TV 46 ಮಲೆನಾಡು ನ್ಯೂಸ್ ಸಕಲೇಶಪುರ :- ಮಂಗಳವಾರ ಪತ್ರಕರ್ತರ ಸಂಘದ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಸಬಾ ಹೊಬಳಿ ಬೆಳೆಗಾರರ ಸಂಘದ ಅಧ್ಯಕ್ಷ ಕೌಡಳ್ಳಿ ಲೋಹಿತ್ ಇವರು ಈ ಭಾಗದ ಬಹುಮುಖ್ಯ ಸಮಸ್ಯೆ ಯಾದ ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಿಕೊಡ ಬೇಕು, ಈ ಹಿಂದಿನ ರಾಜ್ಯ ಸರ್ಕಾರ 25 ಎಕರೆ ವರಗಿನ ಸರ್ಕಾರ ಒತ್ತುವರಿ ಜಮೀನನ್ನು ಗುತ್ತಿಗೆ ಆಧಾರದಲ್ಲಿ ನೀಡಲು ಅಂಗಿಕರಿಸಿದ್ದು ಇದನ್ನು ಕಾರ್ಯಗತಗೊಳಿಸಲು ಮತ್ತು ಕಸಬಾ ಹೋಬಳಿ ನಾಡ ಕಚೇರಿ, ಸರ್ವೆ ಕಛೇರಿ, ಉಪನೊಂದಣಾಧಿಕಾರಿ ಕಛೇರಿ ಯನ್ನು ಕೂಡಲೇ ಮಿನಿ ವಿಧಾನ ಸೌಧಕ್ಕೆ ಸ್ಥಳಾಂತರ ಮಾಡಬೇಕು ಹಾಗೂ ನಗರದ ವಾಹನ ದಟ್ಟನೆ ಅಧಿಕವಾಗಿರುತ್ತದೆ ವಾಹನ ನಿಲುಗಡೆ ವ್ಯವಸ್ಥೆಯನ್ನು ಸರಿಪಡಿಸುವುದು ಮತ್ತು ರಸ್ತೆ ಅಭಿವೃದ್ಧಿ ಗೊಳಿಸುವಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವುದು, ಎಲ್ಲಾ ಗ್ರಾಮಗಳಲ್ಲಿ ಪೋಡಿ ಕಾರ್ಯವನ್ನು ತ್ವರಿತಗತಿಯಲ್ಲಿ ನಡೆಸುವಂತೆ ಇಲಾಖೆ ಗಮನ ಹರಿಸುವುದು, ಹಾಗೂ ರೈತರು ಬ್ಯಾಂಕ್ ಗಳಲ್ಲಿ ಸಾಲ ಪಡೆಯುವಾಗ ಮಾರ್ಟಿಗೇಜ್ ಚಾರ್ಜ್, ಪ್ರೊಸೆಸಿಂಗ್ ಚಾರ್ಜ್, ಇನ್ಸ್ಷಕ್ಷೇನ್ ಚಾರ್ಜ್ ಎಂದು ಶುಲ್ಕಗಳನ್ನು ವಿಧಿಸುತ್ತಿದ್ದು ಇದಕ್ಕೆ ಕಡಿವಾಣ ಹಾಕ ಬೇಕು ಎಂದು ಇದರಿಂದ ರೈತರಿಗೆ ಆರ್ ಬಿ ಐ ಮತ್ತು ಕಾಫಿ ಮಂಡಳಿಯಿಂದ ಬಡ್ಡಿ ಸಹಾಯಧನ ನೀಡಲಾಗುತ್ತಿತ್ತು ಆದರೆ ಬಡ್ಡಿ ಸಹಾಯಧನದ ಈ ಸರ್ಕಾರ ಸ್ಥಗಿತ ಗೊಳಿಸಿದ ಇದನ್ನು ಕಾರ್ಯ ಗೊಳಿಸಿ ಕೊಡ ಬೇಕಾಗಿ ಒತ್ತಾಯಿಸುತ್ತೆನೆ, ರೈತರಿಗೆ ಮಾರುಕಟ್ಟೆಯಲ್ಲಿ ದೊರಯುತ್ತಿರುವ ರಾಸಾಯನಿಕ ಗೊಬ್ಬರಗಳ ತೂಕದಲ್ಲಿ ಮೊಸ ನೆಡೆಯುತ್ತಿದ್ದು ರೈತರನ್ನು ವಂಚಿಸಲಾಗುತ್ತಿದೆ 50 ಕೇಜಿ ರಸಗೊಬ್ಬರ ಚೀಲದಲ್ಲಿ 3ರಿಂದ 5 ಕೆಜಿಯಷ್ಟು ತೂಕ ಕಡಿಮೆ ರೈತರಿಗೆ ಕೊಡುತ್ತಿದ್ದಾರೆ ಎಂದು ಹೇಳಿದರು ಈ ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ಚಂದ್ರಶೇಖರ, ಮಾಜಿ ಅಧ್ಯಕ್ಷ ಕೃಷ್ಣ ಮೂರ್ತಿ ,ವೈ ಎಸ್ ಗಿರೀಶ್, ಹೆಗ್ಗದ್ದೆ ಅಧ್ಯಕ್ಷ ರಾಕೇಶ್, ಆನೆ ಮಹಲ್ ಅದ್ಯಕ್ಷ ಪ್ರವೀಣ್ ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *