ಮನಸ್ಕ ಲಯನ್ಸ್ ಸದಸ್ಯರಿಂದ ದೇಣಿಗೆ ಸಂಗ್ರಹಿಸಿ, ಉನ್ನತ ಮಟ್ಟದಲ್ಲಿ ಈ ರುದ್ರಭೂಮಿಯ ಪುನರ್ ನಿರ್ಮಾಣಕ್ಕೆ ನಾಂದಿ ಹಾಡಿರುವುದು ಸಂತೃಪ್ತಿಯ ಭಾವವನ್ನು ನೀಡಿದೆ ಎಂದರುಒಟ್ಟಿನಲ್ಲಿ ಜಾತಿ, ಮತ, ಸಂಪ್ರದಾಯಗಳನ್ನೂ ಮೀರಿ ತಲೆ ಎತ್ತಿ ನಿಂತು ನಿರ್ಮಾಣಗೊಂಡಿರುವ ಸಕಲೇಶಪುರದ ರುದ್ರಭೂಮಿ ‘ಮುಕ್ತಿಧಾಮ’ವು ಲಯನ್ಸ್ ಸೇವಾ ಸಂಸ್ಥೆಯ ಒಂದು ಶಾಶ್ವತ ಹೆಮ್ಮೆಯಾಗಲಿದೆ ಹಾಗೂ ಸಾರ್ವಜನಿಕ ಬದುಕಿನ ನಿತ್ಯಸ್ಮರಣೆಯ ಯೋಜನೆಯಾಗಲಿದೆ ಎನ್ನುವುದು ಅಕ್ಷರಶಃ ಸತ್ಯ. ಈ ಮಹತ್ಕಾರ್ಯಕ್ಕೆ ಅನುವು ನೀಡಿರುವ ‘ಹಿಂದೂ ಮುಕ್ತಿಧಾಮ ಟ್ರಸ್ಟ್’ಗೆ ಕೃತಜ್ಞತೆಗಳನ್ನು ಸಲ್ಲಿಸುತ್ತಾ, 2023ರ ಜೂನ್ ತಿಂಗಳ 10ನೇ ತಾರೀಕಿನಂದು ಲೋಕಾರ್ಪಣೆಗೊಳ್ಳಲಿರುವ ಇಂತಹ ಅಭೂತಪೂರ್ವ ಪುಣ್ಯದ ಸೇವಾ ಯೋಜನೆಯ ಕಾರ್ಯಕ್ರಮದಲ್ಲಿ ಸಕಲೇಶಪುರದ ಎಲ್ಲಾ ಸಾರ್ವಜನಿಕ ಬಂಧುಗಳು ಭಾಗವಹಿಸುವ ಮೂಲಕ ಈ ಮಹತ್ಕಾರ್ಯಕ್ಕೆ ಸಾಕ್ಷಿಯಾಗಬೇಕೆಂದು ಕಳಕಳಿಯ ವಿನಂತಿ ನನ್ನದು ಎಂದರುಈ ಸಂದರ್ಭದಲ್ಲಿ ಹಿಂದೂ ಮುಕ್ತಿದಾಮ ಟ್ರಸ್ಟ್ ನ ಅಧ್ಯಕ್ಷ ಜೈ ಮಾರುತಿ ದೇವರಾಜ್ ಮಾತನಾಡಿ ನಾನು ಹೆಚ್ಚು ಮಾತನಾಡಲು ಹೋಗೋದಿಲ್ಲ ಕೆಲವು ಅರ್ಥಗರ್ಭಿತ ಮಾತುಗಳನ್ನು ನಿಮ್ಮ ಮುಂದೆ ಹಂಚಿಕೊಳ್ಳಲು ಇಷ್ಟಪಡುತ್ತೇನೆ ಒಳ್ಳೆಯವರಿಗೆ ಅಧಿಕಾರ ಸಿಕ್ಕಿದರೆ ಸಮಾಜಕ್ಕೆ ಒಳ್ಳೆದು ಅಂತ ಹೇಳ್ತಾರೆ ಭ್ರಷ್ಟರಿಗೆ ಅಧಿಕಾರ ಸಿಕ್ಕರೆ ಅಬೂಕರಿಗೆ ಒಳ್ಳೆಯದು ಅಂತ ಹೇಳ್ತಾರೆ ಹಲವಾರು ವರ್ಷಗಳಿಂದ ಸಕಲೇಶಪುರದ ಮುಕ್ತಿ ಧಾಮ ಟ್ರಸ್ಟ್ ನವರು ನಮ್ಮ ಕೈಲಾದ ಕೆಲಸವನ್ನು ಶಕ್ತಿ ಮೀರಿ ಮಾಡಿಕೊಂಡು ಬಂದಿದ್ದೇವೆ ಹೆಚ್ಚಿನದಾಗಿ ಖರ್ಚು ಮಾಡಲು ಮುಕ್ತಿದಾಮಕ್ಕೆ ಯಾವುದೇ ಅನುದಾನಗಳು ಇಲ್ಲದ ಕಾರಣ , ಆದರೂ ಸಹ ಕೆಲವು ಅನುದಾನಗಳನ್ನು ತಂದು ನಮ್ಮ ಕೈಲಾದ ಕೆಲಸವನ್ನು ಮಾಡಿಕೊಂಡು ಬಂದಿದ್ದೇವೆ .ಇದೆ ಸಂದರ್ಭದಲ್ಲಿ ಒಂದು ದಿವಸ ಲಾಯನ್ಸ್ ನ ರಾಜ್ಯಪಾಲರಾದ ಸಂಜಿತ್ ಶೆಟ್ಟಿ ಅವರು ಸಿಕ್ಕಿ ನನಗೆ ನನ್ನ ಜೀವನದಲ್ಲಿ ಒಂದು ಒಳ್ಳೆಯ ಜವಾಬ್ದಾರಿ ಸಿಗುತ್ತಿದೆ ಹಾಗಾಗಿ ನಾನು ನಮ್ಮೂರಾದ ಸಕಲೇಶಪುರಕ್ಕೆ ಏನಾದರೂ ಒಂದು ಒಳ್ಳೆಯ ಕೆಲಸ ಮಾಡಬೇಕು ಎಂದು ಹೇಳಿದರು ಆಗ ಮುಕ್ತಿಧಾಮ ಟ್ರಸ್ಟ್ ನ ನಾವೆಲ್ಲರು ಸೇರಿ ಇದರ ಪ್ರಯೋಜನವನ್ನು ಪಡೆದುಕೊಳ್ಳೋಣ ಎಂದು ತೀರ್ಮಾನಿಸಿ ಈ ಹಿಂದು ಮುಕ್ತಿ ಧಾಮದ ಸಂಪೂರ್ಣ ಜವಾಬ್ದಾರಿ ಇದೆ ಎಂದರು. . ಹಿಂದೆ ನಮ್ಮ ಅಧ್ಯಕ್ಷರು ಮಾತನಾಡಿದ ಹಾಗೆ ಸಾವು ಖಚಿತ ಹುಟ್ಟು ಅನಿಶ್ಚಿತ ಇದು ಸತ್ಯ ಏನೇ ಮಾಡಿದರು ಎಷ್ಟೇ ಸಂಪಾದನೆ ಮಾಡಿದರು ಒಂದು ದಿನ ಹೋಗುವ ಜಾಗ ಮುಕ್ತಿದಾಮವೇ ಅಂತಹ ಜಾಗಕ್ಕೆ ಏನಾದರೂ ಮಾಡಿದರೆ ಶಾಶ್ವತವಾಗಿ ನಾವು ಮಾಡಿದ ಕರ್ಮ ಕಟಾಕ್ಷಗಳು ಬಗೆಹರಿಯುತ್ತವೆ ಎಂದು ಹಿರಿಯರು ಹೇಳಿದ್ದಾರೆ. ಅಂತಹ ಕೆಲಸವನ್ನು ನಾವು ಮಾಡಿದ್ದೇವೆ ಹಾಗೆ ಹೆಚ್ಚಿನ ಶಕ್ತಿಮೀರಿ ಲಯನ್ಸ್ ಸಂಸ್ಥೆಯವರು ಮಾಡಿದ್ದಾರೆ ಈ ಒಂದು ಕೆಲಸ ಸುಮಾರು 35 .36 ಲಕ್ಷ ಅಂದಾಜಿನಲ್ಲಿ ಕೆಲಸ ಮಾಡಲು ಒಪ್ಪಿಗೆ ಸೂಚಿಸಿದರು .ಒಳ್ಳೆಯವರಿಗೆ ಅಧಿಕಾರ ಸಿಕ್ಕರೆ ಒಳ್ಳೆ ಕೆಲಸವೆ ಆಗುತ್ತದೆ ಇದಕ್ಕೆ ಲಯನ್ಸ್ ರಾಜ್ಯಪಾಲರಾದ ಸಂಜಿತ್ ಶೆಟ್ಟಿ ರವರು ಸಾಕ್ಷಿ ಅವರಿಗೆ ಒಂದು ದೊಡ್ಡ ಜವಾಬ್ದಾರಿ ಸಿಕ್ಕಿದೆ ಆ ಜವಾಬ್ದಾರಿಯನ್ನು ವ್ಯವಸ್ಥಿತವಾಗಿ ಉಪಯೋಗಿಸಿಕೊಳ್ಳುತ್ತಿದ್ದಾರೆ ಶಾಶ್ವತವಾಗಿರುವ ಈ ಹಿಂದೂ ಮುಕ್ತಿದಾಮಕ್ಕೆ ಶಾಶ್ವತವಾದಂತಹ ಕೊಡುಗೆಯನ್ನು ಕೊಟ್ಟಿದ್ದಾರೆ. ಅವರಿಗೆ ನಮ್ಮ ಹಿಂದೂ ಮುಕ್ತಿದಾಮ ಟ್ರಸ್ಟ್ ಹಾಗೂ ಸಕಲೇಶಪುರ ಜನತೆಯ ವತಿಯಿಂದ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇನೆ.ಎಂದರು.ಈ ಸಂದರ್ಭದಲ್ಲಿ ಸಕಲೇಶಪುರ ಲಯನ್ಸ್ ಅಧ್ಯಕ್ಷ ಜಯಶಂಕರ್, ಉಪಾಧ್ಯಕ್ಷ ಗಿರೀಶ್ ಕುಮಾರ್ ಕಾರ್ಯದರ್ಶಿ ವಿಶ್ವನಾಥ, ಲಯನ್ಸ್ ಜಿಲ್ಲಾ ಸದಸ್ಯ ಮೋಹನ್ ದಾಸ್ ಕಿಲ್ಲೆ , ಹಿಂದು ಮುಕ್ತಿದಾಮ ಕಾರ್ಯದರ್ಶಿ ಉಮೇಶ್, ಸತ್ಯನಾರಾಯಣ ಗುಪ್ತ, ಕರಿಯಣ್ಣ, ಗೋವಿಂದ ನಾಯ್ಡು, ಎನ್ ಎಸ್ ವಿಠಲ್, ದಿನೇಶ್, ಸಿ ಪಿ ಪ್ರಸನ್ನ ಕುಮಾರ್ ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *