ಸಕಲೇಶಪುರ : ಪಟ್ಟಣದ ಕುಡುಗರಹಳ್ಳಿಯ ಮಿಲಿಟರಿ ಕ್ಯಾಂಪ್ ನಲ್ಲಿ ಮಧ್ಯಾಹ್ನದ ಊಟ ಸೇವಿಸಿದ. 35 ಮಂದಿ ಸೈನಿಕರು ಅಸ್ವಸ್ಥರಾಗಿ ಕ್ರಾಫರ್ಡ್ ಆಸ್ಪತ್ರೆಗೆ ದಾಖಲಾದ ಘಟನೆ ನಡೆಯಿತುಪಟ್ಟಣದ ಕುಡುಗರಹಳ್ಳಿ ಬಳಿ ಇರುವ ಕ್ಯಾಂಪ್ ನಲ್ಲಿರುವ ಚಾಲನಾ ತರಭೇತಿಗೆ ಬಂದಿರುವ ಸೈನಿಕರು ಮದ್ಯಾಹ್ನ ಕ್ಯಾಂಪ್ ನಲ್ಲೆ ತಾಯಾರಾದ ಆಹಾರವನ್ನು ಸೇವಿಸಿದ ಸುಮಾರು 35 ಸೈನಿಕರು ಊಟ ಮುಗಿಸಿದ ನಂತರ ಕೆಲಹೊತ್ತಲ್ಲೆ ಅಸ್ವಸ್ಥರಾದ ಸೈನಿಕರನ್ನು ಸಕಲೇಶಪುರ ಕ್ರಾಫರ್ಡ್ ಆಸ್ಪತ್ರೆಗೆ ದಾಖಲಿಸಲಾಯಿತು ಸುದ್ದಿ ತಿಳಿಯುತ್ತಿದ್ದಂತೆ ಶಾಸಕ ಸಿಮೆಂಟ್ ಮಂಜುನಾಥ್ ಅವರು ಆಸ್ಪತ್ರೆಗೆ ಬೇಟಿನೀಡಿ ಸೈನಿಕರ ಆರೋಗ್ಯ ವಿಚಾರಿಸಿ ಅಸ್ವಸ್ಥಗೊಂಡಿರುವ ಸೈನಿಕರಿಗೇ ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚನೆ ನೀಡಿದರು ನಂತರ ಎಲ್ಲಾ ಸೈನಿಕರು ಚಿಕಿತ್ಸೆ ಪಡೆದು ಕೆಲ ಸಮಯ ಆಸ್ಪತ್ರೆಯಲ್ಲಿ ದಾಖಲಾಗಿ ಕ್ಯಾಂಪ್ ಗೆ ಸುರಕ್ಷಿತವಾಗಿ ತೆರಳಿದರು .

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *